
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20ಗೆ ಭಾರತದ ಆಡುವ 11ರ ಬಳಗ
ಇಶಾನ್ ಕಿಶನ್: ಸದ್ಯ ನಡೆಯುತ್ತಿರುವ ಟಿ20 ಸರಣಿಯಲ್ಲಿ ಮುಂಬೈ ಬ್ಯಾಟ್ಸ್‌ಮನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಮೂರು ಪಂದ್ಯಗಳಿಂದ 164 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದಾರೆ. ಇಶಾನ್ ಕಿಶನ್ ಇದುವರೆಗೆ ಸರಣಿಯಲ್ಲಿ ಎರಡು ಅರ್ಧಶತಕ ಬಾರಿಸಿದ್ದಾರೆ. ನಿರ್ಣಾಯಕ ನಾಲ್ಕನೇ ಟಿ20 ಪಂದ್ಯದಲ್ಲಿಯೂ ಅವರ ಬ್ಯಾಟ್‌ನಿಂದ ರನ್ ಹರಿದು ಬರುವ ನಿರೀಕ್ಷೆ ಇದೆ.
ರುತುರಾಜ್ ಗಾಯಕ್ವಾಡ್: ಮೊದಲ ಎರಡು ಪಂದ್ಯಗಳಲ್ಲಿ 23 ಮತ್ತು 1 ರನ್ ಗಳಿಸಿದ್ದ ಗಾಯಕ್‌ವಾಡ್ ಸರಣಿಯಲ್ಲಿ ಉತ್ತಮ ಆರಂಭ ಕಂಡಿರಲಿಲ್ಲ. ಆದರೆ ಬಲಗೈ ಬ್ಯಾಟರ್ ಮೂರನೇ ಪಂದ್ಯದಲ್ಲಿ 35 ಎಸೆತಗಳಲ್ಲಿ 57 ರನ್ ಗಳಿಸಿ ತಮ್ಮ ಮೊದಲ ಅಂತರರಾಷ್ಟ್ರೀಯ ಅರ್ಧಶತಕವನ್ನು ದಾಖಲಿಸಿದರು. ಇಂದಿನ ಪಂದ್ಯದಲ್ಲಿಯೂ ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಬಾರಿಸುವಲ್ಲಿ ವಿಫಲರಾದ ಅಯ್ಯರ್
ಶ್ರೇಯಸ್ ಅಯ್ಯರ್: ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬಲಗೈ ಬ್ಯಾಟರ್ ಶ್ರೇಯಸ್ ಅಯ್ಯರ್ ಇಲ್ಲಿಯವರೆಗೆ ಸರಣಿಯಲ್ಲಿ ಉತ್ತಮ ಆರಂಭವನ್ನು ಪಡೆದಿದ್ದಾರೆ. ಆದರೆ ತಮ್ಮ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಬಾರಿಸುವಲ್ಲಿ ವಿಫಲರಾಗಿದ್ದಾರೆ. ಫಾರ್ಮ್‌ನಲ್ಲಿರುವ ದೀಪಕ್ ಹೂಡಾ ಬೆಂಚ್ ಕಾಯಿಸುತ್ತಿದ್ದಾರೆ. ಆದರೂ ತಂಡದ ಆಡಳಿತ ಶ್ರೇಯಸ್ ಅಯ್ಯರ್‌ಗೆ ಮಣೆ ಹಾಖು ಸಾಧ್ಯತೆ ಇದ್ದು, ನಾಲ್ಕನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.
ರಿಷಭ್ ಪಂತ್: ನಾಯಕತ್ವದ ವಿಚಾರದಲ್ಲಿ ಸದ್ಯ ನಾಯಕ ರಿಷಭ್ ಪಂತ್ ಉತ್ತಮವಾಗಿದ್ದರೂ, ಅವರು ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಅವರು ಸಿಂಗಲ್ ಡಿಜಿಟ್ ನಂಬರ್ ದಾಖಲಿಸಿದ್ದಾರೆ. ಪಂತ್ ನಾಲ್ಕನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯನಿಂದ ಆಲ್‌ರೌಂಡ್ ಆಟದ ನಿರೀಕ್ಷೆ ಇದೆ
ಹಾರ್ದಿಕ್ ಪಾಂಡ್ಯ: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಬ್ಯಾಟಿಂಗ್ ಮೂಲಕ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಆಡಿದ್ದರೂ, ಆಲ್‌ರೌಂಡರ್ ತಕ್ಕುದಾದ ಪ್ರದರ್ಶನ ಇನ್ನೂ ಮೂಡಿ ಬಂದಿಲ್ಲ. ಈವರೆಗಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಪ್ರದರ್ಶನ ನೀಡಿದ ರೀತಿಯನ್ನು ಗಮನಿಸಿದರೆ, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಗಮನಾರ್ಹ ಕೊಡುಗೆ ನೀಡುವ ಅಗತ್ಯವಿದೆ.
ದಿನೇಶ್ ಕಾರ್ತಿಕ್: ಐಪಿಎಲ್ 2022ರ ಅತ್ಯುತ್ತಮ ಋತುವಿನ ಹಿನ್ನಲೆಯಲ್ಲಿ ದಿನೇಶ್ ಕಾರ್ತಿಕ್ ಅವರು ಈ ಸರಣಿಯಲ್ಲಿ ಇದುವರೆಗೆ ಆಡಿರುವ ಸೀಮಿತ ಬ್ಯಾಟಿಂಗ್ ಅವಕಾಶಗಳಲ್ಲಿ ಯೋಗ್ಯರಾಗಿದ್ದಾರೆ. ಆದಾಗ್ಯೂ 2022ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಇನ್-ಫಾರ್ಮ್ ಬ್ಯಾಟರ್‌ಗೆ ದಕ್ಷಿಣ ಆಫ್ರಿಕಾದಂತಹ ಗುಣಮಟ್ಟದ ತಂಡದ ವಿರುದ್ಧ ಇನ್ನೂ ಸ್ವಲ್ಪ ಸಮಯದ ಅಗತ್ಯವಿದೆ.
ಅಕ್ಷರ್ ಪಟೇಲ್: ಗುಜರಾತ್‌ನ ಆಲ್‌ರೌಂಡರ್ ಇದುವರೆಗೆ ಸರಣಿಯಲ್ಲಿ ಉತ್ತಮ ಪ್ರದರ್ಶನವೇನೂ ನೀಡಿಲ್ಲ. ಆದರೆ ಪ್ರಸ್ತುತ ಭಾರತ ತಂಡದಲ್ಲಿ ಏಕೈಕ ಎಡಗೈ ಸ್ಪಿನ್ನರ್ ಆಗಿರುವುದರಿಂದ, ಸರಣಿಯಲ್ಲಿನ ಎಲ್ಲಾ ಪಂದ್ಯಗಳನ್ನು ಅಕ್ಷರ್ ಪಟೇಲ್ ಆಡುವ ನಿರೀಕ್ಷೆಯಿದೆ. ಅವರು ಮೂರನೇ ಟಿ20 ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 1/28 ಅಂಕಿಅಂಶಗಳನ್ನು ಹಿಂದಿರುಗಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.

ದಕ್ಷಿಣಾ ಆಫ್ರಿಕಾಕ್ಕೆ ಭುವಿ, ಹರ್ಷಲ್ ಭಯ
ಹರ್ಷಲ್ ಪಟೇಲ್: ಬಲಗೈ ವೇಗಿ ನಿರಾಶಾದಾಯಕ ಪ್ರದರ್ಶನವನ್ನು ಸರಣಿಯ ಮೊದಲ ಪಂದ್ಯದಲ್ಲಿ ಪ್ರಾರಂಭಿಸಿದರು (ನಾಲ್ಕು ಓವರ್‌ಗಳಲ್ಲಿ 1/43). ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅವರಿಂದ ಉತ್ತಮ ಪುನರಾಗಮನವು ಭುವನೇಶ್ವರ್ ಕುಮಾರ್ ನೇತೃತ್ವದ ಭಾರತೀಯ ವೇಗದ ವಿಭಾಗಕ್ಕೆ ಉತ್ತಮ ಬೆಂಬಲವನ್ನು ಒದಗಿಸಿದೆ. ಹರ್ಷಲ್ ಪಟೇಲ್ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ಕ್ರಮವಾಗಿ 1/17 ಮತ್ತು 4/25 ಉತ್ತಮ ಪ್ರದರ್ಶನ ನೀಡಿ ಮರಳಿದ್ದಾರೆ.
ಭುವನೇಶ್ವರ್ ಕುಮಾರ್: ಹರ್ಷಲ್ ಪಟೇಲ್ ಅವರಂತೆಯೇ ಭುವನೇಶ್ವರ್ ಕೂಡ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ಪ್ರಾರಂಭಿಸಿದರು (ನಾಲ್ಕು ಓವರ್‌ಗಳಲ್ಲಿ 1/43). ಆದರೆ ಅವರು ಎರಡನೇ ಟಿ20 ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಗಳಿಸಿದರು ಮತ್ತು ಅದನ್ನು ಮೂರನೇ ಪಂದ್ಯದಲ್ಲಿ ಉತ್ತಮ ಎಕಾನಮಿ ಸ್ಪೆಲ್ ಅನ್ನು ಮುಂದುವರೆಸಿದರು. ಭುವಿ ಮತ್ತು ಹರ್ಷಲ್ ಅವರು ತಮ್ಮ ಹೆಸರಿಗೆ ತಲಾ ಆರು ವಿಕೆಟ್‌ಗಳೊಂದಿಗೆ ಇದುವರೆಗೆ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.

ಅರ್ಶ್‌ದೀಪ್ ಸಿಂಗ್ ಸ್ಥಾನ ಪಡೆಯುವ ಸಾಧ್ಯತೆ
ಅರ್ಶ್‌ದೀಪ್ ಸಿಂಗ್: ಅವೇಶ್ ಖಾನ್ ಅವರ ಕಳಪೆ ಬೌಲಿಂಗ್‌ನಿಂದ ಅವರನ್ನು ಭಾರತದ ಆಡುವ ಹನ್ನೊಂದರ ಬಳಗದಿಂದ ಹೊರಹಾಕುವ ಸಾಧ್ಯತೆಯಿದೆ. ಅರ್ಶ್‌ದೀಪ್ ಸಿಂಗ್ ಅವರ ಪಿನ್ ಪಾಯಿಂಟ್ ಯಾರ್ಕರ್‌ಗಳು ಮತ್ತು ಪ್ರಭಾವಶಾಲಿ ಎಕಾನಮಿ ದರವು ಭಾರತಕ್ಕೆ ಈ ಕ್ಷಣದಲ್ಲಿ ತಕ್ಷಣವಾಗಿ ಬೇಕಾಗಿರುವುದರಿಂದ ಈ ಸ್ಥಾನಕ್ಕೆ ಅಗ್ರ ಸ್ಪರ್ಧಿಯಾಗಿದ್ದಾರೆ.
ಯುಜ್ವೇಂದ್ರ ಚಾಹಲ್: ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಅಬ್ಬರಿಸಿದ ನಂತರ, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅಂತಿಮವಾಗಿ ತಮ್ಮ ಎಂದಿನ ಫಾರ್ಮ್‌ಗೆ ಮರಳಿದ್ದಾರೆ. ಸ್ಟ್ರೀಟ್-ಸ್ಮಾರ್ಟ್ ಲೆಗ್ ಸ್ಪಿನ್ನರ್ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 3/20 ಪ್ರದರ್ಶನ ನೀಡಿದರು ಮತ್ತು ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದರು.


Click it and Unblock the Notifications
