For Quick Alerts
ALLOW NOTIFICATIONS  
For Daily Alerts
 

IND vs SA: ರಿಷಭ್ ಪಂತ್ ನಾಯಕತ್ವದ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಅಚ್ಚರಿ ಹೇಳಿಕೆ

IND vs SA T20 Series: Former South Africa Captain Graeme Smith Big Statement On Rishabh Pants Captaincy

ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ ನಡೆದ 1ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 7 ವಿಕೆಟ್‌ಗಳಿಂದ ಸೋತ ನಂತರ ರಿಷಭ್ ಪಂತ್ ಅವರ ಅಂತಾರಾಷ್ಟ್ರೀಯ ಪಂದ್ಯದ ನಾಯಕತ್ವ ಸರಿಯಾಗಿ ಪ್ರಾರಂಭವಾಗಲಿಲ್ಲ. ರಿಷಭ್ ಪಂತ್ ನಾಯಕತ್ವಕ್ಕೆ ಮಾಜಿ ಆಟಗಾರರು ಸೇರಿದಂತೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಬೃಹತ್ ಮೊತ್ತದ ಗುರಿ ನೀಡಿತ್ತು. ಈ ಅಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಮ್ಮ ಕೈಯಲ್ಲಿ ಇನ್ನೂ ಏಳು ವಿಕೆಟ್‌ಗಳು ಬಾಕಿ ಇರುವಂತೆಯೇ ಬೃಹತ್ ಮೊತ್ತವನ್ನು ಬೆನ್ನಟ್ಟಿದರು. ಈ ಮೂಲಕ ಭಾರತ ತಂಡವನ್ನು 7 ವಿಕೆಟ್‌ಗಳ ಅಂತರದ ಸೋಲಿಸಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ.

ಡಸ್ಸೆನ್, ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್‌

ಡಸ್ಸೆನ್, ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್‌

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಡೇವಿಡ್ ಮಿಲ್ಲರ್ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡ ದೊಡ್ಡ ಮೊತ್ತದ ಗುರಿಯ ಹೊರತಾಗಿಯೂ ಭಾರತವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.

ಭಾರತದ ಸೋಲಿನ ಹೊರತಾಗಿಯೂ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು ರಿಷಭ್ ಪಂತ್ ನಾಯಕತ್ವದಿಂದ ಧನಾತ್ಮಕ ಅಂಶವನ್ನು ಕಂಡುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಐಪಿಎಲ್ ಅವಧಿಯಲ್ಲಿ ಕೆಲವು ಪ್ರಮಾದಗಳನ್ನು ಮಾಡಿದಾಗ 24 ವರ್ಷದ ಆಟಗಾರನನ್ನು ಕ್ರೂರವಾಗಿ ಟ್ರೋಲ್ ಮಾಡಲಾಗಿತ್ತು.

ಪಂತ್ ನಾಯಕನಾಗಿ ಸಾಕಷ್ಟು ಸುಧಾರಿಸಿದ್ದಾರೆ

ಪಂತ್ ನಾಯಕನಾಗಿ ಸಾಕಷ್ಟು ಸುಧಾರಿಸಿದ್ದಾರೆ

ಆದಾಗ್ಯೂ, ರಿಷಭ್ ಪಂತ್ ನಾಯಕನಾಗಿ ಸಾಕಷ್ಟು ಸುಧಾರಿಸಿದ್ದಾರೆ ಮತ್ತು ಮೈದಾನದಲ್ಲಿ ಅವರು ತೆಗೆದುಕೊಂಡ ಕೆಲವು ನಿರ್ಧಾರಗಳು ನಿಜವಾಗಿಯೂ ಉತ್ತಮವಾಗಿವೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ರೇಮ್ ಸ್ಮಿತ್ ಹೇಳಿದ್ದಾರೆ.

"ನೀವು ಸೋತಾಗ ಯಾವಾಗಲೂ ನಾಯಕನನ್ನು ಟೀಕಿಸುತ್ತೀರಿ. ಎಲ್ಲವನ್ನು ಅವರ ಮೇಲೆಯೇ ತೆಗೆದುಕೊಳ್ಳಬೇಕೇ? ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ರಾತ್ರಿ ತುಂಬಾ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಸರಿಯಾದ ಸಮಯದಲ್ಲಿ ಸರಿಯಾದ ಬೌಲರ್‌ಗಳನ್ನು ಆಯ್ಕೆ ಮಾಡಿಕೊಂಡರು. ಅವರು ಪಂದ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಅವರ ನಿರ್ಧಾರದಂತೆ ಬೌಲರ್‌ಗಳು ಸ್ಪಂದಿಸಲಿಲ್ಲ," ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಅವರು ಮೊದಲ ಟಿ20 ನಂತರ ರಿಷಭ್ ಪಂತ್ ಅವರ ನಾಯಕತ್ವವನ್ನು ವಿಶ್ಲೇಷಿಸಿದರು.

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ

""ದಕ್ಷಿಣ ಆಫ್ರಿಕಾ ಒತ್ತಡದಲ್ಲಿದ್ದಾಗ, ಭಾರತದ ನಾಯಕನು ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್‌ಗೆ ಬೌಲಿಂಗ್ ನೀಡಿದರು. ಒಟ್ಟಾರೆಯಾಗಿ, ಅವರು ಸಾಕಷ್ಟು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರು. ಕೆಲವೊಮ್ಮೆ ನಿಮ್ಮ ಬೌಲರ್‌ಗಳು ಡೆಲಿವರಿ ಮಾಡಬೇಕಾಗಿರುವುದರಿಂದ ವರ್ಕ್ ಔಟ್ ಆಗುವುದಿಲ್ಲ. ರಿಷಭ್ ಪಂತ್ ಅವರು, 'ನಾನು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ಮಾಡಿದ್ದೇನೆ' ಎಂದು ಹೇಳಬಹುದು ಎಂದು ನಾನು ಭಾವಿಸುತ್ತೇನೆ. ಶುಕ್ರವಾರ ಸಂಜೆಯ ಔಟಿಂಗ್ ನಂತರ ಅವರು ಸ್ವಲ್ಪ ಆತ್ಮವಿಶ್ವಾಸವನ್ನು ಗಳಿಸಬಹುದು ಎಂದು ನಾನು ಭಾವಿಸುತ್ತೇನೆ," ಎಂದು ಗ್ರೇಮ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ- ಸೌತ್ ಆಫ್ರಿಕಾ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಹೊಡೆದಾಟ ಬಡಿದಾಟದ ವಿಡಿಯೋ ವೈರಲ್ | *Cricket
ಎರಡನೇ ಪಂದ್ಯ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ

ಎರಡನೇ ಪಂದ್ಯ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ

ಟಿ20 ಸರಣಿಯ ಎರಡನೇ ಪಂದ್ಯ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಎಲ್ಲಾ ಪಂದ್ಯಗಳನ್ನು ಸೋತಿಲ್ಲ ಮತ್ತು ಪಂತ್ ಬಳಗವು ತೆಂಬಾ ಬವುಮಾ ನಾಯಕತ್ವದ ತಂಡದ ವಿರುದ್ಧ ಗೆಲುವಿನ ಹಾದಿಗೆ ಮರಳಲು ಉತ್ಸುಕರಾಗಿದ್ದಾರೆ. ಇದು ಐದು ಪಂದ್ಯಗಳ ಸರಣಿಯಾಗಿದೆ ಎಂಬುದನ್ನು ಮರೆಯುವಂತಿಲ್ಲ, ಆದ್ದರಿಂದ ಭಾರತಕ್ಕೆ ಪುನರಾಗಮನ ಮಾಡಲು ಸಾಕಷ್ಟು ಸಮಯವಿದೆ,'' ಎಂದು ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ರೇಮ್ ಸ್ಮಿತ್ ಹೇಳಿದ್ದಾರೆ.

Story first published: Saturday, June 11, 2022, 9:07 [IST]
Other articles published on Jun 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+