IND vs SL 3ನೇ ಏಕದಿನ: ಶ್ರೀಲಂಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ

ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬ್ಯಾಟಿಂಗ್ ನೆರವಿನಿಂದ ಭಾರತ ವನಿತೆಯರ ತಂಡ ಮೂರನೇ ಏಕದಿನ ಪಂದ್ಯದಲ್ಲಿ 39 ರನ್‌ಗಳ ಜಯ ಸಾಧಿಸಿತು ಮತ್ತು ಆ ಮೂಲಕ ಆತಿಥೇಯ ಶ್ರೀಲಂಕಾ ವನಿತೆಯರ ವಿರುದ್ಧ ಗುರುವಾರ ಕ್ಲೀನ್‌ಸ್ವೀಪ್ ಮಾಡಿತು.
ಹರ್ಮನ್‌ಪ್ರೀತ್ ಕೌರ್ 88 ಎಸೆತಗಳಲ್ಲಿ 75 ರನ್ ಗಳಿಸಿ ಮಧ್ಯಮ ಕ್ರಮಾಂಕದ ಕುಸಿತದಿಂದ ಭಾರತವನ್ನು ರಕ್ಷಿಸಿ ನಿಗದಿತ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 255 ರನ್ ಗಳಿಸಿದರು.
ಇದಕ್ಕೂ ಮೊದಲು ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ಹಿಂದಿನ ಪಂದ್ಯದಂತೆ ಬ್ಯಾಟಿಂಗ್ ವೈಭವ ಮರುಸೃಷ್ಟಿಸಲು ವಿಫಲರಾದರು.

ಅನುಭವಿ ಸ್ಮೃತಿ ಮಂಧಾನ ಆರು ರನ್ ಗಳಿಸಿ ಔಟ್
ಅನುಭವಿ ಸ್ಮೃತಿ ಮಂಧಾನ ಅವರು ತಂಡದ ಮೊತ್ತ 30 ಆಗಿದ್ದಾಗ, ಆರು ರನ್ ಗಳಿಸಿ ಮೊದಲಿಗರಾಗಿ ಔಟಾದರು. ಆದಾಗ್ಯೂ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ ತಮ್ಮ ಇನ್ನಿಂಗ್ಸ್‌ನೊಂದಿಗೆ ಮುಂದುವರಿಸಿದರು ಮತ್ತು ಯಾಸ್ತಿಕಾ ಭಾಟಿಯಾ ಅವರಿಂದ ಬೆಂಬಲ ಪಡೆದರು. ಯಾಸ್ತಿಕಾ ಭಾಟಿಯಾ 30 ರನ್‌ಗಳಿಗೆ ಇನೋಕಾ ರಣವೀರ ಬೌಲಿಂಗ್‌ನಲ್ಲಿ ಔಟಾದರು. ಅದಕ್ಕೂ ಮೊದಲು ಈ ಜೋಡಿ 59 ರನ್‌ಗಳ ಜೊತೆಯಾಟವನ್ನು ನೀಡಿದರು.
ನಂತರ ಭಾರತ ಮಧ್ಯಮ ಕ್ರಮಾಂಕದ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಪ್ರವಾಸಿ ಭಾರತ ತಂಡ ಆರು ವಿಕೆಟ್‌ಗೆ 124 ಗಳಿಸಿ ಸ್ಕೋರ್‌ಬೋರ್ಡ್‌ನಲ್ಲಿ ಬೇಗನೆ ತೊಂದರೆಗೆ ಸಿಲುಕಿದರು. ನಂತರ ಕಠಿಣ ಹಂತದಲ್ಲಿ ಭಾರತವನ್ನು ಮುನ್ನಡೆಸಿದ ಹರ್ಮನ್‌ಪ್ರೀತ್ ಕೌರ್ ಮತ್ತು ಪೂಜಾ ವಸ್ತ್ರಾಕರ್ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆಲ್‌ರೌಂಡರ್ ವಸ್ತ್ರಾಕರ್ 65 ಎಸೆತಗಳಲ್ಲಿ 56 ರನ್ ಗಳಿಸಿ ಅಜೇಯರಾಗಿ ಉಳಿದರು.

ನಾಯಕಿ ಹರ್ಮನ್‌ಪ್ರೀತ್ ಕೌರ್ 88 ಎಸೆತಗಳಲ್ಲಿ 75 ರನ್
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಎದುರಿಸಿದ 88 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಒಳಗೊಂಡ 75 ರನ್ ಬಾರಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಕೇವಲ ಏಳು ರನ್ ಗಳಿಸಿದ್ದಾಗ ಆರಂಭಿಕ ಆಟಗಾರ್ತಿ ವಿಶ್ಮಿ ಗುಣರತ್ನೆ ಅವರನ್ನು ಕಳೆದುಕೊಂಡಿದ್ದರಿಂದ ಕಳಪೆ ಆರಂಭವನ್ನು ಪಡೆಯಿತು. ನಾಯಕಿ ಚಾಮರಿ ಅಟಾಪಟ್ಟು 41 ಎಸೆತಗಳಲ್ಲಿ 44 ರನ್ ಗಳಿಸಿ ಉತ್ತಮ ಆಟವಾಡಿದರು. ಆದರೆ ಅವರು ಔಟಾಗುತ್ತಿದ್ದಂತಯೇ ಆತಿಥೇಯ ತಂಡಕ್ಕೆ ಹಿನ್ನಡೆಯಾಯಿತು.

ಶ್ರೀಲಂಕಾ 47.3 ಓವರ್‌ಗಳಲ್ಲಿ 216ಕ್ಕೆ ಆಲೌಟ್
ಅಟಾಪಟ್ಟು ಔಟಾದ ನಂತರ, ಹಾಸಿನಿ ಪೆರಾರಾ ಸ್ವಲ್ಪ ಪ್ರತಿರೋಧವನ್ನು ನೀಡಿದರು ಮತ್ತು ಕೊನೆಯಲ್ಲಿ ನೀಲಾಕ್ಷಿ ಡಿ ಸಿಲ್ವಾ 59 ಎಸೆತಗಳಲ್ಲಿ 48 ರನ್ ಗಳಿಸಿ ಆತಿಥೇಯರಿಗೆ ಸ್ವಲ್ಪ ಭರವಸೆ ನೀಡಿದರು. ಆದಾಗ್ಯೂ ಇತರ ಬ್ಯಾಟರ್‌ಗಳು ಪ್ರವಾಸಿ ತಂಡದ ಬೌಲಿಂಗ್‌ಗೆ ಪ್ರತಿರೋಧ ನೀಡಲು ವಿಫಲರಾದರು ಮತ್ತು ಶ್ರೀಲಂಕಾ ಇನ್ನಿಂಗ್ಸ್ 47.3 ಓವರ್‌ಗಳಲ್ಲಿ 216ಕ್ಕೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಪಂದ್ಯ ಹಾಗೂ ಸರಣಿ ಸೋಲಿನ ಆಘಾತ ಅನುಭವಿಸಿತು. ಈ ಹಿಂದೆಯೂ ಟಿ20 ಸರಣಿಯನ್ನು ಭಾರತ ಗೆದ್ದಕೊಂಡಿತ್ತು.
ಭಾರತದ ಪರ ರಾಜೇಶ್ವರಿ ಗಾಯಕ್ವಾಡ್ 10 ಓವರ್‌ಗಳಲ್ಲಿ ಕೇವಲ 36 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟಾಪ್ ಬೌಲರ್ ಆಗಿ ಮೂಡಿಬಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications