Ind vs SL : ಭಾರತ vs ಶ್ರೀಲಂಕಾ 2ನೇ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ LIVE

ಬೆಂಗಳೂರಿನ ಎನ್. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಪರಿಣಾಮ ಪ್ರವಾಸಿ ಶ್ರೀಲಂಕಾ ಬೌಲಿಂಗ್ ಮಾಡಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಗೆದ್ದು 1-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಪರ ಕೇವಲ ಒಂದು ಬದಲಾವಣೆ ಆಗಿದ್ದು, ಸ್ಪಿನ್ನರ್ ಜಯಂತ್ ಯಾದವ್ ಬದಲು, ಗುಜರಾತ್ ಮೂಲದ ಸ್ಪಿನ್ನರ್ ಅಕ್ಷರ್ ಪಟೇಲ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದಿದ್ದಾರೆ.
ಇನ್ನು ಶ್ರೀಲಂಕಾ ಕೂಡ ಮೊದಲು ಬ್ಯಾಟಿಂಗ್ ಮಾಡುವ ಆಶಯ ಹೊಂದಿತ್ತು. ಆದ್ರೆ ಬೌಲಿಂಗ್ ಮಾಡಬೇಕಾಗಿದ್ದು, ತಂಡದಲ್ಲಿ ಎರಡು ಬದಲಾವಣೆ ಆಗಿದೆ. ನಿಸ್ಸಾಂಕ ಮತ್ತು ಕುಮಾರ ಲಭ್ಯವಿಲ್ಲದ ಕಾರಣ ಕುಸಾಲ್ ಮೆಂಡಿಸ್ ಮತ್ತು ಪ್ರವೀಣ್ ಜಯವಿಕ್ರಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಪಂದ್ಯದ ಲೈವ್ ಅಪ್‌ಡೇಟ್ಸ್ ಈ ಕೆಳಗಿದೆ
ಟೀಂ ಇಂಡಿಯಾ ಪ್ಲೇಯಿಂಗ್ 11
ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ(ನಾಯಕ), ಹನುಮ ವಿಹಾರಿ, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಶ್ರೀಲಂಕಾ ಪ್ಲೇಯಿಂಗ್ 11
ದಿಮುತ್ ಕರುಣಾರತ್ನೆ(ನಾಯಕ), ಲಹಿರು ತಿರಿಮನ್ನೆ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ಸುರಂಗ ಲಕ್ಮಲ್, ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ
ಮೊಹಾಲಿ ಅಂಗಳದಲ್ಲಿ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಸೇರಿದಂತೆ 222ರನ್‌ಗಳ ಬೃಹತ್ ಜಯಗಳಿಸಿದ ಭಾರತ ತಂಡದಲ್ಲಿ ಹೆಚ್ಚು ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ. ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಮೇಲೆ ಅದ್ಭುತ ಗೆಲುವಿನ ದಾಖಲೆಯನ್ನೇ ಮಾಡಿದ್ದಾರೆ. ಸತತ ಪಂದ್ಯಗಳ ಜೊತೆಗೆ ಸರಣಿ ಗೆದ್ದಿರುವ ರೋಹಿತ್ ಸುಲಭವಾಗಿ ಟೆಸ್ಟ್ ಸರಣಿ ಗೆಲುವಿನ ಯೋಜನೆ ಹಾಕಿಕೊಂಡಿದ್ದಾರೆ. ನಾಯಕತ್ವದಲ್ಲಿ ರೋಹಿತ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆದ್ರೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಕೊಡುಗೆ ನೀಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications