ದ. ಆಫ್ರಿಕಾ ವಿರುದ್ಧ ಅಬ್ಬರಿಸಲು ರೆಡಿಯಾಗಿದ್ದಾರೆ ಇಬ್ಬರು ಯುವ ವೇಗಿಗಳು: ದ್ರಾವಿಡ್ ಗರಡಿಯಲ್ಲಿ ಅಭ್ಯಾಸ

ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಲು ಇಬ್ಬರು ಯುವ ವೇಗಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಅವರೇ ಯುವ ವೇಗಿ ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್.
ಟಿ20 ಸರಣಿಗೂ ಮುನ್ನ ಭಾರತ ತಂಡ ಈಗಾಗಲೇ ದೆಹಲಿಯಲ್ಲಿ ತರಬೇತಿ ಆರಂಭಿಸಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಟೀಂ ಇಂಡಿಯಾ ಯುವ ಪಡೆ ತರಬೇತಿ ಪಡೆಯುತ್ತಿದೆ.
ಸೋಮವಾರ ನಡೆದ ಮೊದಲ ನೆಟ್ ಸೆಷನ್‌ನಲ್ಲಿ ಉಮ್ರಾನ್ ಮತ್ತು ಅರ್ಶ್‌ದೀಪ್ ದ್ರಾವಿಡ್‌ರಿಂದ ಮೆಚ್ಚುಗೆ ಗಳಿಸಿದ್ದಾರೆ. ಈ ಪೈಕಿ ಅರ್ಷದೀಪ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ದ್ರಾವಿಡ್ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದರೊಂದಿಗೆ ಅರ್ಷ್‌ದೀಪ್‌ಗೆ ಮೊದಲ ಟಿ20ಯಲ್ಲಿ ಪದಾರ್ಪಣೆ ಮಾಡುವ ಅವಕಾಶ ಸಿಗುವ ನಿರೀಕ್ಷೆಯಿದೆ.

ಉಮ್ರಾನ್ ಮಲ್ಲಿಕ್‌ನಿಂದ ಹೆಚ್ಚು ಬೌಲಿಂಗ್ ಪ್ರಾಕ್ಟೀಸ್
ಪಿಟಿಐ ಪ್ರಕಾರ, ಉಮ್ರಾನ್ ಮಲಿಕ್ ಭಾರತ ತಂಡದ ಮೊದಲ ನೆಟ್ ಸೆಷನ್‌ನಲ್ಲಿ ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದರು. ಆದರೆ ಕೋಚ್ ರಾಹುಲ್ ದ್ರಾವಿಡ್ ಅಥವಾ ತಂಡದ ನಿರ್ವಹಣೆಯ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ಆದರೆ ನೆಟ್‌ನಲ್ಲಿ ಅರ್ಷದೀಪ್ ಸಿಂಗ್ ಅವರ ಪ್ರದರ್ಶನಕ್ಕೆ ಎಲ್ಲರೂ ಖುಷಿಯಾಗಿದ್ದಾರೆ ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಅರ್ಷ್‌ದೀಪ್ ನೆಟ್‌ನಲ್ಲಿ ಯಾರ್ಕರ್‌ಗಳನ್ನು ಎಸೆಯುವಲ್ಲಿಯೂ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ.
ಅವರು ಕಳೆದ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗಾಗಿ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು ಮತ್ತು ನೆಟ್‌ನಲ್ಲಿ ಅದೇ ಸಾಧನೆಯನ್ನು ಪುನರಾವರ್ತಿಸಿದರು.

ಐಪಿಎಲ್‌ನಲ್ಲಿ 157kmph ವೇಗದಲ್ಲಿ ಬೌಲಿಂಗ್ ಮಾಡಿದ್ದ ಉಮ್ರಾನ್
ಐಪಿಎಲ್ ನಲ್ಲಿ ಸತತ 157 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಭಾರತದ ವೇಗಿ ಎನಿಸಿಕೊಂಡಿದ್ದ ಉಮ್ರಾನ್ ಮಲಿಕ್ ರಾಷ್ಟ್ರೀಯ ತಂಡದ ನೆಟ್ ನಲ್ಲಿ ನಿರೀಕ್ಷಿತ ಬೌಲಿಂಗ್ ಮಾಡಲಿಲ್ಲ. ಅವರು ನೆಟ್‌ನಲ್ಲಿ ಸಾಧ್ಯವಾದಷ್ಟು ವೇಗವಾಗಿ ಬೌಲ್ ಮಾಡಲು ಪ್ರಯತ್ನಿಸಿದರು. ಇದು ಯಶಸ್ವಿಯಾದ್ರೂ ಸಹ ಸತತ ಕಠಿಣತೆಯನ್ನು ಕಾಪಾಡಿಕೊಳ್ಳಲು ವಿಫಲವಾಯಿತು.
ಆದ್ರೂ ಸಹ ಹೊಸ ಉಪನಾಯಕ ಮತ್ತು ವಿಕೆಟ್ ಕೀಪರ್ ಆಗಿರುವ ರಿಷಭ್ ವಿರುದ್ಧ ಉಮ್ರಾನ್ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆಟಗಾರನ ಚೆಂಡಿನ ವೇಗ ಹೆಚ್ಚಿದಂತೆ ರಿಷಭ್ ಬೀಟ್ ಕೂಡ ಹೆಚ್ಚಾಯಿತು.
ಭಾರತ-ದಕ್ಷಿಣ ಆಫ್ರಿಕಾ ಟಿ20 ಮುಖಾಮುಖಿ: ಹೆಚ್ಚು ಸಿಕ್ಸರ್ ಸಿಡಿಸಿದ ಐವರು ಬ್ಯಾಟ್ಸ್‌ಮನ್

ಉತ್ತಮ ಲೈನ್ ಅಂಡ್ ಲೆಂಥ್ ಕಾಪಾಡಿಕೊಂಡ ಅರ್ಷ್‌ದೀಪ್
ಉಮ್ರಾನ್‌ಗೆ ಹೋಲಿಸಿದ್ರೆ, ಅರ್ಷದೀಪ್ ಸಿಂಗ್ ಇದಕ್ಕೆ ತದ್ವಿರುದ್ಧ. ಅವರು ಅತ್ಯುತ್ತಮ ಲೈನ್ ಮತ್ತು ಲೆಂಥ್ ಅನ್ನು ಕಾಪಾಡಿಕೊಂಡರು ಮತ್ತು ಯಾರ್ಕರ್‌ಗಳ ವಿಷಯದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ನೆಟ್‌ನಲ್ಲಿ ಅರ್ಷದೀಪ್ ಅವರ ಮೊದಲ ಎಸೆತ ಶಾರ್ಟ್ ಬಾಲ್ ಆಗಿತ್ತು. ನಂತರ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಜೊತೆ ಮಾತನಾಡಿದರು. ನಂತರ ಯಾರ್ಕರ್‌ಗಳನ್ನು ಸುಧಾರಿಸಲು ತರಬೇತಿ ನೀಡಲಾಯಿತು. ಯಾರ್ಕರ್ ಮೂಲಕ ಅರ್ಷದೀಪ್ ತೋರಿದ ಪ್ರದರ್ಶನ ತಂಡದ ಮ್ಯಾನೇಜ್‌ಮೆಂಟ್‌ನಲ್ಲಿ ಸಂತಸ ಮೂಡಿಸಿದೆ.
ಆದರೆ, ಉಮ್ರಾನ್‌ಗೆ ತಮ್ಮ ಸಾಮರ್ಥ್ಯದ ಮೇಲೆ ಸಾಕಷ್ಟು ನಂಬಿಕೆ ಇಲ್ಲದ ಕಾರಣ ಹೆಚ್ಚು ಬೌಲಿಂಗ್ ಮಾಡಲು ಕೇಳಲಾಯಿತು ಎಂಬ ಸೂಚನೆಗಳಿವೆ. ಹೀಗಾಗಿ ಮೊದಲ ಪಂದ್ಯದಲ್ಲಿ ಉಮ್ರಾನ್ ಆಡುವ ಸಾಧ್ಯತೆ ಕಡಿಮೆಯಿದೆ.
Ind vs SA: ಐಪಿಎಲ್ ಕಳಪೆ ಫಾರ್ಮ್‌ನಿಂದ ಹೊರಬರಲೇ ಬೇಕಿದೆ ಈ 3 ಟೀಮ್ ಇಂಡಿಯಾ ಆಟಗಾರರು

ನೆಟ್ಸ್‌ನಲ್ಲಿ ಬೆವರು ಸುರಿಸಿದ ಭುವನೇಶ್ವರ್ ಕುಮಾರ್, ಡಿಕೆ ಭರ್ಜರಿ ಅಭ್ಯಾಸ
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ವೇಗಿಗಳ ದಾಳಿಯ ಚುಕ್ಕಾಣಿ ಹಿಡಿದಿರುವ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಸುಮಾರು 15 ನಿಮಿಷಗಳ ಕಾಲ ನೆಟ್ಸ್ ನಲ್ಲಿ ತರಬೇತಿ ಪಡೆದರು. ಆಡುವ ಇಲೆವೆನ್‌ನಲ್ಲಿರುವ ಮತ್ತೊಬ್ಬ ವೇಗದ ಬೌಲರ್ ಹರ್ಷಲ್ ಪಟೇಲ್ ನೆಟ್‌ನಲ್ಲಿ ಹೆಚ್ಚು ಹೊತ್ತು ಬೌಲಿಂಗ್ ಮಾಡಲಿಲ್ಲ.
ಇನ್ನು ಭುವಿ, ಅರ್ಷದೀಪ್ ಹೊರತುಪಡಿಸಿ, ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ನೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮತ್ತೊಬ್ಬ ಆಟಗಾರ. ಆದರೆ ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬುದು ಖಚಿತವಾಗಿಲ್ಲ. ಉಪನಾಯಕರೂ ಆಗಿರುವ ರಿಷಭ್ ಪಂತ್ ತಂಡಕ್ಕೆ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಒಂದು ವೇಳೆ ಡಿಕೆಗೆ ಸ್ಪೆಷಲಿಸ್ಟ್ ಬ್ಯಾಟರ್ ಪಾತ್ರವಿದೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಕಾರ್ತಿಕ್ ಅವರ ಅದ್ಭುತ ಪ್ರದರ್ಶನವು ಸುದೀರ್ಘ ಅನುಪಸ್ಥಿತಿಯ ನಂತರ ಅವರನ್ನು ರಾಷ್ಟ್ರೀಯ ತಂಡಕ್ಕೆ ಕರೆತಂದಿತು. ಅವರು ಕೊನೆಯ ಬಾರಿಗೆ 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಪರ ಆಡಿದ್ದರು. ಅದಾಗಿ ಮೂರು ವರ್ಷಗಳ ಬಳಿಕ ಡಿಕೆ ಭಾರತದ ಜೆರ್ಸಿ ತೊಡಲು ರೆಡಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications