For Quick Alerts
ALLOW NOTIFICATIONS  
For Daily Alerts
 

Ind vs SA ಮೊದಲ ಟೆಸ್ಟ್‌: 327 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್‌

Team india allout

ಸೆಂಚುರಿಯನ್ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ದಿಢೀರ್ ಕುಸಿತಕ್ಕೆ ಒಳಗಾಗಿ 327ರನ್‌ಗಳಿಗೆ ಆಲೌಟ್‌ ಆಗಿದೆ.

ಮೊದಲ ದಿನದಾಟದಲ್ಲಿ ಉತ್ತಮ ಆಟವಾಡಿದ್ದ ಭಾರತ ದಿನದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 272 ರನ್ ಗಳಿಸಿತ್ತು. ಕೆ.ಎಲ್ ರಾಹುಲ್ 122 ರನ್ ಗಳಿಸಿ ಅಜೇಯರಾಗುಳಿದಿದ್ದು, ರಹಾನೆ 40 ರನ್ ಗಳಿಸಿ ಆಡುತ್ತಿದ್ರು. ಆದ್ರೆ ಎರಡನೇ ದಿನದಾಟ ಸಂಪೂರ್ಣವಾಗಿ ಮಳೆಗೆ ರದ್ದಾದ ಪರಿಣಾಮ ಇಂದು ಮೂರನೇ ದಿನದಾಟದಲ್ಲಿ ಭಾರತ ಉತ್ತಮ ರನ್ ಕಲೆಹಾಕುವ ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ಆ ಎಲ್ಲಾ ಆಸೆಗಳಿಗೆ ಲುಂಗಿ ಎನ್‌ಗಿಡಿ ಹಾಗೂ ಕಗಿಸೊ ರಬಾಡ ಬ್ರೇಕ್ ಹಾಕಿದ್ದಾರೆ.

ಕೇವಲ 49 ರನ್‌ಗಳಿಗೆ ಉಳಿದ 7 ವಿಕೆಟ್ ಕಳೆದು ಕೊಂಡ ಭಾರತ 327 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ.

ಮೂರನೇ ದಿನದಾಟದಲ್ಲಿ ಅಜೇಯ 122 ರನ್‌ ಕಲೆಹಾಕಿದ್ದ ಕೆ.ಎಲ್ ರಾಹುಲ್ ಇಂದು ಕೇವಲ 1 ರನ್ ಕಲೆಹಾಕುವ ಮೂಲಕ ರಬಾಡ ಬೌಲಿಂಗ್‌ನಲ್ಲಿ ಅತ್ಯಂತ ಕೆಟ್ಟದಾಗಿ ವಿಕೆಟ್ ಒಪ್ಪಿಸಿದ್ರು. ಇದ್ರ ಬೆನ್ನಲ್ಲೇ ಅರ್ಧಶತಕ ಗಡಿಯನ್ನೂ ಮುಟ್ಟದ ರಹಾನೆ ಕೂಡ 48 ರನ್‌ಗಳಿಸಿದ್ದ ಲುಂಗಿ ಎನ್‌ಗಿಡಿ ಬೌಲಿಂಗ್‌ನಲ್ಲಿ ಔಟಾಗಿ ಪೆವಿಲಿಯನ್ ಸೇರಿಕೊಂಡ್ರು.

ಆಲ್‌ರೌಂಡರ್ ಅಶ್ವಿನ್ ಒಂದು ಬೌಂಡರಿ ಸಿಡಿಸಿ ತಂಡಕ್ಕೆ ಆಧಾರವಾಗುವ ಮುನ್ಸೂಚನೆ ನೀಡಿದ್ರು. ಆದ್ರೆ ರಬಾಡ ಅಶ್ವಿನ್‌ ಆಟಕ್ಕೆ ಬ್ರೇಕ್ ಹಾಕಿ ಪೆವಿಲಿಯನ್‌ಗೆ ಅಟ್ಟಿದ್ರು. ಶಾರ್ದೂಲ್ ಠಾಕೂರ್ ಕೂಡ 4ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ 8ರನ್‌ ಗಳಿಸಿದ್ದಾಗ ಲುಂಗಿ ಎನ್‌ಗಿಡಿಗೆ ವಿಕೆಟ್ ಒಪ್ಪಿಸಿದ್ರು.

ಕೆಳ ಕ್ರಮಾಂಕದಲ್ಲಿ ಮೊಹಮ್ಮದ್ ಶಮಿ 8 ರನ್, ಜಸ್ಪ್ರೀತ್ ಬುಮ್ರಾ 14ರನ್‌ಗಳ ಕೊಡುಗೆಯಿಂದ ಭಾರತ ಮೊದಲ ಇನ್ನಿಂಗ್ಸ್ 327ರನ್ ಕಲೆಹಾಕಿದೆ. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 6 ವಿಕೆಟ್ ಕಬಳಿಸಿದ್ರೆ, ಕಗಿಸೊ ರಬಾಡ 3, ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದಿದ್ದಾರೆ.

ಕೊಹ್ಲಿ ಕಾರಣಕ್ಕೆ ಅತಿದೊಡ್ಡ ನಿರ್ಧಾರವನ್ನು ಮಾಡಿದ್ರು MS ಧೋನಿ | Oneindia Kannada

Story first published: Tuesday, December 28, 2021, 20:09 [IST]
Other articles published on Dec 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+