IND vs SA: ರಾಹುಲ್ ಸರಣಿಯಿಂದ ಔಟ್; ಪಂತ್, ಹಾರ್ದಿಕ್ ಪಾಂಡ್ಯ ಇಬ್ಬರಿಗೂ ಒಲಿದ ಅದೃಷ್ಟ!

ಟೀಮ್ ಇಂಡಿಯಾ ಸದ್ಯ ಭಾರತ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ಹೌದು, ಕಳೆದೆರಡು ತಿಂಗಳುಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಿರತರಾಗಿದ್ದ ಟೀಮ್ ಇಂಡಿಯಾ ಆಟಗಾರರು ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ಮುಖ ಮಾಡಿದ್ದು, ಮರಳಿ ಟೀಮ್ ಇಂಡಿಯಾ ಸೇವೆಗೆ ಸಜ್ಜಾಗಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಈ ಐದು ಪಂದ್ಯಗಳ ಸರಣಿಗೆ ತಂಡದ ಅನುಭವಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್ ಬುಮ್ರಾ ವಿಶ್ರಾಂತಿಯ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ಹೀಗಾಗಿ ಈ ಸರಣಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಮತ್ತು ಉಪನಾಯಕನ ಸ್ಥಾನವನ್ನು ರಿಷಭ್ ಪಂತ್‌ಗೆ ನೀಡಲಾಗಿತ್ತು. ಆದರೆ, ಇದೀಗ ಕೆಎಲ್ ರಾಹುಲ್ ಮೊದಲ ಪಂದ್ಯಕ್ಕಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ತೊಡೆ ಸಂದು ಗಾಯಕ್ಕೆ ಒಳಗಾಗಿದ್ದು, ಸರಣಿಯಿಂದಲೇ ಹೊರಬಿದ್ದಿದ್ದಾರೆ ಹಾಗೂ ಕುಲ್‌ದೀಪ್ ಯಾದವ್ ಕೂಡ ಗಾಯದ ಸಮಸ್ಯೆಗೊಳಗಾಗಿ ಹೊರಬಿದ್ದಿದ್ದಾರೆ.
ಹೀಗೆ ಕೆಎಲ್ ರಾಹುಲ್ ಟೂರ್ನಿಯಿಂದ ಹೊರಬಿದ್ದ ಕಾರಣ ಬಿಸಿಸಿಐ ಬದಲಿ ನಾಯಕ ಮತ್ತು ಉಪನಾಯಕರನ್ನು ನೇಮಿಸಿದ್ದು, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಗೆ ಬಯಸದೇ ಬಂದ ಭಾಗ್ಯ ದೊರೆತಂತಾಗಿದೆ. ಈ ಕುರಿತಾದ ಮಾಹಿತಿ ಮುಂದೆ ಇದೆ ಓದಿ..

ಪಂತ್ ಮತ್ತು ಪಾಂಡ್ಯಗೆ ಒಲಿದ ಅದೃಷ್ಟ
ಕೆಎಲ್ ರಾಹುಲ್ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಬಿಸಿಸಿಐ ನಾಯಕತ್ವದ ಜವಾಬ್ದಾರಿಯನ್ನು ಸರಣಿಗೆ ಈ ಹಿಂದೆ ಉಪನಾಯಕನಾಗಿ ಆಯ್ಕೆಯಾಗಿದ್ದ ರಿಷಭ್ ಪಂತ್ ಹೆಗಲಿದೆ ಹಾಕಿದೆ ಹಾಗೂ ಉಪನಾಯಕನ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಯಕನಾಗಿ ಮುನ್ನಡೆಸುವ ಅವಕಾಶವನ್ನು ರಿಷಭ್ ಪಂತ್ ಮತ್ತು ಉಪನಾಯಕ ಸ್ಥಾನವನ್ನು ಪಡೆದಿದ್ದಾರೆ.

ರಾಹುಲ್ ಇಲ್ಲ, ಆರಂಭಿಕರಾರು?
ಇನ್ನು ಕೆಎಲ್ ರಾಹುಲ್ ಅಲಭ್ಯರಾಗುವ ಮುನ್ನ ರಾಹುಲ್ ಜತೆ ಈ ಸರಣಿಯಲ್ಲಿ ಆರಂಭಿಕರಾಗಿ ಯಾವ ಆಟಗಾರ ಕಣಕ್ಕಿಳಿಯಬೇಕು ಎಂಬ ಗೊಂದಲಗಳು ಮೂಡಿದ್ದವು. ಆದರೆ, ಇದೀಗ ಕೆಎಲ್ ರಾಹುಲ್ ಅವರೇ ಅಲಭ್ಯರಾಗಿರುವ ಕಾರಣ ತಂಡದ ಪರ ಆರಂಭಿಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಉತ್ತಮ ಆರಂಭ ಮಾಡಿರುವ ಅನುಭವವಿರುವ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್, ನಾಲ್ಕನೇ ಕ್ರಮಾಂಕದಲ್ಲಿ ಪಾಂಡ್ಯಾ, ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಮತ್ತು ಆರನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ. ಕುಲ್‌ದೀಪ್ ಯಾದವ್ ಅಲಭ್ಯರಾಗಿದ್ದು, ಅಕ್ಷರ್ ಪಟೇಲ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ಹಾಗೂ ಮೂರು ವೇಗಿಗಳ ಆಯ್ಕೆಗೆ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಸದ್ಯ ಪ್ರಶ್ನೆಯಾಗಿದೆ.

ರಾಹುಲ್, ಕುಲ್‌ದೀಪ್ ಹೊರಬಿದ್ದ ನಂತರ ಹೀಗಿದೆ ಟೀಮ್ ಇಂಡಿಯಾ
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ಉಪನಾಯಕ ), ವೆಂಕಟೇಶ್ ಅಯ್ಯರ್, ವೈ ಚಾಹಲ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್ , ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications