For Quick Alerts
ALLOW NOTIFICATIONS  
For Daily Alerts
 

Ind vs SA: 4ನೇ ಪಂದ್ಯದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮೇಲೆ ಭಾರತದ ನಿರ್ಣಾಯಕ ಫಲಿತಾಂಶ

Ind vs SA: India Focused on Rishabh Pant’s Batting in 4th T20 Match in Rajkot

ಶುಕ್ರವಾರ, ಜೂನ್ 17ರಂದು ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ, ಸರಣಿಯನ್ನು ಜೀವಂತವಾಗಿಡಲು ರಣತಂತ್ರ ರೂಪಿಸುತ್ತಿದೆ.

ಆತಿಥೇಯ ತಂಡ ಸೋಮವಾರ ವಿಶಾಖಪಟ್ಟಣದಲ್ಲಿ ಪುಟಿದೆದ್ದರು ಮತ್ತು ಸರಣಿಯನ್ನು ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾವನ್ನು 46 ರನ್‌ಗಳಿಂದ ಸೋಲಿಸಿದರು. ಆದರೂ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತ ನಂತರ ಅವರು 1-2 ರಿಂದ ಹಿನ್ನಡೆ ಅನುಭವಿಸಬೇಕಾಗಿದೆ.

ಮೊದಲೆರಡು ಟಿ20 ಪಂದ್ಯಗಳಲ್ಲಿ ಸಾಧಾರಣ ಬೌಲಿಂಗ್ ನಂತರ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 131 ರನ್‌ಗಳಿಗೆ ಆಲೌಟ್ ಮಾಡಿದರು. ಈ ಬಿಗುವಿನ ದಾಳಿಯಿಂದಾಗಿ ಭಾರತವು ರಾಜ್‌ಕೋಟ್ ಟಿ20 ಪಂದ್ಯಕ್ಕೆ ಹೆಚ್ಚು ಆತ್ಮವಿಶ್ವಾಸದಿಂದ ಮುನ್ನಡೆಯುತ್ತದೆ.

Ind vs SA: India Focused on Rishabh Pant’s Batting in 4th T20 Match in Rajkot

ಭುವನೇಶ್ವರ್ ಕುಮಾರ್ ಭಾರತಕ್ಕೆ ಎದ್ದುಕಾಣುವ ಬೌಲರ್ ಆಗಿದ್ದರೆ, ಹರ್ಷಲ್ ಪಟೇಲ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಫಾರ್ಮ್‌ಗೆ ಮರಳಿರುವುದು ರಿಷಭ್ ಪಂತ್ ಹುಡುಗರಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಮೊದಲ ಎರಡು ಸೋಲುಗಳ ಹೊರತಾಗಿಯೂ ತಂಡದ ಮ್ಯಾನೇಜ್‌ಮೆಂಟ್ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿದ್ದಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಸಾಧಾರಣವಾಗಿ ಕಾಣುತ್ತಿದ್ದ ಚಹಲ್ ಮೂರನೇ ಪಂದ್ಯದಲ್ಲಿ 3/30 ಗಳಿಸಿದರೆ, ಹರ್ಷಲ್ ಪಟೇಲ್ 4 ವಿಕೆಟ್ ಕಬಳಿಸಿದರು.

ವಿಶಾಖಪಟ್ಟಣದ ಪಂದ್ಯದಿಂದ ಭಾರತಕ್ಕೆ ಮತ್ತೊಂದು ದೊಡ್ಡ ಪ್ಲಸ್ ಎಂದರೆ ರುತುರಾಜ್ ಗಾಯಕ್ವಾಡ್ ಅವರ ಫಾರ್ಮ್‌ಗೆ ಮರಳಿರುವುದು. ನವದೆಹಲಿ ಮತ್ತು ಕಟಕ್‌ನ ಪಂದ್ಯದಲ್ಲಿ ಹೆಣಗಾಡುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್‌ನ ಯುವ ಆರಂಭಿಕ ಆಟಗಾರ ಗಾಯಕ್ವಾಡ್ ವೇಗದ ಫಿಫ್ಟಿ ಬಾರಿಸಿದರು. ಮತ್ತೊಂದೆಡೆ ಇಶಾನ್ ಕಿಶನ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೇವಲ 3 ಪಂದ್ಯಗಳಲ್ಲಿ 164 ರನ್ ಗಳಿಸಿದ್ದಾರೆ ಮತ್ತು ಸ್ಥಿರವಾದ ರನ್ ಮೂಲಕ ಐಸಿಸಿ ಶ್ರೇಯಾಂಕಗಳ ಅಗ್ರ 10 ರೊಳಗೆ ಪ್ರವೇಶಿಸಲು ಸಹಾಯವಾಗಿದೆ.

Ind vs SA: India Focused on Rishabh Pant’s Batting in 4th T20 Match in Rajkot

ಕ್ಯಾಪ್ಟನ್ ರಿಷಭ್ ಪಂತ್ ಫೈರ್ ಆಗಬಹುದೇ?
ಕಡಿಮೆ ಆಟದ ಸ್ವರೂಪದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆಯಾದರೂ, ನಾಯಕ ಪಂತ್ ಮೇಲೆ ಗಮನ ನಂಬಿಕೆ ಇಡಲಾಗದೆ. ಪಂತ್ ಅವರು ಟೆಸ್ಟ್‌ಗಳಲ್ಲಿ ಭಾರತಕ್ಕೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರ 46 ಟಿ20 ಪಂದ್ಯಗಳಲ್ಲಿ ಕೇವಲ 3 ಅರ್ಧಶತಕಗಳನ್ನು ಒಳಗೊಂಡಂತೆ 773 ರನ್‌ಗಳು ಗಳಿಸಿದ್ದಾರೆ.

ಸದ್ಯ ನಡೆಯುತ್ತಿರುವ ಟಿ20 ಸರಣಿಯಲ್ಲಿ ರಿಷಭ್ ಪಂತ್ 3 ಪಂದ್ಯಗಳಲ್ಲಿ ಕೇವಲ 34 ರನ್ ಗಳಿಸಿದ್ದಾರೆ. ಆದರೆ ಆರಂಭಿಕರಾದ ರುತುರಾಜ್ ಮತ್ತು ಇಶಾನ್ ಕಿಶನ್ ಅಗ್ರಸ್ಥಾನದಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಉತ್ತಮ ಫಿನಿಶರ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಸರಣಿಯಲ್ಲಿ ಇನ್ನೂ ವಿಕೆಟ್ ಪಡೆಯದ ಅವೇಶ್ ಖಾನ್ ಅವರು ಹೊಸಬರಾದ ಅರ್ಶ್ದೀಪ್ ಸಿಂಗ್ ಅಥವಾ ಉಮ್ರಾನ್ ಮಲಿಕ್‌ಗೆ ದಾರಿ ಮಾಡಿಕೊಡಬಹುದು. ಆದರೂ ಭಾರತದ ಮ್ಯಾನೇಜ್‌ಮೆಂಟ್ ಅವೇಶ್ ಖಾನ್‌ಗೆ ಮತ್ತೊಂದು ಅವಕಾಶವನ್ನು ನೀಡಬಹುದು.

ಭಾರತ: ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅವೇಶ್ ಖಾನ್, ಸಿಂಗ್, ಉಮ್ರಾನ್ ಮಲಿಕ್.

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಂಬ್ಸ್, ಟ್ರಿಸ್ಟಾನ್ ಸ್ಟಬ್ ಶಂಬ್ಸ್ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್.

Story first published: Thursday, June 16, 2022, 23:50 [IST]
Other articles published on Jun 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+