For Quick Alerts
ALLOW NOTIFICATIONS  
For Daily Alerts
 

4 ರನ್‌ಗಳಲ್ಲಿ ಸೆಂಚುರಿ ಮಿಸ್ ಮಾಡಿಕೊಂಡ ಪಂತ್: ಭಾರತ ಮೊದಲ ದಿನದಾಟದಂತ್ಯಕ್ಕೆ 357/6

India

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದೆ. ಹನುಮ ವಿಹಾರಿ ಅರ್ಧಶತಕ ಮತ್ತು ಕೊಹ್ಲಿ, ಜಡೇಜಾ 40+ ರನ್‌ಗಳ ಕೊಡುಗೆಯ ಜೊತೆಗೆ ರಿಷಭ್ ಪಂತ್ ಅಬ್ಬರಕ್ಕೆ ಭಾರತ ಮೊದಲ ದಿನದಲ್ಲಿ ಉತ್ತಮ ರನ್ ಕಲೆಹಾಕಿದೆ.

ವೇಗವಾಗಿ ರನ್‌ಗಳಿಸಲು ಹೋಗಿ ವಿಕೆಟ್ ಒಪ್ಪಿಸಿದ ಓಪನರ್ಸ್‌

ವೇಗವಾಗಿ ರನ್‌ಗಳಿಸಲು ಹೋಗಿ ವಿಕೆಟ್ ಒಪ್ಪಿಸಿದ ಓಪನರ್ಸ್‌

ಭಾರತದ ಓಪನರ್ಸ್ ಅರ್ಧಶತಕದ ಜೊತೆಯಾಟದ ಮೂಲಕ ಮೊದಲ ವಿಕೆಟ್ ಒಪ್ಪಿಸಿದ್ರು. ರೋಹಿತ್ ಶರ್ಮಾ ತಮ್ಮ ಚೊಚ್ಚಲ ಟೆಸ್ಟ್ ನಾಯಕತ್ವದಲ್ಲಿ ದೊಡ್ಡ ಮಟ್ಟಿನ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರು. ಮೊಹಾಲಿ ಟೆಸ್ಟ್‌ನಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಬ್ಯಾಟ್ಸ್‌ಮನ್ ರೋಹಿತ್‌ಗೆ 28 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ರೋಹಿತ್ ಆರು ಬೌಂಡರಿಗಳನ್ನು ಬಾರಿಸಿದ್ದರು. ದೊಡ್ಡ ಹೊಡೆತದ ಯತ್ನಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ರು.

ಇನ್ನು ಓಪನರ್ ಮಯಾಂಕ್ ಅಗರ್ವಾಲ್ 49 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 33 ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ರು.

100ನೇ ಟೆಸ್ಟ್ ಪಂದ್ಯವನ್ನಾಡಿದ ಕೊಹ್ಲಿ 45ರನ್‌ಗೆ ಔಟ್

100ನೇ ಟೆಸ್ಟ್ ಪಂದ್ಯವನ್ನಾಡಿದ ಕೊಹ್ಲಿ 45ರನ್‌ಗೆ ಔಟ್

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ ಪಂದ್ಯದಲ್ಲಿ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಿರಾಟ್ ಕೊಹ್ಲಿ, ತಮ್ಮ ವಿಶೇಷ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 76 ಎಸೆತಗಳಲ್ಲಿ 45 ರನ್ ಕಲೆಹಾಕುವ ಮೂಲಕ ತನ್ನ ಇನ್ನಿಂಗ್ಸ್‌ ಮುಗಿಸಿದ್ರು. ಮೂರನೇ ವಿಕೆಟ್‌ಗೆ ಹನುಮ ವಿಹಾರಿ ಜೊತೆಗೂಡಿ 90 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಕೊಹ್ಲಿ ಔಟ್ ಆಗುವ ಮೂಲಕ ಬೇರ್ಪಟ್ಟಿತು.

ಇದೇ ಸಂದರ್ಭದಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8000 ರನ್ ಗಡಿ ಮುಟ್ಟಿದ್ದಲ್ಲದೆ 900 ಬೌಂಡರಿ ಸಿಡಿಸಿದ ಸಾಧನೆ ಮಾಡಿದ್ದಾರೆ.

ತಾಳ್ಮೆಯ ಆಟ ಪ್ರದರ್ಶಿಸಿದ ಹನುಮ ವಿಹಾರಿ

ತಾಳ್ಮೆಯ ಆಟ ಪ್ರದರ್ಶಿಸಿದ ಹನುಮ ವಿಹಾರಿ

ಚೇತೇಶ್ವರ ಪೂಜಾರ ಸ್ಥಾನದಲ್ಲಿ ಆಡಿದ ಹನುಮ ವಿಹಾರಿ ಸಿಕ್ಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ್ರು. 128 ಎಸೆತಗಳನ್ನ ಎದುರಿಸಿದ ವಿಹಾರಿ 5 ಬೌಂಡರಿ ಸಹಿತ 58ರನ್ ಕಲೆಹಾಕಿದರು. ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಈತ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. 5ನೇ ಅರ್ಧಶತಕದ ಮೂಲಕ ತಂಡಕ್ಕೆ ಆಧಾರವಾದ್ರು.

ಅಬ್ಬರಿಸಿದ ಪಂತ್, 4 ರನ್‌ಗಳಲ್ಲಿ ಶತಕ ಮಿಸ್

ಅಬ್ಬರಿಸಿದ ಪಂತ್, 4 ರನ್‌ಗಳಲ್ಲಿ ಶತಕ ಮಿಸ್

ಶ್ರೀಲಂಕಾ ಬೌಲರ್‌ಗಳನ್ನ ಚೆಂಡಾಡಿದ ರಿಷಭ್ ಪಂತ್ ಅಬ್ಬರದ ಆಟಕ್ಕೆ ಸಾಕ್ಷಿಯಾದ್ರು. 97 ಎಸೆತಗಳಲ್ಲಿ 96 ರನ್ ಚಚ್ಚಿದ ರಿಷಭ್ ಕೇವಲ 4 ರನ್‌ಗಳಿಸಿದ್ದಾಗ ಲಕ್ಮಲ್‌ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಭಾರೀ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು. ಈ ಮೂಲಕ ಪಂತ್ ತವರಿನಲ್ಲಿ ನಾಲ್ಕನೇ ಬಾರಿಗೆ 90ರ ಗಡಿಯಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

ರಿಷಭ್ ಪಂತ್ ಇನ್ನಿಂಗ್ಸ್‌ನಲ್ಲಿ 9 ಆಕರ್ಷಕ ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳಿದ್ದವು.

ರಿಷಭ್ ಪಂತ್ ವಿಕೆಟ್ ಒಪ್ಪಿಸಿದ ಬಳಿಕ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶ್ರೇಯಸ್ ಅಯ್ಯರ್ 27 ರನ್‌ಗಳ ಕೊಡುಗೆ ನೀಡಿ ಪೆವಿಲಿಯನ್‌ ಸೇರಿಕೊಂಡ್ರು.

ಅರ್ಧಶತಕದತ್ತ ಹೆಜ್ಜೆ ಇಟ್ಟ ಜಡೇಜಾ, ಅಶ್ವಿನ್ ಸಾಥ್

ಅರ್ಧಶತಕದತ್ತ ಹೆಜ್ಜೆ ಇಟ್ಟ ಜಡೇಜಾ, ಅಶ್ವಿನ್ ಸಾಥ್

ಇನ್ನು ಏಳನೇ ವಿಕೆಟ್‌ಗೆ ಸ್ಪಿನ್ ಟ್ವಿನ್ಸ್ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೊತೆಯಾಗಿದ್ದು ದಿನದಾಟದಂತ್ಯಕ್ಕೆ ಜಡೇಜಾ ಅಜೇಯ 45 ರನ್ ಮತ್ತು ಆರ್. ಅಶ್ವಿನ್ ಅಜೇಯ 10 ರನ್‌ಗಳಿಸಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಮೊದಲ ದಿನದಾಟದಲ್ಲಿ 14ನೇ ಬಾರಿಗೆ 350ಕ್ಕೂ ಅಧಿಕ ರನ್ ಕಲೆಹಾಕಿದೆ. ಅದ್ರಲ್ಲಿ ಶ್ರೀಲಂಕಾ ವಿರುದ್ಧವೇ ಆರು ಬಾರಿ ಈ ಸಾಧನೆ ಮಾಡಿದೆ.

ಶ್ರೀಲಂಕಾ ಪರ ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ದೇನಿಯ ಎರಡು ವಿಕೆಟ್ ಪಡೆದ್ರೆ, ಸುರಂಗ ಲಕ್ಮಲ್, ವಿಶ್ವ ಫರ್ನಾಂಡೊ, ಲಹಿರು ಕುಮಾರ, ಧನಂಜಯ ಡಿ ಸಿಲ್ವಾ ತಲಾ 1 ವಿಕೆಟ್ ಪಡೆದಿದ್ದಾರೆ.

Story first published: Saturday, March 5, 2022, 10:29 [IST]
Other articles published on Mar 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+