For Quick Alerts
ALLOW NOTIFICATIONS  
For Daily Alerts
 

IND vs SA: ಈತ ಭಾರತದ ಮತ್ತೊಬ್ಬ ಸೂರ್ಯಕುಮಾರ್; ಹೊಸ ಆಟಗಾರನ ಬಗ್ಗೆ ಪಠಾಣ್ ಹೇಳಿದ್ದೇನು?

ಭಾನುವಾರದ ಮೊದಲ ಟಿ20 ಪಂದ್ಯವು ಮಳೆಯಿಂದ ರದ್ದಾದ ನಂತರ, ನವೆಂಬರ್ 12ರಂದು ಪೋರ್ಟ್ ಎಲಿಜಬೆತ್‌ನ ಸೇಂಟ್ ಜಾರ್ಜ್ ಓವಲ್‌ನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ಭಾರತ ತಂಡದ ಯುವ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಭಾರತದ ಮತ್ತೊಬ್ಬ ಸೂರ್ಯಕುಮಾರ್ ಯಾದವ್ ಮಾದರಿಯ ಆಟಗಾರ ಎಂದು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.

IND vs SA: Jitesh Sharma is Indias Another Suryakumar Yadav Type of Player Says Irfan Pathan

ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ಯುವ ಬ್ಯಾಟರ್ ಜಿತೇಶ್ ಶರ್ಮಾರನ್ನು ಶ್ಲಾಘಿಸಿದ್ದಾರೆ.

ಭಾರತ ತಂಡವು ಪ್ರಸ್ತುತ ಒಂದು ತಿಂಗಳ ಅವಧಿಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಅಲ್ಲಿ ಭಾರತವು ಮೂರು ಟಿ20 ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಮೊದಲ ಟಿ20 ಪಂದ್ಯ ರದ್ದಾಗಿದೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಯುವ ಕ್ರಿಕೆಟಿಗ ಜಿತೇಶ್ ಶರ್ಮಾ ಅವರನ್ನು 2024ರ ಟಿ20 ವಿಶ್ವಕಪ್‌ಗೆ ಭಾರತದ ತಂಡದಲ್ಲಿ ಆಯ್ಕೆ ಮಾಡಲು ಬೆಂಬಲಿಸಿದರು ಮತ್ತು ಅವರನ್ನು ಇಶಾನ್ ಕಿಶನ್ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಆಡಲು ಆಯ್ಕೆ ಮಾಡಿದರು.

IND vs SA: Jitesh Sharma is Indias Another Suryakumar Yadav Type of Player Says Irfan Pathan

ಭಾರತ ತಂಡದ ಪರ ಆಡಿದ ಮೂರು ಟಿ20 ಪಂದ್ಯಗಳಲ್ಲಿ ಜಿತೇಶ್ ಶರ್ಮಾ ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ 164.10ರ ಸ್ಟ್ರೈಕ್‌ರೇಟ್‌ನಲ್ಲಿ 64 ರನ್ ಗಳಿಸಿದ್ದಾರೆ.

"ನೀವು ಇಶಾನ್ ಕಿಶನ್‌ ಅವರನ್ನು ಆಡಿಸಬೇಕಾದರೆ, ನಾನು ಜಿತೇಶ್ ಶರ್ಮಾ ಆಯ್ಕೆ ಮಾಡುತ್ತೇನೆ. ಏಕೆಂದರೆ, ಏಕದಿನ ಅಥವಾ ಟಿ20 ಪಂದ್ಯ ಆಗಿರಲಿ, ನೀವು ಇಶಾನ್‌ರನ್ನು ಅಗ್ರಸ್ಥಾನದಲ್ಲಿ ಆಡಿಸಬೇಕು. ಈಗಾಗಲೇ ಅಗ್ರ ಕ್ರಮಾಂಕದಲ್ಲಿ ಸ್ಲಾಟ್‌ಗಳು ಭರ್ತಿಯಾಗಿವೆ ಎಂದು ನಾನು ಮೊದಲಿನಿಂದಲೂ ಹೇಳಿದ್ದೇನೆ," ಎಂದು ಇರ್ಫಾನ್ ಪಠಾಣ್ ಹೇಳಿದರು.

ಜಿತೇಶ್ ಶರ್ಮಾ ಅವರನ್ನು ಸೃಜನಶೀಲ ಆಟಗಾರ ಎಂದು ಕರೆದ ಇರ್ಫಾನ್ ಪಠಾಣ್, ಸೂರ್ಯಕುಮಾರ್ ಯಾದವ್ ಅವರಂತೆಯೇ ಅದೇ ಶೈಲಿಯ ಬ್ಯಾಟಿಂಗ್ ಹೊಂದಿದ್ದಾರೆ ಎಂದು ಸೇರಿಸಿದರು.

ಐಪಿಎಲ್ 2023ರ ಅದ್ಭುತ ಅಭಿಯಾನದ ವೇಳೆ ಜಿತೇಶ್ ಶರ್ಮಾ ಅವರು ಆಡಿದ 14 ಪಂದ್ಯಗಳಲ್ಲಿ 156.06ರ ಸ್ಟ್ರೈಕ್ ರೇಟ್‌ನೊಂದಿಗೆ 309 ರನ್ ಗಳಿಸಿದ ಬಳಿಕ ಭಾರತ ತಂಡವನ್ನು ಪ್ರವೇಶಿಸಿದರು.

"ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವಾಗ, ನೀವು ಸ್ಪಿನ್ ಬೌಲಿಂಗ್ ದಾಳಿ ಎದುರಿಸುತ್ತೀರಿ ಮತ್ತು ಅಲ್ಲಿ ಇಶಾನ್ ಕಿಶನ್ ಕೆಲವೊಮ್ಮೆ ತೊಂದರೆಗಳನ್ನು ಎದುರಿಸುತ್ತಾನೆ. ಜಿತೇಶ್ ಶರ್ಮಾ ಸ್ವಲ್ಪ ಸೃಜನಶೀಲ ಆಟಗಾರ. ಅವರು ಸೂರ್ಯಕುಮಾರ್ ಯಾದವ್-ಅಚ್ಚು ಮಾದರಿಯ ಆಟಗಾರ. ಅವರು ಲ್ಯಾಪ್ ಮತ್ತು ವಿವಿಧ ರೀತಿಯ ಶಾಟ್‌ಗಳನ್ನು ಆಡುವುದನ್ನು ನೀವು ನೋಡುತ್ತೀರಿ," ಎಂದು ಇರ್ಫಾನ್ ಪಠಾಣ್ ತಿಳಿಸಿದರು.

ಜಿತೇಶ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಪಂದ್ಯಗಳನ್ನು ಆಡಲಿರುವ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಪಂದ್ಯವು ಮಳೆಯಿಂದ ರದ್ದಾಯಿತು.

ದಕ್ಷಿಣ ಆಫ್ರಿಕಾ ಪ್ರವಾಸದ ನಂತರ, ಭಾರತ ತಂಡವು 2024ರ ಟಿ20 ವಿಶ್ವಕಪ್‌ಗೆ ತಯಾರಿಗಾಗಿ ಕೇವಲ ಮೂರು ಟಿ20 ಪಂದ್ಯಗಳನ್ನು ಆಡಲು ನಿರ್ಧರಿಸಿದೆ.

Story first published: Monday, December 11, 2023, 17:43 [IST]
Other articles published on Dec 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+