For Quick Alerts
ALLOW NOTIFICATIONS  
For Daily Alerts
 

574 ರನ್‌ಗಳಿಗೆ ಡಿಕ್ಲೇರ್ ಘೋಷಿಸಿದ ಭಾರತ: ಜಡೇಜಾ ಅಜೇಯ 175 ರನ್

Ravindra jadeja

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 574 ರನ್‌ಗಳಿಗೆ ಡಿಕ್ಲೇರ್‌ ಮಾಡಿಕೊಂಡಿದೆ. ಭಾರತ ಪರ ಅಮೋಘ ಶತಕ ದಾಖಲಿಸಿದ ರವೀಂದ್ರ ಜಡೇಜಾ ಅಜೇಯ 175 ರನ್ ಕಲೆಹಾಕಿದ್ದಾರೆ.

ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದ್ದ ಭಾರತ ಪರ ಜಡೇಜಾ ಮತ್ತು ಅಶ್ವಿನ್ ಏಳನೇ ವಿಕೆಟ್‌ಗೆ ಈ ಜೋಡಿ 130 ರನ್‌ಗಳ ಅಮೂಲ್ಯ ಜೊತೆಯಾಟದ ಮೂಲಕ ತಂಡದ ಸ್ಕೋರನ್ನು 500ರ ಗಡಿಯತ್ತ ತಲುಪಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಶತಕ ದಾಖಲಿಸಿದ್ದ ಜಡ್ಡು 160ನೇ ಎಸೆತದಲ್ಲಿ 100 ರನ್ ದಾಖಲಿಸಿದರು. ಊಟದ ವಿರಾಮಕ್ಕೆ ಕೆಲ ಸಮಯದ ಹಿಂದೆ ಅರ್ಧಶತಕ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ ರವಿಚಂದ್ರನ್ ಅಶ್ವಿನ್ 82 ಎಸೆತಗಳಲ್ಲಿ 61 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದ್ರು. ಸುರಂಗ ಲಕ್ಮಲ್ ಬೌಲಿಂಗ್‌ನಲ್ಲಿ ಅಶ್ವಿನ್ ಡಿಕ್ವೆಲ್ಲಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಅಶ್ವಿನ್ ವಿಕೆಟ್ ಪತನದ ಬಳಿಕವೂ ತನ್ನ ಸೊಗಸಾದ ಇನ್ನಿಂಗ್ಸ್‌ ಮುಂದುವರಿಸಿದ ರವೀಂದ್ರ ಜಡೇಜಾ ಡಿಕ್ಲೇರ್ ಘೋಷಿಸುವ ಮೊದಲು 228 ಎಸೆತಗಳಲ್ಲಿ ಅಜೇಯ 175 ರನ್ ಕಲೆಹಾಕಿದ್ದಾರೆ. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 3 ಅಮೋಘ ಸಿಕ್ಸರ್‌ಗಳಿದ್ದವು.

ಕೊಹ್ಲಿ ಔಟಾದ ತಕ್ಷಣ ರೋಹಿತ್ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ | Oneindia Kannada

9ನೇ ವಿಕೆಟ್‌ಗೆ ಜಡೇಜಾಗೆ ಸಾಥ್ ನೀಡಿದ ಮೊಹಮ್ಮದ್‌ ಶಮಿ ಅಜೇಯ 20 ರನ್ ಕಲೆಹಾಕಿದರು. ಈ ಮೂಲಕ 9ನೆ ವಿಕೆಟ್‌ಗೆ 103 ರನ್‌ಗಳ ಜೊತೆಯಾಟವೂ ಮೂಡಿಬಂತು. ಅಂತಿಮವಾಗಿ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದರು. ಈ ವೇಳೆ ಜಡ್ಡು ಅಜೇಯ 175 ರನ್‌ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಕಲೆಹಾಕಿದರು.

Story first published: Saturday, March 5, 2022, 15:21 [IST]
Other articles published on Mar 5, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+