For Quick Alerts
ALLOW NOTIFICATIONS  
For Daily Alerts
 

IND vs SA: ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಗೆಲ್ಲುವ ನೆಚ್ಚಿನ ತಂಡ ತಿಳಿಸಿದ ವಾಸಿಂ ಜಾಫರ್

IND vs SA: South Africa Is The Favorite Team To Win In The Absence Of KL Rahul Says Wasim Jaffer

ನವದೆಹಲಿಯಲ್ಲಿ ಗುರುವಾರದಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತವನ್ನು ಎದುರಿಸುತ್ತಿರುವ ದಕ್ಷಿಣ ಆಫ್ರಿಕಾವು ನೆಚ್ಚಿನ ತಂಡವಾಗಿ ತನ್ನ ಅಭಿಯಾನ ಪ್ರಾರಂಭಿಸಲಿದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ವಾಸಿಂ ಜಾಫರ್ ಹೇಳಿದ್ದಾರೆ. ಕೆಎಲ್ ರಾಹುಲ್ ಅನುಪಸ್ಥಿತಿಯು ಭಾರತ ಟಿ20 ತಂಡಕ್ಕೆ ದೊಡ್ಡ ಹಿನ್ನಡೆ ಎಂದು ಜಾಫರ್ ತಿಳಿಸಿದ್ದಾರೆ.

ತೊಡೆಸಂದು ಗಾಯದ ನಂತರ ಕೆಎಲ್ ರಾಹುಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಐದು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದು, ಅವರ ಅನುಪಸ್ಥಿತಿಯಲ್ಲಿ, ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ನಾಯಕರನ್ನಾಗಿ ಆಯ್ಕೆ ಮಾಡಿದ್ದರೆ, ಹಾರ್ದಿಕ್ ಪಾಂಡ್ಯರನ್ನು ಉಪನಾಯಕರಾಗಿ ನೇಮಕ ಮಾಡಲಾಗಿದೆ.

ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ನನಗೆ ಅನುಮಾನ

ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ನನಗೆ ಅನುಮಾನ

"ನೀವು ಎರಡೂ ತಂಡವನ್ನು ಅಳೆದು ನೋಡಿದರೆ, ಕೆಎಲ್ ರಾಹುಲ್ ಇಲ್ಲದ ಕಾರಣ ದಕ್ಷಿಣ ಆಫ್ರಿಕಾ ತಂಡ ಇದೀಗ ಗೆಲ್ಲುವ ನೆಚ್ಚಿನ ತಂಡ ಎಂದು ನಾನು ಭಾವಿಸುತ್ತೇನೆ. ಕುಲದೀಪ್ ಯಾದವ್ ಗಾಯಗೊಂಡಿದ್ದರೂ ಸಹ, ಕುಲದೀಪ್ ಯಾದವ್ 1ನೇ ಟಿ20ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ನನಗೆ ಅನುಮಾನವಿತ್ತು," ಎಂದಿದ್ದಾರೆ.

ರಾಹುಲ್ ಅನುಪಸ್ಥಿತಿಯು ಭಾರತಕ್ಕೆ ದೊಡ್ಡ ಹಿನ್ನಡೆ

ರಾಹುಲ್ ಅನುಪಸ್ಥಿತಿಯು ಭಾರತಕ್ಕೆ ದೊಡ್ಡ ಹಿನ್ನಡೆ

"ಆದರೆ ಕೆಎಲ್ ರಾಹುಲ್ ಅನುಪಸ್ಥಿತಿಯು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದ್ದು, ದಕ್ಷಿಣ ಆಫ್ರಿಕಾವು ನೆಚ್ಚಿನ ತಂಡವಾಗಿ ಟಿ20 ಸರಣಿ ಪ್ರಾರಂಭಿಸಲಿದೆ. ಏಕೆಂದರೆ ಅವರು ತಮ್ಮ ಅತ್ಯುತ್ತಮ ತಂಡವನ್ನು ತಂದಿದ್ದಾರೆ. ಅವರು ಪ್ರಬಲ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ ಮತ್ತು ಅವರ ಸ್ಪಿನ್ನರ್‌ಗಳು ಸಾಕಷ್ಟು ಉತ್ತಮರಾಗಿದ್ದಾರೆ," ಎಂದು ಜಾಫರ್ ESPNcricinfo ನೊಂದಿಗೆ ಮಾತನಾಡುತ್ತಾ ಹೇಳಿದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ರೋಚಕ ಟಿ20 ಸರಣಿಯ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಬೌಲರ್ ಡೇಲ್ ಸ್ಟೇಯ್ನ್ ಭವಿಷ್ಯ ನುಡಿದಿದ್ದು, "ಕೆಲವು ದೊಡ್ಡ ಪಂದ್ಯಗಳನ್ನು ಸೋತಿದ್ದರೂ, ಭಾರತವು ಟಿ20 ಪಂದ್ಯಗಳಲ್ಲಿ ಅನುಭವವಿರುವ ಉತ್ತಮ ಆಟಗಾರರನ್ನು ಹೊಂದಿದ್ದಾರೆ," ಎಂದು ತಿಳಿಸಿದ್ದಾರೆ.

5 ಅಥವಾ 6ನೇ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಮಿಂಚುತ್ತಾರೆ

5 ಅಥವಾ 6ನೇ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ಮಿಂಚುತ್ತಾರೆ

"ಇದು ನಿಕಟ ಪೈಪೋಟಿ ಹೊಂದಿರುವ ಸರಣಿಯಾಗಿದ್ದು, ಎಲ್ಲಾ ಭಾರತೀಯರು ಕ್ರಿಕೆಟ್ ಆಡುತ್ತಿದ್ದಾರೆ, ಅವರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಪರ ಆಡುತ್ತಿರುವ ಕೆಲವು ಆಟಗಾರರು ಐಪಿಎಲ್‌ನಲ್ಲಿ ಮಿಂಚಿದ್ದಾರೆ. ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್ ಮತ್ತು ರಾಸ್ಸಿ (ವಾನ್ ಡೆರ್ ಡಸ್ಸೆನ್) ಆಡಿದ್ದಾರೆ. 5 ಅಥವಾ 6ನೇ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನಂತರ ಕಾಗಿಸೊ ರಬಾಡಾ ಮತ್ತು ಆನ್ರಿಚ್ ನಾರ್ಟ್ಜೆ ಬ್ಯಾಕೆಂಡ್‌ನಲ್ಲಿ ಇದ್ದಾರೆ. ಇದು ಬಿಗಿಯಾದ ಟಿ20 ಸರಣಿಯಾಗಲಿದೆ," ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ.ಲೈವ್ ಟಿವಿಯೊಂದಿಗೆ ಮಾತನಾಡುವಾಗ ಡೇಲ್ ಸ್ಟೇಯ್ನ್ ಹೇಳಿದರು.

KL Rahul ಬದಲಿಗೆ ನಾಯಕತ್ವ ವಹಿಸಿಕೊಂಡ Rishab Pant ಹೇಳಿದ್ದೇನು? | *Cricket | OneIndia Kannada
ಭಾರತ ತಂಡದ ಸಂಭಾವ್ಯ ಆಡುವ 11ರ ಬಳಗ

ಭಾರತ ತಂಡದ ಸಂಭಾವ್ಯ ಆಡುವ 11ರ ಬಳಗ

ಭಾರತ: ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ/ ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್/ಅವೇಶ್ ಖಾನ್

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಡ್ವೈನ್ ಪ್ರಿಟೋರಿಯಸ್/ ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ

Story first published: Thursday, June 9, 2022, 17:19 [IST]
Other articles published on Jun 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+