For Quick Alerts
ALLOW NOTIFICATIONS  
For Daily Alerts
 

Ind vs SA: ಟಿ20 ನಾಯಕನಾಗಿ ಎಂಎಸ್ ಧೋನಿ, ವಿರಾಟ್ ಕೊಹ್ಲಿಯನ್ನು ಮೀರಿಸಲಿದ್ದಾರೆ ರಿಷಭ್ ಪಂತ್

Ind vs SA T20 Series: Captain Rishabh Pant Set To Overtake Virat Kohli, MS Dhoni In Elite List

ಕೆಎಲ್ ರಾಹುಲ್‌ಗೆ ಕೊನೆಯ ಕ್ಷಣದಲ್ಲಿ ಗಾಯವಾಗಿದ್ದು, ಹೀಗಾಗಿ ಗುರುವಾರದಿಂದ (ಜೂನ್ 9) ನವದೆಹಲಿಯಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಭಾರತಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಕೆಎಲ್ ರಾಹುಲ್ ಮತ್ತು ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರ ತೊಡೆಸಂದು ಗಾಯದಿಂದಾಗಿ ಟಿ20 ಸರಣಿಯಿಂದ ಹೊರಗುಳಿದ ನಂತರ ರಿಷಭ್ ಪಂತ್ ಅವರಗೆ ನಾಯಕನ ಸ್ಥಾನ ಒಲಿದುಬಂದಿದೆ. ಇನ್ನು ಉಪ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗಿದ್ದಾರೆ.

ಕೊಹ್ಲಿ, ಧೋನಿಯನ್ನು ಹಿಂದಿಕ್ಕಲಿದ್ದಾರೆ ಪಂತ್

ಕೊಹ್ಲಿ, ಧೋನಿಯನ್ನು ಹಿಂದಿಕ್ಕಲಿದ್ದಾರೆ ಪಂತ್

ಗುರುವಾರ ಸಂಜೆ ಭಾರತ ತಂಡದ ನಾಯಕತ್ವದ ಟೋಪಿ ಧರಿಸುವುದರೊಂದಿಗೆ ರಿಷಭ್ ಪಂತ್, ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರನ್ನು ಹಿಂದಿಕ್ಕಲಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಎರಡನೇ ಕಿರಿಯ ಭಾರತೀಯ ನಾಯಕ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಸುರೇಶ್ ರೈನಾ ಭಾರತದ ಅತ್ಯಂತ ಕಿರಿಯ ಟಿ20 ನಾಯಕ ಎಂಬ ದಾಖಲೆಯನ್ನು ಮಾಜಿ ಆಟಗಾರ ಸುರೇಶ್ ರೈನಾ ಹೊಂದಿದ್ದಾರೆ. ಅವರು 23 ವರ್ಷ ಮತ್ತು 197 ದಿನಗಳಿದ್ದಾಗ ಭಾರತ ಟಿ20 ತಂಡವನ್ನು ಮುನ್ನಡೆಸಿದ್ದರು ಮತ್ತು ಸದ್ಯಕ್ಕೆ ಅವರೇ ಆ ದಾಖಲೆಯನ್ನು ಮುಂದುವರಿಸಲಿದ್ದಾರೆ. ರಿಷಭ್ ಪಂತ್ 2ನೇ ಸ್ಥಾನದಲ್ಲಿ ನಾಯಕತ್ವ ಆರಂಭಿಸಲಿದ್ದಾರೆ. ರಿಷಭ್ ಪಂತ್ ಅಕ್ಟೋಬರ್ 1997 ರಲ್ಲಿ ಜನಿಸಿದ್ದು, 24 ವರ್ಷ ವಯಸ್ಸಿನವರಾಗಿದ್ದಾರೆ.

ರೈನಾ, ರಿಷಭ್ ಪಂತ್ ನಂತರದ ಸ್ಥಾನದಲ್ಲಿ ಎಂಎಸ್ ಧೋನಿ

ರೈನಾ, ರಿಷಭ್ ಪಂತ್ ನಂತರದ ಸ್ಥಾನದಲ್ಲಿ ಎಂಎಸ್ ಧೋನಿ

ಸುರೇಶ್ ರೈನಾ ಮತ್ತು ರಿಷಭ್ ಪಂತ್ ನಂತರದ ಸ್ಥಾನದಲ್ಲಿ ಎಂಎಸ್ ಧೋನಿ ಇರಲಿದ್ದಾರೆ. ಅವರು 2007ರ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದ 26 ವರ್ಷ ವಯಸ್ಸಾಗಿತ್ತು. ನಂತರ 2006ರಲ್ಲಿ ಮೆನ್-ಇನ್-ಬ್ಲೂ ದಕ್ಷಿಣ ಆಫ್ರಿಕಾವನ್ನು ಎದುರಿಸಿದಾಗ ಭಾರತದ ಮೊದಲ ಟಿ20 ನಾಯಕ ವೀರೇಂದ್ರ ಸೆಹ್ವಾಗ್ 28 ವರ್ಷ ವಯಸ್ಸಿನವರಾಗಿದ್ದರು.

ವಿರಾಟ್ ಕೊಹ್ಲಿ ಮೊದಲ ಬಾರಿಗೆ ಟಿ20ಯಲ್ಲಿ ಭಾರತವನ್ನು ಮುನ್ನಡೆಸಿದಾಗ 28 ವರ್ಷ ವಯಸ್ಸಾಗಿತ್ತು. ಕುತೂಹಲಕಾರಿ ಅಂಶವೆಂದರೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 2013ರಲ್ಲಿ ಅವರ ಚೊಚ್ಚಲ ಏಕದಿನ ಮತ್ತು 2014ರಲ್ಲಿ ಮೊದಲ ಬಾರಿಗೆ ಭಾರತೀಯ ಟೆಸ್ಟ್‌ ತಂಡವನ್ನು ಮುನ್ನಡೆಸಿದರು. ಆದರೆ ಜನವರಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ನಾಯಕನಾಗುವ ಅವಕಾಶ ಒದಗಿಬಂದಿತ್ತು.

ಭಾರತಟಿ20 ತಂಡವನ್ನು ಮುನ್ನಡೆಸಿದ ಹಿರಿಯ ನಾಯಕ ಕೆಎಲ್ ರಾಹುಲ್

ಭಾರತಟಿ20 ತಂಡವನ್ನು ಮುನ್ನಡೆಸಿದ ಹಿರಿಯ ನಾಯಕ ಕೆಎಲ್ ರಾಹುಲ್

2015ರಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ನಾಯಕರಾಗಿದ್ದ ಅಜಿಂಕ್ಯಾ ರಹಾನೆಗೆ ಆಗ 28 ವರ್ಷ ವಯಸ್ಸಾಗಿತ್ತು ಮತ್ತು ಕೆಎಲ್ ರಾಹುಲ್ ತಮ್ಮ 30ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಭಾರತ ಟಿ20 ತಂಡವನ್ನು ಮುನ್ನಡೆಸಿದ ಹಿರಿಯ ನಾಯಕರಾಗಿದ್ದಾರೆ.

ರಿಷಭ್ ಪಂತ್ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ತಂಡದ ಚೊಚ್ಚಲ ನಾಯಕತ್ವದ ಮುನ್ನಾದಿನದಂದು ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 24 ವರ್ಷ ವಯಸ್ಸಿನ ಪಂತ್, ತಮ್ಮನ್ನು ನಾಯಕನನ್ನಾಗಿ ಮಾಡಿದ್ದರ ಬಗ್ಗೆ ಸಂತೋಷಪಟ್ಟರು ಮತ್ತು ಆದರ್ಶವಲ್ಲದ ಪರಿಸ್ಥಿತಿಯನ್ನು ಒಪ್ಪಿಕೊಂಡರು.

KL Rahul ಬದಲಿಗೆ ನಾಯಕತ್ವ ವಹಿಸಿಕೊಂಡ Rishab Pant ಹೇಳಿದ್ದೇನು? | *Cricket | OneIndia Kannada
ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ

ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ

"ಇದು ತುಂಬಾ ಒಳ್ಳೆಯ ಭಾವನೆ. ಆದರೆ ಇದು ತುಂಬಾ ಒಳ್ಳೆಯ ಸಂದರ್ಭಗಳಲ್ಲಿ ಬರಲಿಲ್ಲ. ಇದೇ ಸಮಯದಲ್ಲಿ ನಾನು ಸಂತೋಷವನ್ನು ಅನುಭವಿಸುತ್ತೇನೆ. ಭಾರತ ತಂಡವನ್ನು ಮುನ್ನಡೆಸಲು ಈ ಅವಕಾಶ ನೀಡಿದ ಬಿಸಿಸಿಐಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಶಕ್ತಿ ಮೀರಿ ತಂಡದ ಗೆಲುವಿಗೆ ಪ್ರಯತ್ನಿಸುತ್ತೇನೆ," ಎಂದು ರಿಷಭ್ ಪಂತ್ ಬುಧವಾರ ಹೇಳಿದರು.

"ಮೊದಲನೆಯದಾಗಿ, ನನ್ನ ಕ್ರಿಕೆಟ್ ವೃತ್ತಿಜೀವನ ಪ್ರಯಾಣದ ಉದ್ದಕ್ಕೂ ಏರಿಳಿತದ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು. ಆದರೆ ಪ್ರತಿ ದಿನವೂ ನನ್ನ ಜೀವನವನ್ನು ಸುಧಾರಿಸಲು ಮತ್ತು ಉತ್ತಮಗೊಳಿಸಲು ನಾನು ಇದನ್ನು ಆಧಾರವಾಗಿಸಲು ಬಯಸುತ್ತೇನೆ," ಎಂದು ರಿಷಭ್ ಪಂತ್ ತಿಳಿಸಿದರು.

Story first published: Thursday, June 9, 2022, 12:34 [IST]
Other articles published on Jun 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+