For Quick Alerts
ALLOW NOTIFICATIONS  
For Daily Alerts
 

IND vs SA: ಜನ್ಮದಿನದಂದು ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕುಲ್ದೀಪ್ ಯಾದವ್

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕೊನೆಯ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ನಾಯಕ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ಬೌಲಿಂಗ್‌ನಲ್ಲಿ ಕುಲ್ದೀಪ್ ಯಾದವ್‌ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದೆ.

ಕುಲ್ದೀಪ್ ಯಾದವ್ ಭರ್ಜರಿ ಪ್ರದರ್ಶನವನ್ನು ನೀಡಿ ತಮ್ಮ 29ನೇ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಂಡರು. ಕುಲದೀಪ್ ಯಾದವ್ ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹುಟ್ಟುಹಬ್ಬದಂದು ಅತ್ಯುತ್ತಮ ಬೌಲಿಂಗ್ ಮಾಡಿದ ಬೌಲರ್ ಎನಿಸಿಕೊಂಡರು. ಈ ಪಂದ್ಯದಲ್ಲಿ ಭಾರತದ ಈ ಎಡಗೈ ಸ್ಪಿನ್ ಬೌಲರ್ ಕೇವಲ 2.5 ಓವರ್ ಬೌಲ್ ಮಾಡಿ 17 ರನ್ ನೀಡಿ ಆತಿಥೇಯ ತಂಡದ 5 ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳುಹಿಸಿದರು. ಬರ್ತಡೆ ದಿನ ಇಂತಹದ್ದೊಂದು ಪ್ರದರ್ಶನ ನೀಡಿದ್ದು ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ.

IND vs SA: Kuldeep Yadavs brilliant performance in T20 cricket on his birthday

ಕುಲ್ದೀಪ್ ಯಾದವ್ ನಂತರ, ಈ ಪಟ್ಟಿಯಲ್ಲಿ ಶ್ರೀಲಂಕಾದ ವನಿಂದು ಹಸರಂಗ ಹೆಸರು ಬರುತ್ತದೆ. ಅವರು 2021 ರಲ್ಲಿ ತಮ್ಮ ಜನ್ಮದಿನದಂದು ಕೊಲಂಬೊ ಮೈದಾನದಲ್ಲಿ ಭಾರತದ ವಿರುದ್ಧ ಟಿ20 ಪಂದ್ಯದಲ್ಲಿ ಕೇವಲ 9 ರನ್‌ಗಳಿಗೆ 4 ವಿಕೆಟ್ ಪಡೆದಿದ್ದರು.

ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ ಬೌಲರ್ ಇಮ್ರಾನ್ ತಾಹಿರ್ ಮೂರನೇ ಸ್ಥಾನದಲ್ಲಿದ್ದಾರೆ. 2014ರಲ್ಲಿ ಚಿತ್ತಗಾಂಗ್ ಮೈದಾನದಲ್ಲಿ ನೆದರ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಇಮ್ರಾನ್ ತಾಹಿರ್ 21 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಆದ್ದರಿಂದ, ಈ ಮೂರು ಬೌಲಿಂಗ್ ಪ್ರದರ್ಶನಗಳು T20 ಕ್ರಿಕೆಟ್‌ನಲ್ಲಿ ಹುಟ್ಟುಹಬ್ಬದ ಅತ್ಯುತ್ತಮ ಪ್ರದರ್ಶನಗಳಾಗಿವೆ.

IND vs SA: Kuldeep Yadavs brilliant performance in T20 cricket on his birthday

ಯುವರಾಜ್ ಮತ್ತು ಜಡೇಜಾ ಸಹ ತಮ್ಮ ಜನ್ಮದಿನದಂದೇ ಉತ್ತಮ ಪ್ರದರ್ಶನ ನೀಡಿದ್ದರು. ಕುಲ್ದೀಪ್ ಯಾದವ್ ಹೊರತುಪಡಿಸಿ, ಯುವರಾಜ್ ಸಿಂಗ್ ಮತ್ತು ರವೀಂದ್ರ ಜಡೇಜಾ ಕೂಡ ತಮ್ಮ ಜನ್ಮದಿನದಂದು T20 ಪಂದ್ಯಗಳಲ್ಲಿ ಸೊಗಸಾದ ಪ್ರದರ್ಶನ ನೀಡಿದ್ದಾರೆ. ಮೊದಲನೆಯದಾಗಿ ಯುವರಾಜ್ ಸಿಂಗ್ 2009ರಲ್ಲಿ ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 23 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು.

2020 ರಲ್ಲಿ ಹೈದರಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜಾ ತಮ್ಮ ಹುಟ್ಟುಹಬ್ಬದಂದು 30 ರನ್‌ಗಳಿಗೆ 1 ವಿಕೆಟ್ ಪಡೆದಿದ್ದರು. T20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಈ ಮೂವರು ಭಾರತೀಯ ಬೌಲರ್‌ಗಳಾಗಿದ್ದು, ಎಡಗೈ ಸ್ಪಿನ್ ಬೌಲರ್‌. ಅಲ್ಲದೆ ಎಲ್ಲರ ಹುಟ್ಟುಹಬ್ಬ ಡಿಸೆಂಬರ್‌ನಲ್ಲಿ ಬರುತ್ತದೆ.

Story first published: Friday, December 15, 2023, 8:49 [IST]
Other articles published on Dec 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+