Breaking: Ind vs SA: ಸ್ಫೋಟಕ ಆಟಗಾರನಿಗೆ ಕೊರೊನಾ ಪಾಸಿಟಿವ್; ಸರಣಿ ಮೇಲೆ ಕರಿನೆರಳು!

ಗುರುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಏಡೆನ್ ಮಾರ್ಕ್ರಾಮ್ ಅವರಿಗೆ ಕೋವಿಡ್ -19 ಪಾಸಿಟಿವ್ ಕಾಣಿಸಿಕೊಂಡಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಸರಣಿ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಿ ಯಾವುದೇ ಬಯೋ-ಬಬಲ್ ಇಲ್ಲ. ಹೀಗಾಗಿ ಆಟಗಾರರನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತಿದೆ. ಟಾಸ್ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅವರು ಏಡೆನ್ ಮಾರ್ಕ್ರಾಮ್‌ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಸುದ್ದಿ ಬಹಿರಂಗಪಡಿಸಿದರು.

ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸವನ್ನು ಕೈಗೊಂಡಿದ್ದು, 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಮುಖಾಮುಖಿ ನಡೆಸುತ್ತಿದೆ. ಈ ಸರಣಿಯ ಪ್ರಥಮ ಟಿಟ್ವೆಂಟಿ ಪಂದ್ಯ ಇಂದು (ಜೂನ್ 9) ದೆಹಲಿಯ ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಅತಿಥೇಯ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ.
ಟಾಸ್ ನಂತರ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ, "ನಾವು ಮೊದಲು ಬೌಲ್ ಮಾಡಲಿದ್ದೇವೆ. ನಾವು ಒಂದೆರಡು ದಿನಗಳ ಹಿಂದೆ ಇಲ್ಲಿ ಅಭ್ಯಾಸ ಪಂದ್ಯವನ್ನು ಆಡಿದ್ದೇವೆ ಮತ್ತು ಇಲ್ಲಿನ ವಿಕೆಟ್ ಬ್ಯಾಟ್ ಮಾಡಲು ಉತ್ತಮವಾಗಿದೆ ಎಂದು ನೋಡಿದೆವು. ಇದು ಆರಂಭದಲ್ಲಿ ಸ್ವಲ್ಪ ನಿಧಾನ ಮತ್ತು ದೊಗಲೆಯಾಗಿತ್ತು. ಆಶಾದಾಯಕವಾಗಿ ನಾವು ಅದನ್ನು ಬಳಸಿಕೊಳ್ಳಬಹುದು. ಭಾರತವನ್ನು ಕಡಿಮೆ ಸ್ಕೋರ್‌ಗೆ ನಿರ್ಬಂಧಿಸಿ ಮತ್ತು ಅದನ್ನು ಬೆನ್ನಟ್ಟಬಹುದು," ಎಂದರು.
"ಏಡೆನ್ ಮಾರ್ಕ್ರಾಮ್ ಅವರು ಕೊರೊನಾ ವೈರಸ್ ಪಾಸಿಟಿವ್‌ಗೆ ತುತ್ತಾಗಿದ್ದಾರೆ. ಆದ್ದರಿಂದ ಇಂದಿನ ಪಂದ್ಯದ ಆಯ್ಕೆಗೆ ಲಭ್ಯವಿರಲಿಲ್ಲ. ಸ್ಟಬ್ಸ್ ಆಡುತ್ತಿದ್ದು ಮತ್ತು ಇದು ಅವರಿಗೆ ಚೊಚ್ಚಲ ಪಂದ್ಯವಾಗಿದೆ. ನಮ್ಮಲ್ಲಿ ಇಬ್ಬರು ಆಲ್ ರೌಂಡರ್ ಗಳಿದ್ದಾರೆ; ಡ್ವೈನ್ ಪ್ರಿಟೋರಿಯಸ್ ಮತ್ತು ವೇಯ್ನ್ ಪಾರ್ನೆಲ್ ಕೂಡ ತಂಡದಲ್ಲಿ ಆಡುತ್ತಾರೆ".
"ಇದು ಒಂದು ಪ್ರಮುಖ ಸರಣಿಯಾಗಿದೆ. ಏಕೆಂದರೆ, ಇದು ಆಸ್ಟ್ರೇಲಿಯಾದಲ್ಲಿ ಮುಂಬರುವ ವಿಶ್ವಕಪ್‌ಗೆ ತಯಾರಿಯಾಗಿದೆ. ನಮಗೆ ಇದು ಆವೇಗವನ್ನು ನಿರ್ಮಿಸಲು ಆತ್ಮವಿಶ್ವಾಸವನ್ನು ನಿರ್ಮಿಸಲಿದೆ," ಎಂದು ಟಾಸ್ ಸಮಯದಲ್ಲಿ ಟೆಂಬಾ ಬವುಮಾ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications