For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: ಮೊದಲ ಪಂದ್ಯದಲ್ಲಿ ಭಾರತ ಎಡವಿದ್ದೆಲ್ಲಿ?: ಶಿಖರ್ ಧವನ್ ಹೇಳಿದ್ದಿಷ್ಟು

Ind vs SA: Shikhar Dhawan explain the reason for defeat in first ODI afainst South Africa

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಆರಂಭದ ಹೊರತಾಗಿಯೂ ಅದರ ಯಶಸ್ಸು ಮುಂದುವರಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಎಲ್ ರಾಹುಲ್ ನಾಯಕತ್ವದ ಭಾರತ ತಂಡ 31 ರನ್‌ಗಳ ಅಂತರದಿಂದ ಸೋಲು ಕಂಡಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ 79 ರನ್‌ಗಳ ಕೊಡುಗೆ ನೀಡಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಶಾರ್ದೂಲ್ ಠಾಕೂರ್ ಕೂಡ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಈ ಸೋಲಿನ ಬಳಿಕ ಶಿಖರ್ ಧವನ್ ಮಾತನಾಡಿದ್ದು ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಎಲ್ಲಿ ಎಡವಿತು ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ.

ಪಿಚ್ ನಿಧಾನವಾಗಿತ್ತು ಚೇಸಿಂಗ್ ಸುಲಭವಿರಲಿಲ್ಲ: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಈ ಪಿಚ್ ನಿರ್ಧಾನವಾಗಿತ್ತು, ಅಲ್ಲದೆ ಸಾಕಷ್ಟು ತಿರುವು ಕೂಡ ಪಡೆಯುತ್ತಿತ್ತು. ಭಾರತೀಯ ತಂಡದ ಮಧ್ಯನಮ ಕ್ರಮಾಂಕಕ್ಕೆ 300 ರನ್‌ಗಳನ್ನು ಬೆನ್ನಟ್ಟುವುದು ಸುಲಭ ಸವಾಲಾಗಿರಲಿಲ್ಲ ಎಂದು ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ಬಾರದ ಹೊರತಾಗಿ ಈ ರನ್ ಬೆನ್ನಟ್ಟುವುದು ಸುಲಭವಾಗಿರಲಿಲ್ಲ ಎಂದು ಧವನ್ ಹೇಳಿದ್ದಾರೆ.

"ನಾವು ಉತ್ತಮ ಆರಂಭವನ್ನು ಪಡೆದುಕೊಂಡೆವು. ನನ್ನ ಪ್ರಕಾರ ವಿಕೆಟ್ ನಿಧಾನವಾಗಿತ್ತು. ಅಲ್ಲದೆ ಉತ್ತಮವಾದ ತಿರುವು ಕೂಡ ಪಡೆದುಕೊಳ್ಳುತ್ತಿತ್ತು. ಇಂತಾ ಸಂದರ್ಭದಲ್ಲಿ ನೀವು 300 ರನ್‌ಗಳನ್ನು ಬೆನ್ನಟ್ಟುತ್ತಿದ್ದೀರಿ ಎಂದಾದರೆ ಮಧ್ಯಮ ಕ್ರಮಾಂಕದಿಂದ ಉತ್ತಮ ಕೊಡುಗೆ ಬರಬೇಕಿದೆ. ಇಲ್ಲಿ ಹೊಡೆತಗಳನ್ನು ಬಾರಿಸುವುದು ಸುಲಭವಾಗಿರಲಿಲ್ಲ" ಎಂದು ಶಿಖರ್ ಧವನ್ ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡ ಜೊತೆಯಾಟ ಬಾರಲಿಲ್ಲ: ಮುಂದುವರಿದು ಮಾತನಾಡಿದ ಶಿಖರ್ ಧವನ್ ಟೀಮ್ ಇಂಡಿಯಾ ಪರವಾಗಿ ಬೃಹತ್ ಜೊತೆಯಾಟ ಬರಲಿಲ್ಲ ಇದು ಕೂಡ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಆಪ್ರಿಕಾ ತಂಡದ ಪರವಾಗಿ ಶತಕದ ಸಿಡಿಸಿದ ಇಬ್ಬರು ಆಟಗಾರಾದ ಟೆಂಬಾ ಬವುಮಾ ಹಾಗೂ ರಾಸಿನ್ ವೆಂಡರ್‌ ಡಸ್ಸೆನ್ ಪ್ರದರ್ಶನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಇಬ್ಬರ ಆಟದಿಂದಾಗಿ ಹರಿಣಗಳು ಸುಸ್ಥಿತಿಗೆ ತಲುಪಿದ್ದರು ಎಂದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. 19 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಹರಿಣಗಳ ಪಡೆ 68 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಟೆಂಬಾ ಬವುಮಾ ಹಾಗೂ ರಾಸಿನ್ ವೆಂಡರ್‌ ಡಸ್ಸೆನ್ ಜೋಡಿ ಅಮೋಘ ಪ್ರದರ್ಶನ ನೀಡಿದ್ದು ದ್ವಿಶತಕದ ಜೊತೆಯಾಟ ನೀಡಿದರು. ನಾಯಕ ಟೆಂಬಾ ಬವುಮಾ 110 ರನ್‌ಗಳ ಕೊಡುಗೆ ನೀಡಿದರೆ ಡಸ್ಸೆನ್ ಅಜೇಯ 129 ರನ್‌ಗಳನ್ನು ಸಿಡಿಸಿದರು. ಈ ಮೂಲಕ 4 ವಿಕೆಟ್‌ಗಳನ್ನು ಕಳೆದುಕೊಂಡು 296 ರನ್‌ಗಳಿಸಿತು.

ಈ ಗುರಿ ಬೆನ್ನಟ್ಟಿದ ಭಾರತ ತಂಡ 46 ರನ್‌ಗಳಿಸುವಷ್ಟರಲ್ಲಿ ನಾಯಕ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಅದ್ಭುತವಾದ ಜೊತೆಯಾಟವನ್ನು ನೀಡಿದರು. ಶಿಖರ್ ಧವನ್ 79 ರನ್‌ಗಳಿಸಿ ಔಟಾಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ನಂತರ ವಿರಾಟ್ ಕೊಹ್ಲಿ ಕೂಡ ಅರ್ಧ ಶತಕ ಸಿಡಿಸಿದ ನಂತರ ವಿಕೆಟ್ ಕಳೆದುಕೊಂಡರು. ಬಳಿಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರು ನೀರಸ ಪ್ರದರ್ಶನ ನೀಡಿ ಫೆವಿಲಿಯನ್‌ಗೆ ಸಾಗಿದರು. ಈ ಮಧ್ಯೆ ಶಾರ್ದೂಲ್ ಠಾಕೂರ್ ಕೆಳ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿ ಅರ್ಧ ಶತಕವನ್ನು ಗಳಸಿಇದರು. ಆದರೆ ಈ ಪ್ರದರ್ಶನ ತಂಡಕ್ಕೆ ಹೆಚ್ಚಿನ ಲಾಭವನ್ನುಂಟು ಮಾಡಲಿಲ್ಲ.

Story first published: Thursday, January 20, 2022, 14:03 [IST]
Other articles published on Jan 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+