IND vs SA: ಆತನನ್ನು ಬದಲಿಸದಿದ್ದರೆ ಟೀಮ್ ಇಂಡಿಯಾ ಸರಣಿಯನ್ನೇ ಸೋಲುತ್ತೆ ಎಂದ ನೆಟ್ಟಿಗರು!

5 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನಾಡಲು ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಇಂದು ( ಜೂನ್ 9 ) ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆಯನ್ನು ಕಾಯ್ದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಫೀಲ್ಡಿಂಗ್ ಆಯ್ದುಕೊಂಡು ಆತಿಥೇಯ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಕಲೆಹಾಕಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಆದರೂ ಸಹ ಈ ಕಠಿಣ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿಯೇ ಗುರಿ ಮುಟ್ಟಿತು.
ದಕ್ಷಿಣ ಆಫ್ರಿಕಾ ಪರ ನಾಲ್ಕನೇ ವಿಕೆಟ್‌ಗೆ ಜತೆಯಾಗಿ ಅಜೇಯ 132 ರನ್‌ಗಳ ಜತೆಯಾಟವನ್ನಾಡಿದ ಡೇವಿಡ್ ಮಿಲ್ಲರ್ ಮತ್ತು ವಾನ್ ಡರ್ ಡಸನ್ ಜೋಡಿ ವಿಶ್ವ ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದ್ದ ಟೀಮ್ ಇಂಡಿಯಾದ ಬೃಹತ್ ಕನಸಿಗೆ ಕಲ್ಲು ಹಾಕಿದೆ. ಹೌದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿದ್ದರೆ, 13 ಟಿ ಟ್ವೆಂಟಿ ಪಂದ್ಯಗಳಲ್ಲಿ ಸತತವಾಗಿ ಜಯ ಗಳಿಸಿದ ಚೊಚ್ಚಲ ತಂಡ ಎಂಬ ವಿಶ್ವದಾಖಲೆ ಬರೆಯುತ್ತಿತ್ತು. ಹೀಗೆ ವಿಶ್ವದಾಖಲೆ ರಚಿಸುವುದನ್ನು ಕೈ ತಪ್ಪಿಸಿಕೊಂಡಿರುವ ಟೀಮ್ ಇಂಡಿಯಾ ಸೋತ ನಂತರ ನೆಟ್ಟಿಗರು ರೊಚ್ಚಿಗೆದ್ದು ಸಾಲುಸಾಲು ಟ್ವೀಟ್ ಮಾಡುತ್ತಿದ್ದು, ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಈತ ಸರಣಿ ಗೆಲ್ಲಲು ಬಿಡುವುದಿಲ್ಲ
ರಿಷಭ್ ಪಂತ್ ನಾಯಕನಾಗಿದ್ದರೆ ಭಾರತ ಸರಣಿ ಗೆಲ್ಲಲು ಬಿಡುವುದಿಲ್ಲ, ನಾಯಕನಾಗಿ ತಾನೊಬ್ಬ ಅಸಮರ್ಥ ಎಂಬುದನ್ನು ಆತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೇ ಸಾಬೀತುಪಡಿಸಿಕೊಂಡಿದ್ದಾನೆ, ಆದಷ್ಟು ಬೇಗ ಆತನನ್ನು ಬದಲಿಸಬೇಕಾದ ಅಗತ್ಯವಿದೆ ಎಂದು ನೆಟ್ಟಿಗನೋರ್ವ ಬರೆದುಕೊಂಡಿದ್ದಾರೆ.

ಆತ ವಿಕೆಟ್ ಕೀಪರ್ ಆದ ಮಾತ್ರಕ್ಕೆ ಧೋನಿ ಆಗುವುದಿಲ್ಲ
ಮತ್ತೋರ್ವ ನೆಟ್ಟಿಗ ರಿಷಬ್ ಪಂತ್ ಕಳಪೆ ನಾಯಕತ್ವದ ವಿರುದ್ಧ ಕಿಡಿಕಾರಿದ್ದು, ಆತನನ್ನು ಟೀಮ್ ಇಂಡಿಯಾದ ಮುಂದಿನ ನಾಯಕ ಎಂದು ಯಾಕೆ ಬಿಂಬಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ, ವಿಕೆಟ್ ಕೀಪರ್ ಆದ ಮಾತ್ರಕ್ಕೆ ಆತ ಧೋನಿಯಂತೆ ಉತ್ತಮ ನಾಯಕನಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಉತ್ತಮ ಗುಣಮಟ್ಟದ ಬೌಲರ್‌ಗಳನ್ನೂ ಉಪಯೋಗಿಸಲು ಬರುವುದಿಲ್ಲ
ಮತ್ತೋರ್ವ ನೆಟ್ಟಿಗ ರಿಷಬ್ ಪಂತ್ ಕಾಲೆಳೆದಿದ್ದು, ಧನ್ಯವಾದಗಳು ಭಾರತದ ಭವಿಷ್ಯದ ಎಂಎಸ್ ಧೋನಿ ಅವರಿಗೆ, ತಂಡದಲ್ಲಿ ಅತ್ಯುತ್ತಮ ಗುಣಮಟ್ಟದ ಬೌಲರ್‌ಗಳಿದ್ದರೂ ಅವರನ್ನು ಸರಿಯಾಗಿ ಬಳಸಿಕೊಳ್ಳಲು ಬಂದಿಲ್ಲ ಎಂದು ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications