Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs SA: ಭಾರತ 2ನೇ ಇನ್ನಿಂಗ್ಸ್‌ 174ರನ್‌ಗಳಿಗೆ ಆಲೌಟ್, ದಕ್ಷಿಣ ಆಫ್ರಿಕಾ ಗೆಲುವಿಗೆ 305ರನ್‌ಗಳ ಗುರಿ

Mohamad Siraj

ಸೆಂಚುರಿಯನ್ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ 174ರನ್‌ಗಳಿಗೆ ಆಲೌಟ್ ಆಗಿದ್ದು, ದಕ್ಷಿಣ ಆಫ್ರಿಕಾ ಗೆಲುವಿಗೆ 305ರನ್ ಟಾರ್ಗೆಟ್ ನೀಡಿದೆ.

ಮೂರನೇ ದಿನದಾಟದಂತ್ಯಕ್ಕೆ ಓಪನರ್ ಮಯಾಂಕ್ ಅಗರ್ವಾಲ್ (4) ವಿಕೆಟ್ ಕಳೆದುಕೊಂಡು 18 ರನ್ ಕಲೆಹಾಕಿದ್ದ ಭಾರತವು ನಾಲ್ಕನೇ ದಿನದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಎಡವಿತು. ನೈಟ್ ವಾಚ್‌ಮನ್ ಆಗಿ ಬಂದಿದ್ದ ಶಾರ್ದೂಲ್ ಠಾಕೂರ್ 10 ರನ್‌ಗಳಿಸಿ ಕಗಿಸೊ ರಬಾಡ ಬೌಲಿಂಗ್‌ನಲ್ಲಿ ಔಟಾದರು. ಇದರ ಬೆನ್ನಲ್ಲೇ ಮೊದಲ ಇನ್ನಿಂಗ್ಸ್‌ ಶತಕ ಸಿಡಿಸಿದ್ದ ಕೆ.ಎಲ್ ರಾಹುಲ್ 23ರನ್‌ಗಳಿಸಿದ್ದಾಗ ಲುಂಗಿ ಎನ್‌ಗಿಡಿ ಬೌಲಿಂಗ್‌ನಲ್ಲಿ ಡೀನ್ ಎಲ್ಗರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ನಾಯಕ ವಿರಾಟ್ ಕೊಹ್ಲಿ ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. ಮೊದಲ ಇನ್ನಿಂಗ್ಸ್‌ನಂತೆ ಎರಡನೇ ಇನ್ನಿಂಗ್ಸ್‌ನಲ್ಲೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ಕೊಹ್ಲಿ ಎಡವಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಮಾರ್ಕೊ ಜಾನ್ಸೆನ್ ದಾಳಿಯಲ್ಲಿ ವಿಕೆಟ್ ಕೀಪರ್‌ ಕ್ವಿಂಡನ್ ಡಿಕಾಕ್‌ಗೆ ಕ್ಯಾಚಿತ್ತು 18ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು. ಇದ್ರ ಬೆನ್ನಲ್ಲೇ ತಾಳ್ಮೆಯ ಆಟವಾಡ್ತಿದ್ದ ಚೇತೇಶ್ವರ್ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲೂ ತಂಡದ ಕೈ ಹಿಡಿಯಲಿಲ್ಲ.

ಪೂಜಾರ 64 ಎಸೆತಗಳಲ್ಲಿ 16 ರನ್ ಕಲೆಹಾಕಿ ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸಿದ್ರು. ಅತ್ಯಂತ ದೃಢ ವಿಶ್ವಾಸದಿಂದ ಆಡುತ್ತಿದ್ದ ರಹಾನೆ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ತಂಡಕ್ಕೆ ಆಧಾರವಾದ್ರೂ ಎನ್ನುವಷ್ಟರಲ್ಲಿ , ಕೆಟ್ಟ ಹೊಡೆತಕ್ಕೆ ಕೈ ಹಾಕಿ ಮಾರ್ಕೊ ಜಾನ್ಸೆನ್ಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಪತನ ಮುಂದುವರಿಯಿತು.

ಇದಾದ ಬಳಿಕ ಆಲ್‌ರೌಂಡರ್ ಅಶ್ವಿನ್ 14ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರೆ, ಶೇಕಡಾ 100ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸ್ತಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕೆಟ್ಟ ಹೊಡೆತಕ್ಕೆ ಮುಂದಾಗಿ ರಬಾಡಗೆ ವಿಕೆಟ್ ಒಪ್ಪಿಸಿದ್ರು. 34 ಎಸೆತಗಳಲ್ಲಿ 34ರನ್ ಗಳಿಸಿದ ರಿಷಭ್ ಪಂತ್ ಔಟಾಗುತ್ತಿದ್ದಂತೆ ಭಾರತದ ಕೊನೆಯ ಆಸರೆಯು ಕೊನೆಗೊಂಡಿತು. ಅಂತಿಮವಾಗಿ ಟೀಂ ಇಂಡಿಯಾ 10 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ 130ರನ್ ಮುನ್ನಡೆ ಸಾಧಿಸಿದರ ಪರಿಣಾಮ ಭಾರತ 304ರನ್‌ಗಳ ಮುನ್ನಡೆ ಸಾಧಿಸಿದೆ.

ಭಾರತ ವಿರುದ್ಧ ಟೆಸ್ಟ್ ಗೆಲ್ಲಲು ದಕ್ಷಿಣ ಆಫ್ರಿಕಾ 305ರನ್ ಕಲೆಹಾಕಬೇಕಿದೆ. ಆದ್ರೆ ಭಾರತ ವಿರುದ್ಧ ಆಸ್ಟ್ರೇಲಿಯಾ ಹೊರತುಪಡಿಸಿ ಬೇರೆ ಯಾವುದೇ ತಂಡವು 300ಕ್ಕೂ ಹೆಚ್ಚು ರನ್ ಚೇಸ್ ಮಾಡಿ ಗೆಲುವು ಸಾಧಿಸಿಲ್ಲ. ಆಸ್ಟ್ರೇಲಿಯಾ 1977/78ರಲ್ಲಿ ಭಾರತ ವಿರುದ್ಧ 339ರನ್ ಚೇಸ್ ಮಾಡಿತ್ತು.

ಈಗಾಗಲೇ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 1 ರನ್‌ಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದೆ.

Story first published: Wednesday, December 29, 2021, 19:00 [IST]
Other articles published on Dec 29, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+