IND vs SL: ಟಿ20 ನಾಯಕನಾಗಿ ಹಾರ್ದಿಕ್ ಪಾಂಡ್ಯ ಮುಂದಿರುವ 3 ಕಠಿಣ ಸವಾಲುಗಳು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ವರ್ಷದ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದೆ. ಮೂರು ಪಂದ್ಯಗಳ ಟಿ20 ಸರಣಿಯು ಜನವರಿ 3, ಮಂಗಳವಾರದಿಂದ ಪ್ರಾರಂಭವಾಗಲಿದೆ.
ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಹಂಗಾಮಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ವರದಿಗಳ ಪ್ರಕಾರ, ಬಿಸಿಸಿಐ 2023ರ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಏಕದಿನ ಕ್ರಿಕೆಟ್ ಮೇಲೆ ಪ್ರಮುಖವಾಗಿ ಕೇಂದ್ರೀಕರಿಸುವ 20 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ದೊಡ್ಡ ಆಟಗಾರರು 2023ರಲ್ಲಿ ಹೆಚ್ಚು ಟಿ20 ಪಂದ್ಯಗಳನ್ನು ಆಡುವ ಸಾಧ್ಯತೆ ಕಡಿಮೆ ಇದೆ.
ಹಾರ್ದಿಕ್ ಪಾಂಡ್ಯ ಕೂಡ ಬಿಸಿಸಿಐನ ಏಕದಿನ ವಿಶ್ವಕಪ್ ಯೋಜನೆಗಳ ಭಾಗವಾಗಿದ್ದಾರೆ. ಆದರೆ ಮೇಲೆ ತಿಳಿಸಿದ ನಾಲ್ಕು ಹೆಸರುಗಳಿಗಿಂತ ಭಿನ್ನವಾಗಿ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ. ಅದಕ್ಕಾಗಿಯೇ ಪಾಂಡ್ಯ ಬಹುಶಃ 2023ರ ಋತುವಿನಲ್ಲಿ ಟಿ20 ಸ್ವರೂಪದಲ್ಲಿ ಭಾರತೀಯ ತಂಡವನ್ನು ಮುನ್ನಡೆಸುತ್ತಾರೆ.

ನಾಯಕನ ಹೊಸ ಪಾತ್ರದಲ್ಲಿ ಮೂರು ಕಠಿಣ ಪರೀಕ್ಷೆಗಳು
ಭಾರತ ತಂಡವು ತವರಿನಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಗಳನ್ನು ಆಡಲು ನಿರ್ಧರಿಸಿದೆ. ಭಾರತದಲ್ಲಿ ಏಕದಿನ ವಿಶ್ವಕಪ್ ಮೊದಲು ಇನ್ನೂ ಕೆಲವು ದ್ವಿಪಕ್ಷೀಯ ಟಿ20 ಸರಣಿಗಳು ನಡೆದರೂ ಆಶ್ಚರ್ಯಪಡಬೇಕಾಗಿಲ್ಲ.
ಈ ವರ್ಷದ ಹೆಚ್ಚಿನ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು ಭಾರತೀಯ ಟಿ20 ತಂಡದ ನಾಯಕರಾಗುವ ಸಾಧ್ಯತೆಯಿರುವುದರಿಂದ, ಅವರ ನಾಯಕನ ಹೊಸ ಪಾತ್ರದಲ್ಲಿ ಮೂರು ಕಠಿಣ ಪರೀಕ್ಷೆಗಳನ್ನು ಎದುರಿಸುವುದನ್ನು ಕಾಣಬಹುದು.

ಹಾರ್ದಿಕ್ ಪಾಂಡ್ಯ ಯುವ ಆಟಗಾರ ತಂಡವನ್ನು ಮುನ್ನಡೆಸಬೇಕಾಗಿದೆ
ಟಿ20 ತಂಡದಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು 2023ರಲ್ಲಿ ಯಾವುದೇ ಟಿ20 ಪಂದ್ಯಗಳನ್ನು ಆಡುವ ಸಾಧ್ಯತೆಯಿಲ್ಲ. ಅಲ್ಲದೆ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿಯಂತಹ ಹಿರಿಯ ಆಟಗಾರರನ್ನೂ ಟಿ20 ತಂಡದಿಂದ ಕೈಬಿಡಲಾಗಿದೆ.
ಈ ಬೆಳವಣಿಗೆಗಳಿಂದಾಗಿ ಹಾರ್ದಿಕ್ ಪಾಂಡ್ಯ ಬಹುಶಃ 2023ರಲ್ಲಿ ಭಾರತದ ಟಿ20 ತಂಡದಲ್ಲಿ ಅತ್ಯಂತ ಅನುಭವಿ ಆಟಗಾರನಾಗಿರುತ್ತಾರೆ. ಈ ಆಲ್‌ರೌಂಡರ್ ಶಾಂತವಾಗಿರುಬೇಕಾಗುತ್ತದೆ ಮತ್ತು ತಂಡದ ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶನ ನೀಡಬೇಕಾಗುತ್ತದೆ.
2022ರ ಐಪಿಎಲ್ ಪಂದ್ಯಾವಳಿಯಲ್ಲಿ ಗುಜರಾತ್ ಟೈಟನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಅವರ ತಂಡದಲ್ಲಿ ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್ ಮತ್ತು ಮೊಹಮ್ಮದ್ ಶಮಿಯಂತಹ ಹಿರಿಯ ಆಟಗಾರರನ್ನು ಹೊಂದಿದ್ದರು. ಹೀಗಾಗಿ ಹೊಸ ಆಟಗಾರರ ಜೊತೆ ಆಡುವುದು ಹಾರ್ದಿಕ್ ಪಾಂಡ್ಯಗೆ ಕಠಿಣ ಸವಾಲಾಗಿದೆ.

ಹೊಸ ಆಟಗಾರರಿಗೆ ಅವಕಾಶ ನೀಡಬೇಕಿದೆ
ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡವು ಎದುರಿಸಿದ ದೊಡ್ಡ ಸಮಸ್ಯೆಯೆಂದರೆ ಅನೇಕ ಹೊಸ ಆಟಗಾರರು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಸಾಕಷ್ಟು ಅವಕಾಶ ಪಡೆಯಲಿಲ್ಲ. ರಾಹುಲ್ ತೆವಾಟಿಯಾ, ರಾಹುಲ್ ತ್ರಿಪಾಠಿ ಮತ್ತು ಸಾಯಿ ಕಿಶೋರ್ ಅವರಂತಹ ಯುವ ಆಟಗಾರರು ತಮ್ಮ ಚೊಚ್ಚಲ ಪಂದ್ಯವನ್ನು ಆಡುವ ಮೊದಲೇ ತಂಡದಿಂದ ಕೈಬಿಡಲಾಯಿತು.
ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದ್ದು, ಹಾರ್ದಿಕ್ ಪಾಂಡ್ಯ ಮತ್ತು ತಂಡದ ಮ್ಯಾನೇಜ್‌ಮೆಂಟ್‌ನಿಂದ ಹೊಸ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.

ಹಾರ್ದಿಕ್ ಪಾಂಡ್ಯ ತನ್ನ ಪಾತ್ರವನ್ನು ನಿರ್ಧರಿಸುವುದು
ನಾಯಕ ಹಾರ್ದಿಕ್ ಪಾಂಡ್ಯ ಎದುರಿಸಲಿರುವ ಮತ್ತೊಂದು ಸವಾಲೆಂದರೆ ಆಡುವ 11ರ ಬಳಗದಲ್ಲಿ ತನ್ನದೇ ಆದ ಪಾತ್ರವನ್ನು ನಿರ್ಧರಿಸಬೇಕಿದೆ. ಉಪನಾಯಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಕೆಲಸ ಮಾಡಬೇಕಾಗುತ್ತದೆ ಮತ್ತು ಬ್ಯಾಟಿಂಗ್ ಲೈನ್ಅಪ್ ಮತ್ತು ಅವರು ತಂಡದಲ್ಲಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು.
ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ರನ್ ಗಳಿಸುವ ಭಾರತದ ಕೆಲವೇ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಒಬ್ಬರು. ಅವರು ನಾಲ್ಕು ಓವರ್‌ಗಳನ್ನು ಬೌಲ್ ಮಾಡಬಹುದು ಮತ್ತು ತಂಡಕ್ಕೆ ವಿಕೆಟ್‌ಗಳನ್ನು ಪಡೆಯಬಹುದು. ಆದರೆ ಬೌಲಿಂಗ್ ವಿಭಾಗದಲ್ಲಿಯೂ ನಾಯಕನು ಪವರ್‌ಪ್ಲೇನಲ್ಲಿ ಹೊಸ ಚೆಂಡಿನೊಂದಿಗೆ ಬೌಲ್ ಮಾಡಬೇಕೆ ಅಥವಾ ಪವರ್‌ಪ್ಲೇ ನಂತರ ತನ್ನ ಮೊದಲ ಓವರ್ ಅನ್ನು ಬೌಲ್ ಮಾಡಬೇಕೆ ಎಂದು ನಿರ್ಧರಿಸವುದು ಸವಾಲಿನಿಂದ ಕೂಡಿದೆ.
ಈ ಎಲ್ಲ ಅಂಶಗಳು ಟಿ20 ನಾಯಕ ಹಾರ್ದಿಕ್ ಪಾಂಡ್ಯಗೆ ಸವಾಲಿನಿಂದ ಕೂಡಿದ್ದು, ತಂಡದ ಮ್ಯಾನೇಜ್‌ಮೆಂಟ್, ಕೋಚ್ ಮತ್ತು ಆಟಗಾರರೊಂದಿಗೆ ಸಂವಹನ ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications