For Quick Alerts
ALLOW NOTIFICATIONS  
For Daily Alerts
 

ಟಿ20 ಪಂದ್ಯಗಳಿಂದ ರಿಷಭ್ ಪಂತ್‌ರನ್ನು ಹೊರಗಿಡುವ ಸಮಯ ಬಂದಿದೆಯೇ?

Ind vs SA: Is It Time To Get Rishabh Pant Out Of T20 International Matches?

ತನ್ನ ಆರಂಭಿಕ ವೃತ್ತಿಜೀವನದಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಇತರರಂತೆ ಏರಿಳಿತವನ್ನು ಹೊಂದಿದ್ದರು. 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪ್ರಸಿದ್ಧ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿನ ತನ್ನ ಅತ್ಯುತ್ತಮ ಪ್ರದರ್ಶನದೊಂದಿಗೆ ಭಾರತ ತಂಡಕ್ಕೆ ಟೆಸ್ಟ್ ಹೀರೋ ಆದರು. ಸದ್ಯ ರಿಷಭ್ ಪಂತ್ ಭಾರತೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಗಬ್ಬಾ ಶತಕದ ನಂತರ ರಿಷಭ್ ಪಂತ್ ಅವರ ಮೌಲ್ಯ ಎಷ್ಟು ಹೆಚ್ಚಾಯಿತೆಂದರೆ ಅವರಿಗೆ 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ಒದಗಿ ಬಂದಿತು. ಅಂದಿನಿಂದ, ರಿಷಭ್ ಪಂತ್ ಭಾರತದ ಭವಿಷ್ಯದ ನಾಯಕತ್ವದ ನಿರೀಕ್ಷೆಗಳಲ್ಲಿ ಒಬ್ಬರಾಗಿದ್ದಾರೆ. ರಿಷಭ್ ಪಂತ್ ಈಗಾಗಲೇ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ ಮತ್ತು ಅವರ ಆಕ್ರಮಣಕಾರಿ ಆಟದಿಂದ ಎಲ್ಲಾ ಸ್ವರೂಪದ ಆಟಗಳಲ್ಲಿ ಅವರನ್ನು ಕಡೆಗಣಿಸಲು ರಾಷ್ಟ್ರೀಯ ಆಯ್ಕೆದಾರರಿಗೆ ಅಸಾಧ್ಯವಾಗಿಸಿದೆ.

ರಾಜ್‌ಕೋಟ್ ಟಿ20 ಪಂದ್ಯ ನಿರ್ಣಾಯಕವಾಗಲಿದೆ

ರಾಜ್‌ಕೋಟ್ ಟಿ20 ಪಂದ್ಯ ನಿರ್ಣಾಯಕವಾಗಲಿದೆ

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮೊದಲು ನಾಯಕರಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯದ ಕಾರಣದಿಂದ ಹೊರಗುಳಿದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಗೆ ರಿಷಭ್ ಪಂತ್ ಅವರನ್ನು ಭಾರತೀಯ ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು.

ಆದರೆ ಟಿ20 ಕ್ರಿಕೆಟ್‌ನಲ್ಲಿ ರಿಷಭ್ ಪಂತ್ ಅವರ ಪ್ರಭಾವಶಾಲಿ ಅಂಕಿ-ಅಂಶಗಳಿಂದ ದೂರವಿರುವುದು ನಿಧಾನವಾಗಿ ಮತ್ತು ಖಚಿತವಾಗಿ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.

24ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 723 ರನ್‌

24ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 723 ರನ್‌

ರಿಷಭ್ ಪಂತ್ ಆಡಿದ 46 ಪಂದ್ಯಗಳಲ್ಲಿ 24ಕ್ಕಿಂತ ಕಡಿಮೆ ಸರಾಸರಿಯಲ್ಲಿ ಕೇವಲ 723 ರನ್‌ಗಳನ್ನು ಗಳಿಸಿದ್ದಾರೆ ಮತ್ತು ಕೇವಲ 3 ಅರ್ಧಶತಕಗಳನ್ನು ಬಾರಿಸಿರುವ ರಿಷಭ್ ಪಂತ್ ತಂಡದಲ್ಲಿ ಜಾಸ್ತಿ ದಿನ ಉಳಿಯುತ್ತಾರೆ ಎನ್ನುವುದು ಖಚಿತವಾಗಿ ಹೇಳಲು ಸಾಧ್ಯವಿಲ್ಲದಂತಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ನ ವೃತ್ತಿಜೀವನ ಬೆಳೆಸಲು ಹಲವು ಹಿರಿಯ ಆಟಗಾರರು ಕೆಲವು ವರ್ಷಗಳ ಕಾಲ ತಂಡದಿಂದ ದೂರವಿರಬೇಕಾಯಿತು. ಉದಾಹರಣೆಗೆ, ದಿನೇಶ್ ಕಾರ್ತಿಕ್‌ರನ್ನು ಈ ಮೊದಲು ಹದಿನೆಂಟು ಬಾರಿ ಕೈಬಿಡಲಾಯಿತು, ಐಪಿಎಲ್ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಗಾಗಿ ಇತ್ತೀಚಿನ ಪುನರಾಗಮನವನ್ನು ಮಾಡಿದರು.

ನಿರಂತರ ಪರಿಶೀಲನೆಗೆ ಒಳಪಟ್ಟಿರುವ ಸಂಜು ಸ್ಯಾಮ್ಸನ್

ನಿರಂತರ ಪರಿಶೀಲನೆಗೆ ಒಳಪಟ್ಟಿರುವ ಸಂಜು ಸ್ಯಾಮ್ಸನ್

16 ವರ್ಷಗಳ ಸುದೀರ್ಘ ಅವಧಿಯಲ್ಲಿ ಕೇವಲ 35 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಮತ್ತೊಂದೆಡೆ ಟಿ20 ತಂಡದಲ್ಲಿ ತಮ್ಮ ಸ್ಥಾನವನ್ನು ನಿರಂತರ ಪರಿಶೀಲನೆಗೆ ಒಳಪಟ್ಟಿರುವ ಸಂಜು ಸ್ಯಾಮ್ಸನ್, 2015ರಲ್ಲಿ ಚೊಚ್ಚಲ ಪ್ರವೇಶ ಮಾಡಿದ ನಂತರ ಕೇವಲ 13 ಟಿ20 ಪಂದ್ಯಗಳನ್ನು ಆಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಪರಿಚಿತ ಸಮಸ್ಯೆಗಳು ರಿಷಭ್ ಪಂತ್ ಅವರನ್ನು ಮತ್ತೆ ಕಾಡುತ್ತಿವೆ. ವಿಕೆಟ್‌ಕೀಪರ್-ಬ್ಯಾಟರ್ ತನ್ನ ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕ ಅಬ್ಬರಿಸಲು ಹೋಗಿ ಔಟ್ ಆಗುತ್ತಾರೆ ಮತ್ತು ಮಧ್ಯಮ ಓವರ್‌ಗಳಲ್ಲಿ ತಂಡವನ್ನು ತೊಂದರೆಗೆ ಸಿಲುಕಿಸುತ್ತಾರೆ. ರಿಷಭ್ ಪಂತ್ ಈ ಟಿ20 ಸರಣಿಯ 3 ಪಂದ್ಯಗಳಲ್ಲಿ ಕೇವಲ 34 ರನ್ ಗಳಿಸಿದ್ದಾರೆ, ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಸ್ಥಿರತೆಯನ್ನು ನೀಡಲು ವಿಫಲರಾಗಿದ್ದಾರೆ.

ಪಂತ್‌ಗೆ ಆಕ್ರಮಣಕಾರಿ ಆಟಗಾರನಾಗಬೇಡಿ ಎಂದು ಹೇಳುವುದಿಲ್ಲ

ಪಂತ್‌ಗೆ ಆಕ್ರಮಣಕಾರಿ ಆಟಗಾರನಾಗಬೇಡಿ ಎಂದು ಹೇಳುವುದಿಲ್ಲ

"ಯಾರೂ ರಿಷಭ್ ಪಂತ್‌ಗೆ ಆಕ್ರಮಣಕಾರಿ ಆಟಗಾರನಾಗಬೇಡಿ ಎಂದು ಹೇಳುವುದಿಲ್ಲ. ಆದರೆ ಕೆಲವೊಮ್ಮೆ ಅದನ್ನು ಮಾಡಲು ಸಮಯವನ್ನು ನೋಡಬೇಕಾಗುತ್ತದೆ. ಸಮಯ ಆರಿಸುವುದೇ ಪ್ರಶ್ನೆಯಾಗಿದೆ," ಎಂದು ರಿಷಭ್ ಪಂತ್ ಕುರಿತು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದರು.

ಪಂದ್ಯದ ಸುದೀರ್ಘ ಸ್ವರೂಪದಲ್ಲಿ ಸನ್ನಿವೇಶಗಳಿಗೆ ಅನುಗುಣವಾಗಿ ಗೇರ್ ಬದಲಾಯಿಸುವ ಕಲೆಯನ್ನು ಅದ್ಭುತವಾಗಿ ಕಲಿತಿರುವ ರಿಷಭ್ ಪಂತ್, ಟಿ20 ಪಂದ್ಯಗಳಲ್ಲಿ ಹಾಗೆ ಮಾಡಲು ಸಾಧ್ಯವಾಗದಿರುವುದು ಗೊಂದಲಮಯವಾಗಿದೆ. ಪಂತ್ ತನ್ನ ಟಿ20 ಕ್ರಿಕೆಟ್‌ನ ಮೊದಲ ಕೆಲವು ವರ್ಷಗಳಲ್ಲಿ ತನ್ನ ಸ್ಟ್ರೈಕ್ ರೇಟ್‌ನೊಂದಿಗೆ ಸಹ ಹೆಣಗಾಡಿದ್ದರು ಮತ್ತು ವಿಶೇಷವಾಗಿ ಮಧ್ಯಮ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವಾಗ ಈಗಲೂ ಸಮತೋಲನವನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

Rohit Sharma ಈಗ ಏನು ಮಾಡುತ್ತಿದ್ದಾರೆ ನೋಡಿ | *Cricket | OneIndia Kannada
ಟಿ20 ಕ್ರಿಕೆಟ್‌ನಲ್ಲಿ ಪಂತ್‌ಗೆ ಸಮಯ ಮೀರಬಹುದು

ಟಿ20 ಕ್ರಿಕೆಟ್‌ನಲ್ಲಿ ಪಂತ್‌ಗೆ ಸಮಯ ಮೀರಬಹುದು

ESPNCricinfo ನೊಂದಿಗೆ ಮಾತನಾಡುತ್ತಾ ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್, "ಟಿ20 ಕ್ರಿಕೆಟ್‌ನಲ್ಲಿ ಪಂತ್‌ಗೆ ಸಮಯ ಮೀರಬಹುದು, ವಿಶೇಷವಾಗಿ ಕೆಎಲ್ ರಾಹುಲ್ ಲಭ್ಯವಿದ್ದಾಗ ಮತ್ತು ದಿನೇಶ್ ಕಾರ್ತಿಕ್ ಮತ್ತು ಸಂಜು ಸ್ಯಾಮ್ಸನ್ ಅವರಂತಹವರು ತಂಡದಲ್ಲಿ ತಮ್ಮ ಸ್ಥಾನಗಳನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವಾಗ," ಎಂದು ಹೈಲೈಟ್ ಮಾಡಿದ್ದಾರೆ.

"ಅವರು ಇನ್ನೂ ರನ್ ಗಳಿಸಬೇಕು ಮತ್ತು ಸಾಕಷ್ಟು ಸ್ಥಿರವಾಗಿ ರನ್ ಗಳಿಸಬೇಕು ಎಂದು ನಾನು ಭಾವಿಸುತ್ತೇನೆ. ಅವರು ಐಪಿಎಲ್‌ನಲ್ಲಿ ಅದನ್ನು ಮಾಡಿಲ್ಲ. ಇತ್ತೀಚಿನ ಟಿ20 ಪಂದ್ಯಗಳಲ್ಲಿಯೂ ರನ್ ಬಂದಿಲ್ಲ. ಟಿ20 ವಿಶ್ವಕಪ್‌ ಮುಂದಿರುವ ಕಾರಣ ಆತ ಅಸಾಧಾರಣ ಪ್ರದರ್ಶನ ನೀಡಬೇಕಾಗಿದೆ".

"ನಾನು ಹಲವು ಬಾರಿ ಹೇಳಿದ್ದೇನೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ ರೀತಿಯಲ್ಲಿ ಮತ್ತು ಕೆಲವು ಏಕದಿನ ಇನ್ನಿಂಗ್ಸ್‌ಗಳಲ್ಲಿ ಆಡಿದ ರೀತಿಯಲ್ಲಿ ಅವರು ಟಿ20ಯಲ್ಲಿ ಆಡಿಲ್ಲ. ಹಾಗಾಗಿ ರಿಷಭ್ ಪಂತ್ ಟಿ20 ಪಂದ್ಯಗಳಲ್ಲಿ ಮುಂದುವರೆಯುವುದು ಕಷ್ಟ," ಎಂದು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಹೇಳಿದ್ದಾರೆ.

Story first published: Friday, June 17, 2022, 19:24 [IST]
Other articles published on Jun 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+