ಇತ್ತೀಚಿನ ವರ್ಷಗಳಲ್ಲಿ ನಮ್ಮ ಗೆಲುವಿನಲ್ಲಿ ಅವರ ಪಾತ್ರವೇ ಪ್ರಮುಖ ಎಂದ ನಾಯಕ ಕೊಹ್ಲಿ

ಗುರುವಾರ ಅಂತ್ಯವಾದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 113 ರನ್‌ಗಳ ಅಂತರದಿಂದ ಗೆದ್ದು ಐತಿಹಾಸಿಕ ಸಾಧನೆ ಮಾಡದೆ. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಈವರೆಗೆ ಅಸಾಧ್ಯವಾಗಿರುವ ಟೆಸ್ಟ್ ಸರಣಿ ಗೆಲುವಿನ ಗುರಿಯಲ್ಲಿ ಮೊದಲ ಯಶಸ್ಸು ಸಾಧಿಸಿದೆ. ದಕ್ಷುಣ ಆಫ್ರಿಕಾ ತಂಡದ ಪಾಲಿಗೆ ಭದ್ರಕೋಟೆ ಎನಿಸಿದ್ದ ಸೆಂಚುರಿಯನ್‌ನಲ್ಲಿ ಟೀಮ್ ಇಂಡಿಯಾದ ಗೆಲುವು ತಂಡದ ಆಟಗಾರರು ಹಾಗೂ ಅಭಿಮಾನಿಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನು ಈ ಗೆಲುವಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು ತಂಡದ ಆಟಗಾರರ ಪ್ರದರ್ಶನವನ್ನು ಕೊಂಡಾಡಿದ್ದಾರೆ. ಅದರಲ್ಲೂ ಒಂದು ವಿಭಾಗದ ಪ್ರದರ್ಶನವನ್ನು ವಿರಾಟ್ ಕೊಹ್ಲಿ ವಿಶೇಷವಾಗಿ ಪ್ರಶಂಸಿಸಿದ್ದಾರೆ. ಭಾರತ ತಂಡ ವಿದೇಶಿ ನೆಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಧಿಸುತ್ತಿರುವ ಯಶಸ್ಸಿನಲ್ಲಿ ಈ ವಿಭಾಗದ ಕೊಡುಗೆಯೇ ಬಹಳ ದೊಡ್ಡದು ಎಂದಿದ್ದಾರೆ ವಿರಾಟ್ ಕೊಹ್ಲಿ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲು ಕೂಡ ಅವರ ಪಾತ್ರವೇ ಬಹಳ ದೊಡ್ಡ ಎಂದಿದ್ದಾರೆ ನಾಯಕ ಕೊಹ್ಲಿ.
ಹಾಗಾದರೆ ವಿರಾಟ್ ಕೊಹ್ಲಿ ಪ್ರಶಂಸಿಸಿದ ಆ ಆಟಗಾರರು ಯಾರು? ಯಾವ ವಿಭಾಗದ ಕೊಡುಗೆಯನ್ನು ಕೊಹ್ಲಿ ವಿಶೇಷವಾಗಿ ಬೊಟ್ಟು ಮಾಡಿದ್ದಾರೆ. ಮುಂದೆ ಓದಿ..

ವೇಗಿಗಳ ಸಾಧನೆಗೆ ಕೊಹ್ಲಿ ಮೆಚ್ಚುಗೆ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ತಂಡದ ವೇಗಿಗಳ ಪರಿಣಾಮಕಾರಿ ಪ್ರದರ್ಶನವನ್ನು ಪ್ರಶಂಸಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ವೇಗಿಗಳು ನೀಡಿದ ಕೊಡುಗೆ ಬಹಳ ದೊಡ್ಡ ಪಾತ್ರವನ್ನು ವಹಿಸಿತು ಎಂದಿದ್ದಾರೆ ಕೊಹ್ಲಿ. ಅಲ್ಲದೆ ಇತ್ತೀಚೆಗೆ ವಿದೇಶಿ ನೆಲದಲ್ಲಿ ಭಾರತ ತಂಡ ಕಾಣುತ್ತಿರುವ ಯಶಸ್ಸಿನಲ್ಲಿ ಈ ವೇಗಿಗಳ ಪಾತ್ರ ಬಹಳ ದೊಡ್ಡದು ಎಂದು ಕೊಹ್ಲಿ ಬಣ್ಣಿಸಿದ್ದಾರೆ. ಈ ಸಂದರ್ಭದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಿತ್ತು ತಂಡದ ಮೇಲುಗೈಗೆ ಕಾರಣವಾದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬೌಲಿಂಗ್ ಬಗ್ಗೆ ಕೊಹ್ಲಿ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಮಿ ಪ್ರಸ್ತುತ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು
ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರು ಎಂದು ವಿಶೇಷವಾಗಿ ಪ್ರಶಂಸಿಸಿದ್ದಾರೆ ಕೊಹ್ಲಿ. ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಕಿತ್ತು ಮಿಂಚಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ 200 ರನ್‌ಗಳಿಗೂ ಮುನ್ನವೇ ಆಲೌಟ್ ಆಗಲು ಕಾರಣವಾದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಶಮಿ ಮೂರು ವಿಕೆಟ್ ಸಂಪಾದಿಸಿ ಮಿಂಚಿದರು. ಇನ್ನು ಈ ಪಂದ್ಯದಲ್ಲಿ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಗೆ ಕೂಡ ಸೇರ್ಪಡೆಯಾಗಿದ್ದಾರೆ.

200 ರನ್‌ಗಳಿಗೆ ಮುನ್ನವೇ ಆಲೌಟ್ ಆದ ದ. ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡ ಈ ಪಂದ್ಯದಲ್ಲಿ ಭಾರತೀಯ ತಂಡದ ವೇಗದ ಬೌಲರ್‌ಗಳ ದಾಳಿಗೆ ಸಂಪೂರ್ಣವಾಗಿ ತತ್ತರಿಸಿತ್ತು. ಎರಡು ಇನ್ನಿಂಗ್ಸ್‌ನಲ್ಲಿಯೂ ಟೀಮ್ ಇಂಡಿಯಾ 200 ರನ್‌ಗಳನ್ನು ಗಳಿಸಲು ವಿಫಲವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಭಾರತ 113 ರನ್‌ಗಳ ಅಂತರದಿಂದ ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications