ಹೀಗೆ ಮಾಡಿದರೆ ಸಾಕು ಕೊಹ್ಲಿಯೇ ವಿಕೆಟ್ ಒಪ್ಪಿಸಿ ಹೋಗ್ತಾರೆ: ಮತ್ತೆ ಮುಗ್ಗರಿಸಿದ ಕೊಹ್ಲಿ ಕಾಲೆಳೆದ ನೆಟ್ಟಿಗರು

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಕಣಕ್ಕಿಳಿಯುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ಟೆಸ್ಟ್ ಸರಣಿ ಆರಂಭವಾಗಿದ್ದು, ಈ ಸರಣಿ ಪೈಕಿಯ ಚೊಚ್ಚಲ ಪಂದ್ಯ ಡಿಸೆಂಬರ್ 26ರಿಂದ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ.
ಹೀಗೆ ಬಾಕ್ಸಿಂಗ್ ಡೇನಂದು ಆರಂಭಗೊಂಡ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲನೇ ದಿನ ಯಾವುದೇ ಅಡಚಣೆ ಇಲ್ಲದೇ ನಡೆಯಿತು. ಟಾಸ್ ಗೆದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡರು. ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡದ್ದು ಸರಿಯಾದ ಆಯ್ಕೆಯಾಗಿತ್ತು. ಭಾರತ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಪ್ರದರ್ಶನ ನೀಡಿದರು. ಟೀಮ್ ಇಂಡಿಯಾ ಮೊದಲನೇ ದಿನದಾಟದಂದು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿತ್ತು. ನಂತರ ದ್ವಿತೀಯ ದಿನ ಮಳೆಗೆ ಆಹುತಿಯಾದರೆ ತೃತೀಯ ದಿನದಂದು ಮತ್ತೆ ಪಂದ್ಯ ಆರಂಭವಾಯಿತು. ಹೀಗೆ ತೃತೀಯ ದಿನದಾಟದಂದು 327 ರನ್‌ಗಳಿಗೆ ಟೀಮ್ಇಂಡಿಯಾ ಆಲ್ ಔಟ್ ಆಯಿತು. ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಲುಂಗಿ ಎನ್ ಗಿಡಿ ಎಸೆತದಲ್ಲಿ ಕವರ್ ಡ್ರೈವ್ ಬಾರಿಸಲು ಹೋಗಿ ಮಲ್ಡರ್ ಅವರಿಗೆ ಕ್ಯಾಚ್ ನೀಡಿ 35 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಅಷ್ಟೇ ಅಲ್ಲದೇ ಪಂದ್ಯದ ನಾಲ್ಕನೇ ದಿನದಂದು ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್ ಮಾಡಿರುವ ವಿರಾಟ್ ಕೊಹ್ಲಿ ಮತ್ತೆ ಅದೇ ತಪ್ಪನ್ನು ಮಾಡಿದ್ದು ಆಫ್ ಸೈಡ್ ಎಸೆತಕ್ಕೆ ಹೊಡೆತ ಬಾರಿಸಲು ಹೋಗಿ ಔಟ್ ಆಗಿದ್ದಾರೆ. ಮಾರ್ಕೋ ಜೆನ್ಸೆನ್ ಎಸೆದ ಆಫ್ ಸೈಡ್ ಬಾಲನ್ನು ಹೊಡೆಯಲು ಹೋದ ವಿರಾಟ್ ಕೊಹ್ಲಿ ವಿಫಲರಾಗಿ ಕ್ವಿಂಟನ್ ಡಿ ಕಾಕ್ ಅವರಿಗೆ ಕ್ಯಾಚ್ ನೀಡಿ 18 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಆಫ್‌ಸೈಡ್ ಎಸೆತವನ್ನು ಹೊಡೆಯಲು ಹೋಗಿ ಎಡವಿದ್ದಾರೆ. ಹೀಗೆ ಪದೇ ಪದೇ ಆಫ್‌ಸೈಡ್ ಎಸೆತಗಳ ಎದುರು ಸೋಲುತ್ತಿರುವ ವಿರಾಟ್ ಕೊಹ್ಲಿ ಕುರಿತಾಗಿ ನೆಟ್ಟಿಗರು ಟೀಕೆಗಳನ್ನು ಮಾಡಿದ್ದು ಈ ಕೆಳಕಂಡಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ..

ಎಲ್ಲಾ ಎಸೆತಗಳನ್ನು ಬಾರಿಸಲೇಬೇಕು ಎಂಬ ನಿಯಮವೇನಿಲ್ಲ
ವಿರಾಟ್ ಕೊಹ್ಲಿ ಆಫ್ ಸೈಡ್ ಎಸೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿರುವುದರ ಕುರಿತು ಬೇಸರ ವ್ಯಕ್ತಪಡಿಸಿರುವ ಅಭಿಮಾನಿಯೋರ್ವ ಟ್ವಿಟರ್ ಮೂಲಕ ವಿರಾಟ್ ಕೊಹ್ಲಿ ಬಳಿ ಮನವಿ ಮಾಡಿಕೊಂಡಿದ್ದಾನೆ. ಪಂದ್ಯದ ಎಲ್ಲಾ ಎಸೆತಗಳನ್ನು ಕೂಡ ಬಾರಿಸಲೇಬೇಕು ಎಂಬ ನಿಯಮವೇನಿಲ್ಲ, ಹೀಗಾಗಿ ಆಫ್ ಸೈಡ್ ಎಸೆತಗಳಿಗೆ ಬ್ಯಾಟ್ ಬೀಸದೇ ದಯವಿಟ್ಟು ಸುಮ್ಮನೆ ಇದ್ದುಬಿಡಿ, ನೀವು ನಮಗೆ ತುಂಬಾ ನೋವನ್ನು ಕೊಡುತ್ತಿದ್ದೀರಾ ಎಂದು ಮನವಿಯನ್ನು ಮಾಡಿಕೊಂಡಿದ್ದಾನೆ.

ಮತ್ತದೇ ತಪ್ಪು ಮಾಡಿದ ಕೊಹ್ಲಿ
ಇನ್ನು ವಿರಾಟ್ ಕೊಹ್ಲಿ ಇತ್ತೀಚಿನ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚಾಗಿ ಆಫ್ ಸೈಡ್ ಎಸೆತಗಳಿಗೆ ಬ್ಯಾಟ್ ಬೀಸಿ ವಿಕೆಟ್ ಒಪ್ಪಿಸಿ ಔಟ್ ಆಗಿದ್ದಾರೆ. ಅದೇ ರೀತಿ ಇಂದಿನ ಪಂದ್ಯದಲ್ಲಿಯೂ ಕೂಡ ವಿರಾಟ್ ಕೊಹ್ಲಿ ಅದೇ ತಪ್ಪನ್ನು ಮಾಡಿದ್ದು ವಿಕೆಟ್ ಕಳೆದುಕೊಂಡಿದ್ದಾರೆ ಹಾಗೂ ಅವರ 71ನೇ ಶತಕಕ್ಕೆ ಕಾಯುವಿಕೆ ಮುಂದುವರಿದಿದೆ ಎಂದು ನೆಟ್ಟಿಗನೋರ್ವ ಟ್ವೀಟ್ ಮಾಡಿದ್ದಾನೆ.

ನಾನೂ ಕೊಹ್ಲಿ ವಿಕೆಟ್ ಪಡೆಯಬಲ್ಲೆ ಎಂದ ನೆಟ್ಟಿಗ
ವಿರಾಟ್ ಕೊಹ್ಲಿ ಆಫ್ ಸೈಡ್ ಎಸೆತಗಳನ್ನು ಎದುರಿಸಲಾಗದೇ ಕ್ಯಾಚ್ ನೀಡಿ ಔಟ್ ಆಗುತ್ತಿರುವುದರ ಕುರಿತು ಪ್ರತಿಕ್ರಿಯಿಸಿರುವ ಮತ್ತೋರ್ವ ನೆಟ್ಟಿಗ ನಾನೂ ಕೂಡ ವಿರಾಟ್ ಕೊಹ್ಲಿ ವಿಕೆಟ್‍ನ್ನು ಸತತವಾಗಿ 10 ಆಫ್ ಸೈಡ್ ಎಸೆತಗಳನ್ನು ಎಸೆಯುವುದರ ಮೂಲಕ ಪಡೆಯಬಲ್ಲೆ ಎಂದು ಕಾಲೆಳೆದಿದ್ದಾನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications