ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ದ. ಆಫ್ರಿಕಾದ ವೇಗಿ ಔಟ್!: ಸರಣಿ ಆರಂಭಕ್ಕೆ ಮುನ್ನ ಹರಿಣಗಳಿಗೆ ಭಾರೀ ಹಿನ್ನಡೆ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ದಕ್ಷಿಣ ಆಫ್ರಿಕಾ ನೆಲದಲ್ಲಿ ಈವರೆಗೂ ಟೆಸ್ಟ್ ಸರಣಿಯನ್ನು ಭಾರತ ತಂಡಕ್ಕೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಈ ದಾಖಲೆಯನ್ನು ಬದಲಾಯಿಸಲು ವಿರಾಟ್ ಕೊಹ್ಲಿ ಪಡೆ ಸಕಲ ರೀತಿಯಲ್ಲಿಯೂ ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಕೂಡ ತನ್ನ ನೆಲದಲ್ಲಿ ಭಾರತ ತಂಡಕ್ಕೆ ಮತ್ತೊಂದು ಬಾರಿ ಆಘಾತ ನೀಡಲು ಹಾತೊರೆಯುತ್ತಿದೆ. ಆದರೆ ಈ ಸರಣಿಯ ಆರಂಭಕ್ಕೆ ಮುನ್ನವೇ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತವೊಂದು ಎದುರಾಗಿದೆ.
ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಗಾಯಗೊಂಡಿದ್ದಾರೆ. ಹೀಗಾಗಿ ಬಹು ನಿರೀಕ್ಷಿತ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಅವರು ಹೊರಗುಳಿಯುವುದು ಖಚಿತಾವಾಗಿದೆ. ಈ ಬೆಳವಣಿಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರೀ ಹಿನ್ನಡೆ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾದರೆ ಈ ಪ್ರಮುಖ ಸರಣಿಯಿಂದ ಹೊರಬಿದ್ದ ದಕ್ಷಿಣ ಆಫ್ರಿಕಾದ ಆ ಪ್ರಮುಖ ಆಟಗಾರ ಯಾರು? ಮುಂದೆ ಓದಿ..

ಗಾಯಗೊಂಡ ವೇಗಿ ನಾರ್ಕಿಯಾ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಯುವ ವೇಗಿ ಅನ್ರಹ್ ನಾರ್ಕಿಯಾ ಭಾರತ ವಿರುದ್ದದ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದ ಆಟಗಾರನಾಗಿದ್ದಾರೆ. ನಿರಂತರವಾಗಿ ಗಾಯಗೊಳ್ಳುತ್ತಿರುವ ಕಾರಣದಿಂದಾಗಿ ಈ ಸರಣಿಯಿಂದ ನಾರ್ಕಿಯಾ ಹೊರಬಿದ್ದಿದ್ದಾರೆ. ಈ ಬೆಳವಣಿಗೆ ದಕ್ಷಿಣ ಆಫ್ರಿಕಾಗೆ ಹಿನ್ನಡೆಯುಂಟು ಮಾಡುವುದರಲ್ಲಿ ಅನುಮಾನವಿಲ್ಲ.

ಭಾರತದ ಪಾಲಿಗೆ ಕಂಟಕವಾಗಬಲ್ಲ ಬೌಲರ್
ಅನ್ರಹ್ ನಾರ್ಕಿಯಾ ತನ್ನ ವೇಗ ಹಾಗೂ ಸ್ಥಿರ ಬೌಲಿಂಗ್ ದಾಳಿಯಿಂದಾಗಿ ಭಾರತೀಯ ಬ್ಯಾಟರ್‌ಗಳ ಪಾಲಿಗೆ ಅಕ್ಷರಶಃ ಕಂಟಕವಾಗಬಲ್ಲ ಸಾಮರ್ಥ್ಯವನ್ನು ಹೊಂದಿರುವ ಬೌಲರ್ ಆಗಿದ್ದಾರೆ. ಐಪಿಎಲ್‌ನ್ಲಲಿಯೂ ನಾರ್ಕಿಯಾ ಆಡುತ್ತಿರುವ ಕಾರಣ ನಾರ್ಕಿಯಾ ಅವರ ಬೌಲಿಂಗ್‌ನ ತೀವ್ರತೆಯ ಆರಿವು ಭಾರತೀಯ ಬ್ಯಾಟರ್‌ಗಳಿಗೆ ಇದೆ. ವೇಗದ ಬೌಲರ್‌ಗಳ ಪಾಲಿಗೆ ಸ್ವರ್ಗ ಎನಿಸುವ ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ನಾರ್ಕಿಯಾ ಭಾರತೀಯ ತಂಡಕ್ಕೆ ಅಪಾಯಕಾರಿಯಾಗಿರುತ್ತಿದ್ದರು. ಇನ್ನು ನಾರ್ಕಿಯಾ ಅವರನ್ನು ಎದುರಿಸುವ ನಿಟ್ಟಿನಲ್ಲಿ ಕೂಡ ಭಾರತೀಯ ಬೌಲರ್‌ಗಳು ಕೆಲ ರಣತಂತ್ರಗಳನ್ನು ಹೆಣೆದಿದ್ದರು.
ಭಾರತ vs ದ. ಆಫ್ರಿಕಾ: ಮೊದಲ ಟೆಸ್ಟ್‌ನ ಆಡುವ ಬಳಗದಲ್ಲಿ ಯಾರಿಗೆಲ್ಲಾ ಸ್ಥಾನ? ರಹಾನೆ, ವಿಹಾರಿ ಮೇಲೆ ಕಣ್ಣು!

ಅಧಿಕೃತ ಮಾಹಿತಿ ನೀಡಿದ ಸಿಎಸ್‌ಎ
ಇನ್ನು ಅನ್ರಹ್ ನಾರ್ಕಿಯಾ ಭಾರತ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಅಧಿಕೃತವಾಗಿ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ. 28ರ ಹರೆಯದ ಈ ವೇಗದ ಬೌಲರ್ ಕಳೆದ ಟಿ20 ವಿಶ್ವಕಪ್‌ನ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಬಾಕ್ಸಿಂಗ್ ಡೇಯಂದು ಆರಂಭವಾಗಲಿರುವ ಟೆಸ್ಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಇನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಾರ್ಕಿಯಾ ಅವರಿಗೆ ಬದಲಿ ಆಟಗಾರನನ್ನು ಹೆಸರಿಸಿಲ್ಲ.

ದಕ್ಷಿಣ ಆಫ್ರಿಕಾ ಟೆಸ್ಟ್ ಸ್ಕ್ವಾಡ್
ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡ: ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್-ಕೀಪರ್), ಕಗಿಸೊ ರಬಾಡ, ಸರೆಲ್ ಎರ್ವೀ, ಬ್ಯೂರಾನ್ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಏಡೆನ್ ಮಾರ್ಕ್ರಂ, ವಿಯಾನ್ ಮುಲ್ಡರ್, ಕೀಗನ್ ಪೀಟರ್‌ಸೆನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ಗ್ಲೆಂಟನ್ ಸ್ಟೌರ್‌ಮನ್, ಪ್ರೆನೆಲನ್ ಸುಬ್ರಾಯೆನ್, ಸಿಸಂಡಾ ಮಗಾಲಾ, ರಿಯಾನ್ ರಿಕೆಲ್ಟನ್, ಡುವಾನ್ನೆ ಒಲಿವಿಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications