For Quick Alerts
ALLOW NOTIFICATIONS  
For Daily Alerts
 

IND vs SA: ಭಾರತ vs ದಕ್ಷಿಣ ಆಫ್ರಿಕಾ ನಿರ್ಣಾಯಕ 3ನೇ ಪಂದ್ಯಕ್ಕೂ ಮಳೆ ಕಾಟವೇ?; ಪಂದ್ಯದ ವಿವರ, ಹವಾಮಾನ ವರದಿ

ಗುರುವಾರ, ಡಿಸೆಂಬರ್ 14ರಂದು ಜೋಹಾನ್ಸ್‌ಬರ್ಗ್‌ನ ಐಕಾನಿಕ್ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಿ20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲು ಸಿದ್ಧವಾಗಿವೆ.

ಡರ್ಬನ್‌ನಲ್ಲಿ ನಡೆದ ಮೊದಲ ಪಂದ್ಯ ಸಂಪೂರ್ಣವಾಗಿ ಮಳೆಗಾಹುತಿಯಾದರೆ, ಗ್ಕೆಬರ್ಹಾದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಆತಿಥೇಯ ದಕ್ಷಿಣ ಆಫ್ರಿಕಾ 5 ವಿಕೆಟ್ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

IND vs SA:Is Rain Threat for India vs South Africa crucial 3rd Match?; Match Details, Weather Report

ಎರಡನೇ ಪಂದ್ಯದಲ್ಲಿ ಭಾರತ ತಂಡವು ಬ್ಯಾಟ್‌ನೊಂದಿಗೆ ಉತ್ತಮ ಮೊತ್ತ ಕಲೆಹಾಕಿದರೂ, ಮಳೆ-ಬಾಧಿತ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳ ಎದುರು ಭಾರತೀಯ ಬೌಲರ್‌ಗಳು ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲಾದರು. ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಲು ಭಾರತ ತಂಡಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಯುವ ಬ್ಯಾಟರ್ ರಿಂಕು ಸಿಂಗ್ ಅವರ ಬ್ಯಾಟಿಂಗ್ ಫಾರ್ಮ್ ಭಾರತಕ್ಕೆ ಶುಭ ಸೂಚನೆಯಾಗಿದೆ. ಆರಂಭಿಕರು ರನ್ ಗಳಿಸಬೇಕಿದೆ ಮತ್ತು ಬೌಲರ್‌ಗಳು ರನ್‌ಗಳಿಗೆ ಕಡಿವಾಣ ಹಾಕಬೇಕಿದೆ.

ಎರಡು ಪಂದ್ಯಗಳು ಮಳೆಯಿಂದ ಪ್ರಭಾವಿತವಾದ ಕಾರಣ, ಅಭಿಮಾನಿಗಳು ಮತ್ತು ಉಭಯ ತಂಡಗಳು ಜೋಹಾನ್ಸ್‌ಬರ್ಗ್‌ನಲ್ಲಿ ಯಾವುದೇ ಮಳೆ ಭೀತಿ ಇರುವುದುಲ್ಲ ಹಾಗೂ ಪೂರ್ಣ ಪಂದ್ಯವನ್ನು ನಡೆಯುವುದನ್ನು ನೋಡಲು ಆಶಿಸುತ್ತಿದ್ದಾರೆ.

IND vs SA:Is Rain Threat for India vs South Africa crucial 3rd Match?; Match Details, Weather Report

ದಕ್ಷಿಣ ಆಫ್ರಿಕಾ vs ಭಾರತ 3ನೇ ಟಿ20 ಪಂದ್ಯದ ಹವಾಮಾನ ವರದಿ

ಡಿಸೆಂಬರ್ 14ರಂದು ಜೋಹಾನ್ಸ್‌ಬರ್ಗ್ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೂರನೇ ಟಿ20 ಪಂದ್ಯವನ್ನು ಅನುಕೂಲಕರ ಹವಾಮಾನ ಪರಿಸ್ಥಿತಿಗಳಲ್ಲಿ ಆಯೋಜಿಸಲು ಸಜ್ಜಾಗಿದೆ.

ಹಗಲಿನಲ್ಲಿ ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುವ ನಿರೀಕ್ಷೆ ಇದ್ದು, ಪಂದ್ಯ ಪ್ರಾರಂಭವಾಗುತ್ತಿದ್ದಂತೆ 26 ಡಿಗ್ರಿ ಸೆಲ್ಸಿಯಸ್‌ಗೆ ಸ್ವಲ್ಪ ಇಳಿಕೆಯಾಗುತ್ತದೆ.

ಪಂದ್ಯವು ಸಂಜೆಯವರೆಗೂ ಮುಂದುವರೆದಂತೆ, ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗೆ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಆರ್ದ್ರತೆಯ ಮಟ್ಟವು 27 ಪ್ರತಿಶತದಷ್ಟು ಮಧ್ಯಮವಾಗಿರುತ್ತದೆ. ಜೊತೆಗೆ ಸೆಕೆಂಡಿಗೆ 6 ಮೀಟರ್ ವೇಗದಲ್ಲಿ ಗಾಳಿ ಬೀಸುತ್ತದೆ.

ಇದರರ್ಥ ಅಭಿಮಾನಿಗಳು ಯಾವುದೇ ಅಡೆತಡೆಯಿಲ್ಲದ ಪಂದ್ಯಕ್ಕಾಗಿ ಎದುರುನೋಡಬಹುದು. ಏಕೆಂದರೆ ಮುನ್ಸೂಚನೆ ಪ್ರಕಾರ, ಶೂನ್ಯ ಮಳೆ ಸಾಧ್ಯತೆ ಇದೆ. ಹವಾಮಾನದಿಂದ ಪ್ರಭಾವಿತವಾದ ಹಿಂದಿನ ಪಂದ್ಯಗಳಿಗಿಂತ ಭಿನ್ನವಾಗಿ ಪೂರ್ಣ ಪಂದ್ಯವನ್ನು ಖಚಿತಪಡಿಸುತ್ತದೆ.

ವಾಂಡರರ್ಸ್ ಕ್ರೀಡಾಂಗಣದ ಮೇಲಿನ ಆಕಾಶವು ದಿನವಿಡೀ ಸಾಂದರ್ಭಿಕ ಮೋಡಗಳೊಂದಿಗೆ ಹೆಚ್ಚಾಗಿ ಬಿಸಿಲಿನಿಂದ ಕೂಡಿರುತ್ತದೆ. ಆಟಕ್ಕೆ ಅಡ್ಡಿಪಡಿಸುವ ಮಳೆ ಅಥವಾ ಗುಡುಗು ಸಹಿತ ಯಾವುದೇ ಗಮನಾರ್ಹ ಹವಾಮಾನ ಬೆದರಿಕೆ ಇಲ್ಲ. ಪಂದ್ಯದ ಅವಧಿಯುದ್ದಕ್ಕೂ ನಾವು ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಬಹುದು ಎಂದು ಅಕ್ಯುವೆದರ್ ತೋರಿಸುತ್ತಿದೆ.

ಮೂರನೇ ಟಿ20 ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು 8 ಗಂಟೆಗೆ ಟಾಸ್ ನಡೆಯಲಿದೆ.

ಭಾರತ vs ದಕ್ಷಿಣ ಆಫ್ರಿಕಾ ಸಂಭಾವ್ಯ ಆಡುವ 11ರ ಬಳಗ

ಭಾರತ: ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ: ಮ್ಯಾಥ್ಯೂ ಬ್ರೀಟ್ಜ್ಕೆ, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಕೇಶವ್ ಮಹಾರಾಜ್, ಆಂಡಿಲೆ ಫೆಹ್ಲುಕ್ವಾಯೊ, ನಾಂದ್ರೆ ಬರ್ಗರ್, ಲಿಜಾದ್ ವಿಲಿಯಮ್ಸ್, ತಬ್ರೈಜ್ ಶಮ್ಸಿ.

Story first published: Wednesday, December 13, 2023, 21:50 [IST]
Other articles published on Dec 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+