For Quick Alerts
ALLOW NOTIFICATIONS  
For Daily Alerts
 

IND vs SA: ಎಂಎಸ್ ಧೋನಿ, ಆರೋನ್ ಫಿಂಚ್ ದಾಖಲೆ ಹಿಂದಿಕ್ಕಿದ ಸೂರ್ಯಕುಮಾರ್ ಯಾದವ್

ಮಂಗಳವಾರ, ಡಿಸೆಂಬರ್ 13ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಟಿ20 ಕ್ರಿಕೆಟ್‌ನಲ್ಲಿ 2000 ರನ್‌ಗಳನ್ನು ತಲುಪಿದ ಮೈಲಿಗಲ್ಲನ್ನು ಸಾಧಿಸಿದರು.

ಈ ಹೆಗ್ಗುರುತನ್ನು ತಲುಪಿದ ಜಂಟಿ-ವೇಗದ ಭಾರತೀಯ ಆಟಗಾರರಾಗಿದ್ದಾರೆ. ಮಂಗಳವಾರದಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.

IND vs SA: Suryakumar Yadav Overtakes MS Dhoni And Aaron Finch Record in T20i Cricket

ಭಾರತದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿಯೊಂದಿಗೆ 56 ಇನ್ನಿಂಗ್ಸ್‌ಗಳಲ್ಲಿ 2000 ಟಿ20 ರನ್‌ಗಳನ್ನು ವೇಗವಾಗಿ ಪೂರೈಸಿದ ಭಾರತದ ಆಟಗಾರನಾಗಿದ್ದರೆ, ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ ಮತ್ತು ಸಹ ಆಟಗಾರ ಮೊಹಮ್ಮದ್ ರಿಜ್ವಾನ್ 52 ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ.

ಭಾರತ ತಂಡದ ನಾಯಕರೂ ಆಗಿರುವ ಸೂರ್ಯಕುಮಾರ್ ಯಾದವ್ ಅವರು ಟಿ20 ಪಂದ್ಯಗಳ ತಮ್ಮ 56ನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಲಿಜಾಡ್ ವಿಲಿಯಮ್ಸ್ ಬೌಲಿಂಗ್‌ನಲ್ಲಿ ಮಿಡ್‌ವಿಕೆಟ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರನ್ನು ಸರಿಗಟ್ಟಿದರು.

ಟಿ20 ಕ್ರಿಕೆಟ್‌ನಲ್ಲಿ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ 2000 ಟಿ20 ರನ್‌ ಗಳಿಸಿದ ಜಂಟಿ-ಮೂರನೇ ವೇಗದ ಬ್ಯಾಟರ್ ಆಗಿದ್ದಾರೆ. 52ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದ ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಪಾಕಿಸ್ತಾನದ ಜೋಡಿಯನ್ನು ಹಿಂಬಾಲಿಸಿದ್ದಾರೆ.

ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ 2000 ಟಿ20 ರನ್‌ಗಳನ್ನು ತಲುಪಲು ತೆಗೆದುಕೊಂಡ ಎಸೆತಗಳ ಸಂಖ್ಯೆಯ ದೃಷ್ಟಿಯಿಂದ ಅತ್ಯಂತ ವೇಗದ ಆಟಗಾರನಾಗಿದ್ದಾರೆ. ಟೀಮ್ ಇಂಡಿಯಾ ಹಿಟ್ಟರ್ 1164 ಎಸೆತಗಳಲ್ಲಿ ಮೈಲುಗಲ್ಲು ತಲುಪಿದರು.

1283 ಎಸೆತಗಳ ಎಸೆತಗಳನ್ನು ಎದುರಿಸಿ 2000 ಟಿ20 ರನ್‌ಗಳನ್ನು ಗಳಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಆರೋನ್ ಫಿಂಚ್ ಅವರ ದಾಖಲೆಯನ್ನು ಮುರಿದರು.

ಸೂರ್ಯಕುಮಾರ್ ಯಾದವ್ ಅವರ 56 ರನ್‌ಗಳು ದಕ್ಷಿಣ ಆಫ್ರಿಕಾದಲ್ಲಿ ಟಿ20 ಪಂದ್ಯಗಳಲ್ಲಿ ಭಾರತೀಯ ನಾಯಕನ ಗರಿಷ್ಠ ಸ್ಕೋರ್ ಆಗಿದೆ. ಇದು 2007ರಲ್ಲಿ ಎಂಎಸ್ ಧೋನಿ ಅವರ 45 ರನ್‌ಗಳ ಗರಿಷ್ಠ ಸ್ಕೋರ್ ಅನ್ನು ಮೀರಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದ ಕುರಿತು ಹೇಳುವುದಾದರೆ, ಟಾಸ್ ಗೆದ್ದ ಪ್ರೋಟೀಸ್ ನಾಯಕ ಏಡೆನ್ ಮಾರ್ಕ್ರಾಮ್ ಭಾರತಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ 19.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್‌ಗಳನ್ನು ಕಲೆಹಾಕಿತ್ತು.

ಮಳೆ ಸುರಿದ ಕಾರಣ, ಆಟವನ್ನು ಅಲ್ಲಿಗೆ ನಿಲ್ಲಿಸಲಾಯಿತು. ಮಳೆ ನಿಂತ ನಂತರ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 15 ಓವರ್‌ಗಳಲ್ಲಿ 152 ರನ್‌ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಆಗ 13.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವು ಪಡೆದುಕೊಂಡಿತು.

Story first published: Wednesday, December 13, 2023, 16:55 [IST]
Other articles published on Dec 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+