Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs SA: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಈ ಪ್ಲೇಯರ್‌ ಮೇಲೆ ಎಲ್ಲರ ಕಣ್ಣು

ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಗೆದ್ದು ಕೊಂಡಿರುವ ಟೀಮ್ ಇಂಡಿಯಾ ಉತ್ಸಾಹದಲ್ಲಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಎದುರು ನೋಡುತ್ತಿದೆ. ಈಗಾಗಲೇ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ತಲುಪಿದ್ದು ಅಭ್ಯಾಸ ಆರಂಭಿಸಿದೆ.

ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಟೀಮ್ ಇಂಡಿಯಾ ಮೂರು ಮಾದರಿಯ ಸರಣಿಯನ್ನು ಆಡಲಿದೆ. ಟೀಮ್ ಇಂಡಿಯಾ ಡಿಸೆಂಬರ್ 10 ರಂದು ಮೂರು ಪಂದ್ಯಗಳ ಟಿ 20 ಸರಣಿಯೊಂದಿಗೆ ಈ ಪ್ರವಾಸವನ್ನು ಪ್ರಾರಂಭಿಸಲಿದ್ದು, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸ್ಪಿನ್ನರ್ ಕುಲದೀಪ್ ಯಾದವ್ ಸೀಮಿತ ಓವರ್‌ಗಳ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.

Ind vs SA: Indian Spin Bowler Who Has Troubled the South African Batters

2023ರ ಏಕದಿನ ವಿಶ್ವಕಪ್‌ನಲ್ಲಿ ಕುಲದೀಪ್ ತನ್ನ ಸ್ಪಿನ್ ಬೌಲಿಂಗ್‌ನಿಂದ ಅನೇಕ ಅಬ್ಬರಿಸಿದ್ದರು. ಕಳೆದ ಒಂದು ವರ್ಷದಲ್ಲಿ, ಕುಲದೀಪ್ ಸೀಮಿತ ಓವರ್‌ಗಳಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಅವರನ್ನು ತಂಡದಲ್ಲಿ ಆಯ್ಕೆಮಾಡಲಾಗಿದೆ.

ಕುಲ್ದೀಪ್ ಇಲ್ಲಿಯವರೆಗೆ ಆಫ್ರಿಕಾದಲ್ಲಿ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ, ಆದರೆ 6 ODI ಪಂದ್ಯಗಳಲ್ಲಿ, ಅವರು ಒಟ್ಟು 17 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಕುಲ್ದೀಪ್ ಯಾದವ್ 2018 ರಲ್ಲಿ ಆಫ್ರಿಕಾದಲ್ಲಿ 6 ಏಕದಿನ ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದಿದ್ದರು. ಆಗ ಅವರು 2 ಪಂದ್ಯಗಳಲ್ಲಿ ತಲಾ ನಾಲ್ಕು ಮತ್ತು 2 ಪಂದ್ಯಗಳಲ್ಲಿ ತಲಾ ಮೂರು ವಿಕೆಟ್ ಗಳನ್ನು ಕಬಳಿಸಿ ಎಲ್ಲರ ಚಿತ್ತ ಕದ್ದಿದ್ದರು.

ಇಲ್ಲಿಯವರೆಗೆ, ದಕ್ಷಿಣ ಆಫ್ರಿಕಾದಲ್ಲಿ ಕುಲ್ದೀಪ್ ಏಕದಿನ ಕ್ರಿಕೆಟ್‌ನಲ್ಲಿ 51 ಓವರ್‌ಗಳನ್ನು ಬೌಲಿಂಗ್ ಮಾಡಿ, 13.88 ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ ಚೈನಾ ಮೆನ್ ಬೌಲರ್ ಉತ್ತಮ ಪ್ರದರ್ಶನವೆಂದರೆ 23 ರನ್‌ಗಳಿಗೆ 4 ವಿಕೆಟ್.

Ind vs SA: Indian Spin Bowler Who Has Troubled the South African Batters

ಕುಲದೀಪ್ ಯಾದವ್ ಇದುವರೆಗೆ ಟಿ20 ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಏಕದಿನದಲ್ಲಿ ದಕ್ಷಿನ ಆಫ್ರಿಕಾದಲ್ಲಿ ಅವರ ದಾಖಲೆಯನ್ನು ಅಮೋಘ. ಕುಲದೀಪ್ 11 ಪಂದ್ಯಗಳಲ್ಲಿ 15.19 ಸರಾಸರಿಯಲ್ಲಿ 26 ವಿಕೆಟ್ ಪಡೆದಿದ್ದಾರೆ. 18 ರನ್‌ಗಳಿಗೆ 4 ವಿಕೆಟ್‌ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

2023 ರಲ್ಲಿ ಇಲ್ಲಿಯವರೆಗೆ, ಕುಲದೀಪ್ ಯಾದವ್ ಒಟ್ಟು 23 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 19.85 ರ ಸರಾಸರಿಯಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Thursday, December 7, 2023, 18:47 [IST]
Other articles published on Dec 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+