IND vs SA: ಗಂಭೀರ್ ದಾಖಲೆ ಮುರಿದ ಕಿಶನ್; ಕೊಹ್ಲಿ ದಾಖಲೆ ಜಸ್ಟ್ ಮಿಸ್, ರಾಹುಲ್ ಇಂದಿಗೂ ನಂಬರ್ 1!

ಟೀಮ್ ಇಂಡಿಯಾ ಐಪಿಎಲ್ ಮುಕ್ತಾಯವಾದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ಮೂಲಕ ತನ್ನ ಅಂತರರಾಷ್ಟ್ರೀಯ ಹಣಾಹಣಿಯನ್ನು ಮುಂದುವರೆಸಿದ್ದು, ಸರಣಿಯ 3 ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ.
ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಗೆಲುವನ್ನು ಕಂಡಿತ್ತು, ಹೀಗಾಗಿ ನಿನ್ನೆ ( ಜೂನ್ 14 ) ವಿಶಾಖಪಟ್ಟಣದ ಡಾ ವೈಎಸ್ ರಾಜಶೇಖರ ರೆಡ್ಡಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟಿ ಟ್ವೆಂಟಿ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಇಂತಹ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ 48 ರನ್‌ಗಳ ಭರ್ಜರಿ ಜಯ ದಾಖಲಿಸಿ ಸರಣಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಪರ ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ರುತುರಾಜ್ ಗಾಯಕ್ವಾಡ್ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಅರ್ಧಶತಕವನ್ನು ಬಾರಿಸಿದರೆ, ಇಶಾನ್ ಕಿಶನ್ ಕೂಡ ಅರ್ಧಶತಕ ಬಾರಿಸಿದರು. 97 ರನ್‌ಗಳ ಜತೆಯಾಟವಾಡಿದ ಈ ಜೋಡಿ ಭಾರತಕ್ಕೆ ಅದ್ಭುತ ಆರಂಭವನ್ನು ಕಟ್ಟಿಕೊಟ್ಟಿತ್ತು. ಆ ಸಂದರ್ಭದಲ್ಲಿ ಟೀಂ ಇಂಡಿಯಾ 190 - 200 ರನ್ ಕಲೆಹಾಕಬಹುದು ಎಂಬ ನಿರೀಕ್ಷೆಯಿತ್ತು, ಆದರೆ ಮಧ್ಯಮ ಕ್ರಮಾಂಕದ ಆಟಗಾರರು ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದ ಕಾರಣ ತಂಡ 179 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿತು. 35 ಎಸೆತಗಳಲ್ಲಿ 54 ರನ್ ಬಾರಿಸಿದ ಇಶಾನ್ ಕಿಶನ್ ಈ ಅರ್ಧಶತಕದ ಮೂಲಕ ಗೌತಮ್ ಗಂಭೀರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದು ಹಾಕಿದ್ದಾರೆ. ಈ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಗಂಭೀರ್ ದಾಖಲೆ ಸರಿಗಟ್ಟಿದ ಕಿಶನ್
ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದ ಮೂಲಕ ಇಶಾನ್ ಕಿಶನ್ ತಮ್ಮ 13 ಟಿ ಟ್ವೆಂಟಿ ಇನ್ನಿಂಗ್ಸ್‌ನ್ನು ಆಡಿ ಮುಗಿಸಿದ್ದಾರೆ. ಹೀಗೆ ತಮ್ಮ 13ನೇ ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ನಂತರ ಇಶಾನ್ ಕಿಶನ್ 453 ರನ್ ಕಲೆಹಾಕಿದ್ದಾರೆ ಹಾಗೂ ಈ ಹಿಂದೆ ಗೌತಮ್ ಗಂಭೀರ್ 13 ಇನ್ನಿಂಗ್ಸ್ ಮುಕ್ತಾಯದ ನಂತರ 415 ರನ್ ಕಲೆಹಾಕಿದ್ದರು. ಈ ಮೂಲಕ 13 ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ನಂತರ ಅತಿ ಹೆಚ್ಚು ರನ್ ಕಲೆಹಾಕಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಗೌತಮ್ ಗಂಭೀರ್ ಅವರನ್ನು ಹಿಂದಿಕ್ಕಿದ್ದಾರೆ.

ರಾಹುಲ್ ಮತ್ತು ಕೊಹ್ಲಿ ಹಿಂದಿಕ್ಕುವಲ್ಲಿ ಕಿಶನ್ ವಿಫಲ
ಇನ್ನು ಈ ದಾಖಲೆ ಪಟ್ಟಿಯಲ್ಲಿ ಇಶಾನ್ ಕಿಶನ್ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕುವಲ್ಲಿ ವಿಫಲರಾಗಿದ್ದಾರೆ. 13 ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ನಂತರ ಕೆಎಲ್ ರಾಹುಲ್ 500 ರನ್ ಬಾರಿಸಿದ್ದರೆ, ವಿರಾಟ್ ಕೊಹ್ಲಿ 461 ರನ್ ಬಾರಿಸಿದ್ದಾರೆ. ಈ ಮೂಲಕ 13 ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ನಂತರ ಅತಿ ಹೆಚ್ಚು ರನ್ ಕಲೆಹಾಕಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ಇಂದಿಗೂ ತಮ್ಮ ಹೆಸರಿನಲ್ಲಿಯೇ ಹೊಂದಿದ್ದಾರೆ.

ಟಾಪ್ 5 ಪಟ್ಟಿ
13 ಟಿ ಟ್ವೆಂಟಿ ಇನ್ನಿಂಗ್ಸ್ ಮುಕ್ತಾಯದ ನಂತರ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ.
1. ಕೆಎಲ್ ರಾಹುಲ್ - 500 ರನ್
2. ವಿರಾಟ್ ಕೊಹ್ಲಿ - 461 ರನ್
3. ಇಶಾನ್ ಕಿಶನ್ - 453 ರನ್
4. ಗೌತಮ್ ಗಂಭೀರ್ - 415 ರನ್
5. ಯುವರಾಜ್ ಸಿಂಗ್ - 390 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications