IND vs SA 5ನೇ ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಈ ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟಿದೆ ಭಾರತ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ ರಿಷಭ್ ಪಂತ್ ನಾಯಕತ್ವದ ಟೀಮ್ ಇಂಡಿಯಾ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ಅದ್ಭುತ ಶೈಲಿಯಲ್ಲಿ ಪುಟಿದೆದ್ದಿದ್ದು, ಈಗ ಐದು ಪಂದ್ಯಗಳ ಸರಣಿಯು 2-2 ರಲ್ಲಿ ಸಮಬಲಗೊಂಡಿದೆ.
ಮೆನ್ ಇನ್ ಬ್ಲೂ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ತಮ್ಮ ಮೊದಲ ಟಿ20 ಸರಣಿಯನ್ನು ಗೆಲ್ಲುವ ದೊಡ್ಡ ದಾಖಲೆಯನ್ನು ಎದುರು ನೋಡುತ್ತಿದೆ. ದಕ್ಷಿಣ ಆಫ್ರಿಕಾ ಸರಣಿಗೆ ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್ ಅವರಂತಹ ಯುವ ಆಟಗಾರರನ್ನು ತಂಡವು ಆಯ್ಕೆ ಮಾಡಿದ್ದರೂ, ಅವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಟೀಮ್ ಇಂಡಿಯಾ ಕಳೆದ ನಾಲ್ಕು ಟಿ20 ಪಂದ್ಯಗಳಲ್ಲಿ ಅದೇ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸಿದೆ.
ಇಶಾನ್ ಕಿಶನ್ ಭಾರತಕ್ಕೆ ಅಂತಿಮ ಪಂದ್ಯಕ್ಕೆ ನಿರ್ಣಾಯಕ ಆಟಗಾರನಾಗಿದ್ದು, ಅವರು ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 191 ರನ್ ಗಳಿಸಿದ್ದು, ಇದೇ ವೇಳೆ ಎರಡು ಅರ್ಧ ಶತಕಗಳೊಂದಿಗೆ ಇದುವರೆಗಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಭಾರತಕ್ಕೆ ಅಗತ್ಯವಿರುವ ಆರಂಭವನ್ನು ನೀಡಬೇಕಾಗುತ್ತದೆ.

ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸಿಡಿದೇಳಬೇಕಿದೆ
ರುತುರಾಜ್ ಗಾಯಕ್ವಾಡ್ ಸಹ ಸ್ಥಿರತೆಯನ್ನು ಕಂಡುಕೊಳ್ಳಬೇಕು ಮತ್ತು ಪವರ್‌ಪ್ಲೇನಲ್ಲಿ ಉತ್ತಮ ರನ್ ಗಳಿಸಬೇಕೆಂದರೆ ಇಶಾನ್ ಕಿಶನ್‌ಗೆ ಅಗತ್ಯ ಸಹಕಾರ ನೀಡಬೇಕಿದೆ. ಇನ್ನು ಇದೇ ವೇಳೆ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸಿಡಿದೇಳಬೇಕಿದ್ದು ಮತ್ತು ವೇಗಿಗಳ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ಸರಣಿಯುದ್ದಕ್ಕೂ ಅವರು ವೇಗಿಗಳ ಎದುರು ಅವರ ಬ್ಯಾಟ್ ದುರ್ಬಲವಾಗಿದೆ.
ನಾಯಕ ರಿಷಭ್ ಪಂತ್ ಕೂಡ ಕಳೆದ ನಾಲ್ಕು ಟಿ20 ಪಂದ್ಯಗಳಲ್ಲಿ ಕಳಪೆಯಾಗಿದ್ದು, ನಿರ್ಣಾಯಕ ಪಂದ್ಯದಲ್ಲಿ ತಂಡಕ್ಕೆ ಅಗತ್ಯವಾದ ಉತ್ತಮ ಸ್ಕೋರ್ ಮಾಡಲು ಎದುರು ನೋಡುತ್ತಿದ್ದಾರೆ. ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ತಮ್ಮ ಕ್ರಮಾಂಕದ ನಿಯಮಿತ ಆಟದಲ್ಲಿ ಉತ್ತಮವಾಗಿದ್ದಾರೆ. ಸರಣಿ ಗೆಲ್ಲಬೇಕೆಂದರೆ ಇವರಿಬ್ಬರ ಪ್ರದರ್ಶನ ಅತ್ಯಗತ್ಯವಾಗಿದೆ

ಹರ್ಷಲ್ ಪಟೇಲ್ ಸರಣಿಯಲ್ಲಿ ಏಳು ವಿಕೆಟ್ ಪಡೆದು ಅಗ್ರಸ್ಥಾನ
ಮೊದಲ ಎರಡು ಪಂದ್ಯಗಳಲ್ಲಿ ಚೆಂಡಿನೊಂದಿಗೆ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ, ಮುಂದಿನ ಎರಡು ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು ಕಮ್ ಬ್ಯಾಕ್ ಮಾಡಿದ್ದಾರೆ. ವೇಗಿಗಳಾಗಿ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಭಾರತಕ್ಕೆ ಅತ್ಯಂತ ಪ್ರಮುಖ ಅಸ್ತ್ರವಾಗಿದ್ದು, ಹರ್ಷಲ್ ಪಟೇಲ್ ಸರಣಿಯಲ್ಲಿ ಏಳು ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದರೆ, ಭುವನೇಶ್ವರ್ ಕುಮಾರ್ ಆರು ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಪವರ್‌ಪ್ಲೇ/ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ಅತ್ಯಂತ ನಿರ್ಣಾಯಕವಾಗಿರುತ್ತದೆ. ಇನ್ನು ಅವೇಶ್ ಖಾನ್ ಅವರು ಹಿಂದಿನ ಪಂದ್ಯದಲ್ಲಿ 4/18ರ ನಂತರ ಗಮನ ಸೆಳೆದಿದ್ದಾರೆ.
ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್‌ರಂತಹ ಸ್ಫೋಟಕ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಲೈನ್‌ಅಪ್‌ಗೆ ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಕೂಡ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಅವರಿಂದ ಹೆಚ್ಚು ರನ್‌ಗಳಿಗೆ ಹೋಗದಿರುವುದು ಮತ್ತು ಅವರ ತಂಡಕ್ಕೆ ನಿಯಮಿತವಾಗಿ ಕೆಲವು ಪ್ರಮುಖ ವಿಕೆಟ್‌ಗಳನ್ನು ನೀಡುವುದು ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಪ್ರಮುಖ ಪಂದ್ಯದಲ್ಲಿ ಪುಟಿದೇಳುವ ಸಾಧ್ಯತೆ ಇದೆ
ಮತ್ತೊಂದೆಡೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಅನೇಕ ಸಮಸ್ಯೆಗಳನ್ನು ಹೊಂದಿದೆ. ಕಳೆದ ಎರಡು ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಲೈನ್‌ಅಪ್ ಉತ್ತಮ ಪ್ರದರ್ಶನ ನೀಡಿಲ್ಲ. ಆದಾಗ್ಯೂ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಮರಳುವುದರೊಂದಿಗೆ ದಕ್ಷಿಣ ಆಫ್ರಿಕಾ ಖಂಡಿತವಾಗಿಯೂ ಪ್ರಮುಖ ಪಂದ್ಯದಲ್ಲಿ ಪುಟಿದೇಳುವ ಸಾಧ್ಯತೆ ಇದೆ. ಡೇವಿಡ್ ಮಿಲ್ಲರ್ ಮತ್ತು ವ್ಯಾನ್ ಡೆರ್ ಡಸ್ಸೆನ್ ಕೂಡ ಮೊದಲ ಪಂದ್ಯದಂತೆ ತಮ್ಮ ಬಿರುಸಿನ ಫಾರ್ಮ್ ಪ್ರದರ್ಶಿಸಬೇಕಾಗಿದೆ. 2ನೇ ಟಿ20ಯಲ್ಲಿ ಆಡಿದಂತೆ ಕ್ಲಾಸೆನ್ ಕೂಡ ಆಡಬೇಕಿದೆ.
ಇದೇ ವೇಳೆ ದಕ್ಷಿಣ ಆಫ್ರಿಕಾ ಬೌಲಿಂಗ್ ಕಳವಳಕಾರಿಯಾಗಿದ್ದು, ಅವರು ಪವರ್‌ಪ್ಲೇ ಅಥವಾ ಮೊದಲಾರ್ಧದಲ್ಲಿ ಕೆಲವೊಮ್ಮೆ ಭಾರತಕ್ಕೆ ಉತ್ತಮ ಆರಂಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಕೆಲವು ಆರಂಭಿಕ ವಿಕೆಟ್‌ಗಳನ್ನು ಪಡೆದ ನಂತರ ಅದೇ ಆವೇಗವನ್ನು ಮುಂದುವರೆಸಲು ಸಾಧ್ಯವಾಗಿಲ್ಲ. ಇದು ದಕ್ಷಿಣ ಆಫ್ರಿಕಾ ತಂಡ ಕೆಲಸ ಮಾಡಬೇಕಾದ ವಿಷಯವಾಗಿದೆ. ಇನ್ನು ವೇಗಿ ಕಗಿಸೊ ರಬಾಡ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ತಂಡಕ್ಕೆ ನಷ್ಟವಾದಂತಾಗಿದೆ.

ಆಫ್ರಿಕಾ ವಿರುದ್ಧ ಚೊಚ್ಚಲ ಟಿ20 ಸರಣಿ ಗೆಲ್ಲುವ ತವಕ
ರಬಾಡ ಅನುಪಸ್ಥಿತಿಯಲ್ಲಿ ಆನ್ರಿಚ್ ನಾರ್ಟ್ಜೆ ಅವರು ಸರಣಿಯುದ್ದಕ್ಕೂ ಸರಿಯಾದ ಫಾರ್ಮ್ ಇಲ್ಲದಿದ್ದರೂ, ಜವಾಬ್ದಾರಿ ಅರಿತು ಬೌಲಿಂಗ್ ಮಾಡಬೇಕಾಗುತ್ತದೆ. ಸ್ಪಿನ್ನರ್‌ಗಳಾದ ತಬ್ರೈಜ್ ಶಮ್ಸಿ ಮತ್ತು ಕೇಶವ್ ಮಹಾರಾಜ್ ಅವರು ಕ್ರಮವಾಗಿ 10.20 ಮತ್ತು 9.81ರ ಕಳಪೆ ಎಕಾನಮಿ ದರಗಳೊಂದಿಗೆ ದಕ್ಷಿಣ ಆಫ್ರಿಕಾ ಬೌಲಿಂಗ್‌ನ ದುರ್ಬಲಗೊಳಿಸಿದ್ದಾರೆ.
ಒಟ್ಟಿನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟಿ20 ಸರಣಿ ಗೆಲ್ಲುವ ತವಕದಲ್ಲಿದ್ದು, ನಿರ್ಣಾಯಕ ಪಂದ್ಯದಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರೇಮಿಗಳಿಗಂತೂ ಕ್ರಿಕೆಟ್ ರಸದೌತಣ ಸಿಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications