Ind vs SL 1st T20 : ಮೊದಲ ಟಿ20 ಪಂದ್ಯದಲ್ಲಿ ಮುರಿಯಬಹುದಾದ ಮೂರು ದಾಖಲೆಗಳಿವು

2022ರ ಬಾಂಗ್ಲಾದೇಶದ ವಿರುದ್ಧದ ಕೊನೆಯ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ನಂತರ, ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ 2023ರ ಕ್ರಿಕೆಟ್ ಋತುವನ್ನು ಆರಂಭಿಸಲಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲನೇ ಪಂದ್ಯ ಇಂದು (ಜನವರಿ 3) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಎರಡು ಮತ್ತು ಮೂರನೇ ಪಂದ್ಯ ಜನವರಿ 5 ಮತ್ತು 7 ರಂದು ಕ್ರಮವಾಗಿ ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ನಡೆಯಲಿವೆ. ಟಿ20 ಸರಣೀಯ ನಂತರ ಜನವರಿ 10 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಏಷ್ಯಾಕಪ್ 2022ರ ಚಾಂಪಿಯನ್‌ಗಳಾಗಿರುವ ಶ್ರೀಲಂಕಾ ಬಲಿಷ್ಠ ತಂಡವನ್ನು ಭಾರತದ ವಿರುದ್ಧ ಕಣಕ್ಕಿಳಿಸಲಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು. ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶಿವಂ ಮಾವಿ, ರಾಹುಲ್ ತ್ರಿಪಾಠಿ ಸೇರಿದಂತೆ ಹಲವು ಯುವ ಕ್ರಿಕೆಟಿಗರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮಂಗಳವಾರ ವಾಂಖೆಡೆ ಅಂಗಳದಲ್ಲಿ ನಡೆಯುವ ಮೊದಲ ಟಿ20 ಪಂದ್ಯದಲ್ಲಿ ಪ್ರಮುಖವಾಗಿ ಈ ಮೂರು ದಾಖಲೆಗಳು ನಿರ್ಮಾಣವಾಗಲಿವೆ.

ವಾಂಖೆಡೆ ಅಂಗಳದಲ್ಲಿ ಭಾರತದ 50ನೇ ಪಂದ್ಯ
ಭಾರತ ತಂಡಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ ನೆಚ್ಚಿನ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಮಂಗಳವಾರ ಶ್ರೀಲಂಕಾ ವಿರುದ್ಧದ ಪಂದ್ಯ ಭಾರತ ಇಲ್ಲಿ ಆಡುತ್ತಿರುವ 50ನೇ ಪಂದ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತದೆ.
2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಅಮೋಘ ಗೆಲುವು ಸಾಧಿಸಿದ್ದು ಇದೇ ಅಂಗಳದಲ್ಲಿ. ಭಾರತ ತಂಡಕ್ಕಾಗಿ 50 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದ ಭಾರತದ ನಾಲ್ಕನೇ ಕ್ರೀಡಾಂಗಣ ಎನ್ನುವ ಖ್ಯಾತಿಗೆ ಭಾಜನವಾಗಲಿದೆ.
ಟೀಂ ಇಂಡಿಯಾ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವುದು ಯುಎಇಯಲ್ಲಿರುವ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ. ಇಲ್ಲಿ ಇದುವರೆಗೆ 62 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದೆ.
ವಿಶ್ವಕಪ್ ದೃಷ್ಟಿಯಿಂದ ಈ ಪ್ರವಾಸ ನಮಗೆ ಬಹಳ ಮುಖ್ಯ: ದಸುನ್ ಶನಕ ಹೇಳಿಕೆ

ಚಹಾಲ್‌ಗೆ ಉತ್ತಮ ಅವಕಾಶ
ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತೆ ಭಾರತ ತಂಡಕ್ಕೆ ಮರಳಿದ್ದಾರೆ. ಮಂಗಳವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಅವರು ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.
ಶ್ರೀಲಂಕಾ ವಿರುದ್ಧದ ಮೊದಲನೇ ಪಂದ್ಯದಲ್ಲಿ ಚಹಾಲ್ 4 ವಿಕೆಟ್ ಪಡೆದರೆ ಅವರು ಟಿ20 ಮಾದರಿಯಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ.
87 ಟಿ20 ಪಂದ್ಯಗಳಲ್ಲಿ 90 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಚಹಾಲ್ 71 ಪಂದ್ಯಗಳಲ್ಲಿ 87 ವಿಕೆಟ್ ಪಡೆದಿದ್ದಾರೆ.

ಕುಸಾಲ್ ಮೆಂಡಿಸ್‌ಗೆ 50ನೇ ಪಂದ್ಯ
ಶ್ರೀಲಂಕಾ ತಂಡದ ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ ತಮ್ಮ 50ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಪಾತುಮ್ ನಿಸ್ಸಾಂಕ ಜೊತೆ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕುಸಾಲ್ ಮೆಂಡಿಸ್ ತಂಡಕ್ಕಾಗಿ ಹಲವು ಉತ್ತಮ ಇನ್ನಿಂಗ್ಸ್ ಆಡಿದ್ದಾರೆ.
49 ಟಿ20 ಪಂದ್ಯಗಳಲ್ಲಿ 22.5 ಸರಾಸರಿಯಲ್ಲಿ 1,059 ರನ್ ಗಳಿಸಿದ್ದಾರೆ. 130 ಸ್ಟ್ರೈಕ್ ರೇಟ್ ಹೊಂದಿರುವ ಮೆಂಡಿಸ್, 10 ಅರ್ಧಶತಕಗಳನ್ನು ಗಳಿಸಿದ್ದಾರೆ. ತಮ್ಮ 50ನೇ ಟಿ20 ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ಸ್ಮರಣೀಯವಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications