ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಕೊಹ್ಲಿ ಸೇರಿ ಮೂವರು ಪ್ರಮುಖರು ತಂಡದಿಂದ ಔಟ್!

IND vs SL: India Squad Announced for Sri Lanka T20I Series

ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿರುವ ವೆಸ್ಟ್ ಇಂಡೀಸ್ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಗಳಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ ಏಕದಿನ ಸರಣಿ ಈಗಾಗಲೇ ಮುಗಿದಿದ್ದು, ಈ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಭಾರತ ವೈಟ್ ವಾಶ್ ಸಾಧನೆ ಮಾಡಿದೆ. ಹೀಗೆ ಏಕದಿನ ಸರಣಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ಬೆನ್ನಲ್ಲೇ ಆರಂಭವಾದ ಟಿ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿರುವ ಟೀಮ್ ಇಂಡಿಯಾ ಈ ಸರಣಿಯಲ್ಲಿಯೂ ಕೂಡ ವೈಟ್ ವಾಷ್ ಸಾಧನೆ ಮಾಡುವ ಸನಿಹದಲ್ಲಿದೆ. ಇನ್ನು ಸದ್ಯ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಸರಣಿಗಳು ಫೆಬ್ರವರಿ 20ರ ಭಾನುವಾರದಂದು ನಡೆಯಲಿರುವ ಅಂತಿಮ ಟಿ ಟ್ವೆಂಟಿ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ.

ಈ ರೀತಿ ಆಡುವುದು ನ್ಯಾಯವಲ್ಲ: ಕೊಹ್ಲಿ ವಿಕೆಟ್ ಪಡೆದ ವಿಂಡೀಸ್ ಬೌಲರ್ ವಿರುದ್ಧ ಗವಾಸ್ಕರ್ ಕಿಡಿ!ಈ ರೀತಿ ಆಡುವುದು ನ್ಯಾಯವಲ್ಲ: ಕೊಹ್ಲಿ ವಿಕೆಟ್ ಪಡೆದ ವಿಂಡೀಸ್ ಬೌಲರ್ ವಿರುದ್ಧ ಗವಾಸ್ಕರ್ ಕಿಡಿ!

ಹೀಗೆ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಸರಣಿಗಳು ಮುಕ್ತಾಯವಾದ ನಂತರದ ಕೆಲವೇ ದಿನಗಳಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸರಣಿಗಳು ಆರಂಭಗೊಳ್ಳಲಿವೆ. ಹೌದು, ಶ್ರೀಲಂಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ಸಲುವಾಗಿ ಇದೀಗ ಬಿಸಿಸಿಐ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಿಗೆ 2 ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದ್ದು, ಭಾರತ ಟೆಸ್ಟ್ ತಂಡಕ್ಕೂ ಕೂಡ ರೋಹಿತ್ ಶರ್ಮಾ ಅವರೇ ನೂತನ ನಾಯಕ ಎಂಬುದನ್ನು ಘೋಷಿಸಿದೆ.

ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!ಕೊಹ್ಲಿ ನೀಡಿದ್ದ ಬೆಲೆ ಕಟ್ಟಲಾಗದ ಉಡುಗೊರೆಯನ್ನು ಕಣ್ಣೀರಿಟ್ಟು ವಾಪಸ್ ಮಾಡಿದ್ದೆ ಎಂದ ಸಚಿನ್!

ಹೀಗೆ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಭಾರತ ತಂಡದಿಂದ ವಿರಾಟ್ ಕೊಹ್ಲಿ ಸೇರಿ ಕೆಲ ಪ್ರಮುಖ ಆಟಗಾರರು ಹೊರಗುಳಿದಿದ್ದು, ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರು ಯಾರು ಮತ್ತು ಹೊರಬಿದ್ದಿರುವ ಆಟಗಾರರು ಯಾರು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾ ಹೀಗಿದೆ

ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾ ಹೀಗಿದೆ

ಶ್ರೀಲಂಕಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರ ಪಟ್ಟಿ ಇಲ್ಲಿದೆ: ರೋಹಿತ್ ಶರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವಿ ಜಡೇಜಾ, ಯುಜುವೇಂದ್ರ ಚಾಹಲ್, ಆರ್ ಬಿಷ್ಣೋಯ್, ಕುಲದೀಪ್, ಅವೇಶ್ ಖಾನ್

ಕೊಹ್ಲಿ ಸೇರಿ ಒಟ್ಟು ಮೂವರು ಪ್ರಮುಖರು ತಂಡದಿಂದ ಹೊರಕ್ಕೆ

ಕೊಹ್ಲಿ ಸೇರಿ ಒಟ್ಟು ಮೂವರು ಪ್ರಮುಖರು ತಂಡದಿಂದ ಹೊರಕ್ಕೆ

ಹೀಗೆ ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ 19 ಆಟಗಾರರ ಭಾರತ ತಂಡದಲ್ಲಿ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರ ಹೆಸರು ಇಲ್ಲದೇ ಇರುವುದು ಅಭಿಮಾನಿಗಳಲ್ಲಿ ತುಸು ಬೇಸರ ಮೂಡಿಸಿದೆ. ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ವಿಶ್ರಾಂತಿಗೆಂದು ಈ ಸರಣಿಯಿಂದ ಹೊರಗುಳಿದಿದ್ದರೆ, ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಟಿ ಟ್ವೆಂಟಿ ಸರಣಿಯ ವೇಳಾಪಟ್ಟಿ

ಭಾರತ ಮತ್ತು ಶ್ರೀಲಂಕಾ ನಡುವಿನ ಟಿ ಟ್ವೆಂಟಿ ಸರಣಿಯ ವೇಳಾಪಟ್ಟಿ

ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯ ವೇಳಾಪಟ್ಟಿ ಹೀಗಿದೆ:


ಮೊದಲನೇ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 24ರಂದು ಸಂಜೆ 7ಕ್ಕೆ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯಲಿದೆ.


ದ್ವಿತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 26ರಂದು ಸಂಜೆ 7ಕ್ಕೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದೆ.


ತೃತೀಯ ಟಿ ಟ್ವೆಂಟಿ ಪಂದ್ಯ: ಫೆಬ್ರವರಿ 27ರಂದು ಸಂಜೆ 7ಕ್ಕೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

Story first published: Saturday, February 19, 2022, 20:45 [IST]
Other articles published on Feb 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X