
ಎರಡನೇ ದಿನದಾಟದಲ್ಲಿ 4 ವಿಕೆಟ್ ಕಳೆದುಕೊಂಡ ಲಂಕಾ
ಮೊದಲೆರಡು ವಿಕೆಟ್ ಕಳೆದುಕೊಂಡ ಶ್ರೀಲಂಕಾ, ದಿನದಾಟದಂತ್ಯಕ್ಕೆ ಮತ್ತೆರಡು ವಿಕೆಟ್ ಕಳೆದುಕೊಂಡು ಕುಸಿತಕ್ಕೆ ಕಾರಣವಾಗಿದೆ. ಏಂಜೆಲೊ ಮ್ಯಥ್ಯೂಸ್ 39 ಎಸೆತಗಳಲ್ಲಿ 22ರನ್‌ಗೆ ಬುಮ್ರಾಗೆ ವಿಕೆಟ್ ಒಪ್ಪಿಸಿದ್ರೆ, ಧನಂಜಯ ಡಿ ಸಿಲ್ವಾ 1 ರನ್‌ಗಳಿಸಿದ್ದಾಗ ಅಶ್ವಿನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಈ ಮೂಲಕ ಲಂಕಾ ದಿನದಾಟದಂತ್ಯದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಪತುಮ್ ನಿಸ್ಸಾಂಕ ಅಜೇಯ 26, ಚರಿತ್ ಅಸಲಂಕಾ ಅಜೇಯ 1ರನ್‌ಗಳಿಸಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಬೃಹತ್ ಮೊತ್ತ ದಾಖಲಿಸಿದ ಭಾರತ
ಇದಕ್ಕೂ ಮೊದಲು ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದ್ದ ಭಾರತ ಪರ ಜಡೇಜಾ ಮತ್ತು ಅಶ್ವಿನ್ ಏಳನೇ ವಿಕೆಟ್‌ಗೆ ಈ ಜೋಡಿ 130 ರನ್‌ಗಳ ಅಮೂಲ್ಯ ಜೊತೆಯಾಟದ ಮೂಲಕ ತಂಡದ ಸ್ಕೋರನ್ನು 500ರ ಗಡಿಯತ್ತ ತಲುಪಿಸಿದ್ರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದ್ದ ಜಡ್ಡು 160ನೇ ಎಸೆತದಲ್ಲಿ 100 ರನ್ ದಾಖಲಿಸಿದರು. ಊಟದ ವಿರಾಮಕ್ಕೆ ಕೆಲ ಸಮಯದ ಹಿಂದೆ ಅರ್ಧಶತಕ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ ರವಿಚಂದ್ರನ್ ಅಶ್ವಿನ್ 82 ಎಸೆತಗಳಲ್ಲಿ 61 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಸುರಂಗ ಲಕ್ಮಲ್ ಬೌಲಿಂಗ್‌ನಲ್ಲಿ ಅಶ್ವಿನ್ ಡಿಕ್ವೆಲ್ಲಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಅಜೇಯ 175 ರನ್ ಕಲೆಹಾಕಿದ ಜಡೇಜಾ
ತಮ್ಮ ಅಮೋಘ ಇನ್ನಿಂಗ್ಸ್ ಮುಂದುವರಿಸಿದ್ದ ಎಡಗೈ ಆಲ್‌ರೌಂಡರ್ ಡಿಕ್ಲೇರ್ ಘೋಷಿಸುವ ಮೊದಲು 228 ಎಸೆತಗಳಲ್ಲಿ ಅಜೇಯ 175 ರನ್ ಕಲೆಹಾಕಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು. ಜಡೇಜಾ ಈ ಅಮೋಘ ಆಟದೊಂದಿಗೆ ಭಾರತ ಮಾಜಿ ನಾಯಕ ಕಪಿಲ್‌ದೇವ್‌ರ 36 ವರ್ಷಗಳ ಹಳೆಯ ದಾಖಲೆ ನುಚ್ಚು ನೂರಾಗಿದೆ.
9ನೇ ವಿಕೆಟ್‌ಗೆ ಜಡೇಜಾಗೆ ಸಾಥ್ ನೀಡಿದ ಮೊಹಮ್ಮದ್ ಶಮಿ ಅಜೇಯ 20 ರನ್ ಕಲೆಹಾಕಿದರು. ಈ ಮೂಲಕ 9ನೆ ವಿಕೆಟ್‌ಗೆ 103 ರನ್‌ಗಳ ಜೊತೆಯಾಟವೂ ಮೂಡಿಬಂತು. ಅಂತಿಮವಾಗಿ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದರು. ಈ ವೇಳೆ ಜಡ್ಡು ಅಜೇಯ 175 ರನ್‌ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಕಲೆಹಾಕಿದರು.


Click it and Unblock the Notifications












