IND Vs SL: ಶ್ರೀಲಂಕಾ ವಿರುದ್ಧದ ಸರಣಿಗೆ ಮುಂದಿನ ವಾರ ಭಾರತ ತಂಡ ಪ್ರಕಟ, ರೋಹಿತ್ ಶರ್ಮಾ ಆಡೋದು ಅನುಮಾನ?

ಬಾಂಗ್ಲಾದೇಶದ ವಿರುದ್ಧದ ಸರಣಿಯ ನಂತರ ಭಾರತ ತಂಡ ಶ್ರೀಲಂಕಾ ವಿರುದ್ಧದ ಸರಣಿಗೆ ಸಿದ್ಧವಾಗಬೇಕಿದೆ. ಜನವರಿ ಮೊದಲನೇ ವಾರದಲ್ಲಿ ಭಾರತ - ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ನಂತರ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡವನ್ನು ಮುಂದಿನ ವಾರ ಆಯ್ಕೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ನಾಯಕ ರೋಹಿತ್ ಶರ್ಮಾ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿದ್ದು, ಅವರ ಆಯ್ಕೆ ಇನ್ನೂ ಅನುಮಾನವಾಗಿದೆ.
ಟಿ20 ಸರಣಿಯಲ್ಲಿ ರೋಹಿತ್ ಶರ್ಮಾ ಆಡುವುದು ಅನುಮಾನವಾದರೂ, ಜನವರಿ 10 ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಅವರು ಆಡುತ್ತಾರೆ ಎನ್ನಲಾಗಿದೆ. ರೋಹಿತ್ ಶರ್ಮಾ ಆಯ್ಕೆ ಬಗ್ಗೆ ಮುಂದಿನ ವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಎನ್‌ಸಿಎ ರೋಹಿತ್ ಶರ್ಮಾಗೆ ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್ ಆಡಲು ಅನುಮತಿ ನೀಡಿದರೂ ಕೂಡ, ಮಂಡಳಿಯ ವೈದ್ಯಕೀಯ ತಂಡ ಅವರನ್ನು ಹೊರಗಿಟ್ಟಿದೆ. ಮುಂದಿನ ವಾರ ರೋಹಿತ್ ಶರ್ಮಾ ಅವರ ಗಾಯದ ಬಗ್ಗೆ ಮತ್ತೆ ಮೌಲ್ಯಮಾಪನ ಮಾಡಲಿದ್ದು, ನಂತರ ಅವರ ಆಯ್ಕೆಯ ಬಗ್ಗೆ ಖಚಿತವಾಗಿ ತಿಳಿಯಲಿದೆ.

ಟಿ20 ಮತ್ತು ಏಕದಿನ ಸರಣಿ
ಶ್ರೀಲಂಕಾ ಭಾರತಕ್ಕೆ ಪ್ರವಾಸ ಮಾಡಲಿದ್ದು ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಜನವರಿ 3 ರಂದು ಟಿ20 ಸರಣಿಯ ಮೊದಲನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಜನವರಿ 5ರಂದು ಎರಡನೇ ಟಿ20 ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಜನವರಿ 7 ರಂದು ನಡೆಯಲಿರುವ ಸರಣಿಯ ಕೊನೆಯ ಪಂದ್ಯಕ್ಕೆ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಜನವರಿ 10 ರಂದು ಏಕದಿನ ಸರಣಿಯ ಮೊದಲನೇ ಪಂದ್ಯ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಜನವರಿ 12 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಎರಡನೇ ಪಂದ್ಯ ಮತ್ತು ಜನವರಿ 15 ರಂದು ತಿರುವನಂತಪುರದ ಗ್ರೀನ್‌ಫಿಲ್ಡ್ ಸ್ಟೇಡಿಯಂನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ.
IPL 2023: ಮಿನಿ ಹರಾಜಿನಲ್ಲಿ ಈತ ಅತ್ಯಂತ ಗಮನ ಸೆಳೆಯುವ ಆಟಗಾರ ಎಂದ ಸುರೇಶ್ ರೈನಾ

ಟಿ20 ಸರಣಿಯಲ್ಲಿ ಹೊಸಬರಿಗೆ ಅವಕಾಶ
2023ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಭಾರತ ತಂಡ ತಯಾರಿ ನಡೆಸುತ್ತಿದೆ. ಟಿ20 ಮಾದರಿಯಲ್ಲಿ ಹಲವು ಹಿರಿಯ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಏಕದಿನ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸಲಿದ್ದು, ಟಿ20 ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧದ ಸರಣಿಗೆ ನಾಯಕರಾಗುವ ಸಾಧ್ಯತೆ ಇದೆ. ಹಲವು ಯುವ ಪ್ರತಿಭೆಗಳು ಈ ಸರಣಿಯಲ್ಲಿ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ.

ಆಟಗಾರರ ಗಾಯದ ಸಮಸ್ಯೆ
ಭಾರತ ತಂಡದ ಆಯ್ಕೆ ಪ್ರಮುಖ ಆಟಗಾರರ ಗಾಯದ ಸಮಸ್ಯೆ ದೊಡ್ಡ ಅಡ್ಡಿಯಾಗಿದೆ. ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ, ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಂಡಕ್ಕೆ ಮರಳುವ ವಿಶ್ವಾಸವಿದೆ.
ರವೀಂದ್ರ ಜಡೇಜಾ ಲಭ್ಯತೆ ಬಗ್ಗೆ ಕೂಡ ಇನ್ನೂ ಸ್ಪಷ್ಟನೆಯಿಲ್ಲ. ದೀಪಕ್ ಚಹಾರ್ ಕೂಡ ಬಾಂಗ್ಲಾದೇಶದ ವಿರುದ್ದದ ಸರಣಿಯಲ್ಲಿ ಗಾಯಗೊಂಡಿದ್ದಾರೆ. ಪ್ರಮುಖ ಆಟಗಾರರು ಗಾಯಗೊಂಡಿರುವುದು ಆಯ್ಕೆದಾರರ ತಲೆನೋವನ್ನು ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications