IND vs SL 3rd ODI: 317 ರನ್‌ಗಳ ವಿಶ್ವದಾಖಲೆಯ ಜಯ! ಸರಣಿ ವೈಟ್ ವಾಶ್ ಮಾಡಿದ ಟೀಂ ಇಂಡಿಯಾ

ತಿರುವನಂತರಪುರದ ಗ್ರೀನ್‌ಫೀಲ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ವಿಶ್ವ ದಾಖಲೆಯ ವಿಜಯ ಸಾಧಿಸುವ ಮೂಲಕ ಸರಣಿಯನ್ನು ವೈಟ್‌ವಾಶ್ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಶತಕದ ನೆರವಿನಿಂದ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 390 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಯಿಂದ ಕಂಗೆಟ್ಟಿತು. ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಸಿಕ್ಕ ಲಂಕಾಪಡೆ, 22 ಓವರ್ ಗಳಲ್ಲಿ ಕೇವಲ 73 ರನ್‌ಗಳಿಗೆ ಆಲೌಟ್ ಆಗುವ ಮೂಲಕ 317 ರನ್‌ಗಳ ಬೃಹತ್ ಅಂತರದಲ್ಲಿ ಸೋಲನುಭವಿಸಿತು.
ಅತ್ಯಂತ ಕರಾರುವಕ್ಕಾದ ಬೌಲಿಂಗ್ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್, 10 ಓವರ್ ಗಳಲ್ಲಿ 32 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ಮಾತ್ರವಲ್ಲದೆ ಒಂದು ರನೌಟ್ ಮಾಡುವ ಮೂಲಕ ಮಿಂಚಿದರು.
ಮೊಹಮ್ಮದ್ ಶಮಿ 6 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೆ, ಸ್ಪಿನ್ನರ್ ಕುಲದೀಪ್ ಯಾದವ್ 5 ಓವರ್ ಗಳಲ್ಲಿ 16 ರನ್ ನೀಡಿ 2 ವಿಕೆಟ್ ಪಡೆದರು.

ಕೊಹ್ಲಿ, ಗಿಲ್ ಶತಕದ ಅಬ್ಬರ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಅತ್ಯುತ್ತಮ ಆರಂಭ ಪಡೆಯಿತು. ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 95 ರನ್‌ಗಳ ಜೊತೆಯಾಟ ಆಡುವ ಮೂಲಕ ಉತ್ತಮ ಅಡಿಪಾಯ ಹಾಕಿದರು. ರೋಹಿತ್ ಶರ್ಮಾ 42 ರನ್ ಗಳಿಸಿ ಔಟಾದರು.
ನಂತರ ಕ್ರೀಸ್‌ಗೆ ಬಂದ ಕೊಹ್ಲಿ ಗಿಲ್ ಜೊತೆಗೂಡಿ ಲಂಕಾ ಬೌಲರ್ ಗಳನ್ನು ಮನ ಬಂದಂತೆ ದಂಡಿಸಿದರು. ಗಿಲ್ ಮತ್ತು ಕೊಹ್ಲಿ ಜೋಡಿ 112 ಎಸೆತಗಳಲ್ಲಿ 131 ರನ್ ಗಳಿಸಿದರು. 97 ಎಸೆತಗಳಲ್ಲಿ 116 ರನ್ ಗಳಿಸಿದ ಶುಭಮನ್ ಗಿಲ್ ಔಟಾದ ಬಳಿಕ, ಕೊಹ್ಲಿ ತಮ್ಮ ವಿರಾಟ್ ರೂಪ ಪ್ರದರ್ಶಿಸಿದರು.
ಶ್ರೇಯಸ್ ಅಯ್ಯರ್ ಮತ್ತು ಕೊಹ್ಲಿ 71 ಎಸೆತಗಳಲ್ಲಿ 108 ರನ್‌ಗಳ ಜೊತೆಯಾಟ ಆಡಿದರು. ಕೊಹ್ಲಿ 110 ಎಸೆತಗಳಲ್ಲಿ 13 ಬೌಂಡರಿ 8 ಸಿಕ್ಸರ್ ನೆರವಿನಿಂದ ಅಜೇಯ 166 ರನ್ ಸಿಡಿಸಿದರು.
ಟಿ20 ಕ್ರಿಕೆಟ್‌ನಲ್ಲಿ ಈ ಇಬ್ಬರು ಭಾರತದ ಖಾಯಂ ಆರಂಭಿಕ ಬ್ಯಾಟರ್‌ಗಳಾಬೇಕು; ಗೌತಮ್ ಗಂಭೀರ್

ಏಕದಿನ ಇತಿಹಾಸದಲ್ಲಿ ದಾಖಲೆಯ ಜಯ
390 ರನ್ ಗಳಿಸಿದ ಟೀಂ ಇಂಡಿಯಾ ಶ್ರೀಲಂಕಾ ತಂಡವನ್ನು 73 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 317 ರನ್‌ಗಳ ಜಯ ಸಾಧಿಸಿತು. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು 300ಕ್ಕೂ ಹೆಚ್ಚು ರನ್‌ಗಳ ಜಯವನ್ನು ದಾಖಲಿಸಿದ ತಂಡ ಎನ್ನುವ ಖ್ಯಾತಿಗೆ ಟೀಂ ಇಂಡಿಯಾ ಭಾಜನವಾಗಿದೆ.
ಇದುವರೆಗೂ ಯಾವುದೇ ತಂಡ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 300ಕ್ಕೂ ಹೆಚ್ಚಿನ ರನ್‌ಗಳ ಅಂತರದ ಗೆಲುವು ಕಂಡಿಲ್ಲ. ಟೀಂ ಇಂಡಿಯಾ ಮೊದಲ ಬಾರಿಗೆ ಈ ಸಾಧನೆ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಸಂಕ್ರಾಂತಿ ಉಡುಗೊರೆ ನೀಡಿದೆ.

ವಿರಾಟ್ ಕೊಹ್ಲಿ ಪಂದ್ಯ, ಸರಣಿ ಶ್ರೇಷ್ಠ ಆಟಗಾರ
ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಎರಡು ಶತಕ ಗಳಿಸಿ ಮಿಂಚಿದ ವಿರಾಟ್ ಕೊಹ್ಲಿ ಪಂದ್ಯದ ಆಟಗಾರ ಮತ್ತು ಸರಣಿಯ ಆಟಗಾರ ಪ್ರಶಸ್ತಿ ಪಡೆದರು. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 3 ಪಂದ್ಯಗಳಿಂದ 141.50 ಸರಾಸರಿಯಲ್ಲಿ 137.38 ಸ್ಟ್ರೈಕ್‌ರೇಟ್‌ನಲ್ಲಿ 283 ರನ್ ಗಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಭಾರತ 2023ರ ಏಕದಿನ ವಿಶ್ವಕಪ್‌ಗೆ ತಯಾರಿ ಶುರು ಮಾಡಿದೆ. ವರ್ಷದ ಮೊದಲ ಏಕದಿನ ಸರಣಿಯನ್ನು ಗೆದ್ದಿರುವ ಭಾರತಕ್ಕೆ, ಕಿವೀಸ್ ಪಡೆ ಮುಂದಿನ ಸವಾಲಾಗಿದೆ. ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಜನವರಿ 18 ರಂದು ಹೈದರಾಬಾದ್‌ನಲ್ಲಿ ಮೊದಲನೇ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications