IPL 2023: ಮಿನಿ ಹರಾಜಿನಲ್ಲಿ ಈತ ಅತ್ಯಂತ ಗಮನ ಸೆಳೆಯುವ ಆಟಗಾರ ಎಂದ ಸುರೇಶ್ ರೈನಾ

2023ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ನಡೆಯುವ ಮಿನಿ ಹರಾಜಿನಲ್ಲಿ ಐರ್ಲೆಂಡ್‌ನ ಜೋಶುವಾ ಲಿಟಲ್ ಅತ್ಯಂತ ಗಮನಿಸಬೇಕಾದ ಆಟಗಾರ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್ ಮತ್ತು ಹ್ಯಾರಿ ಟೆಕ್ಟರ್ ಜೊತೆಗೆ ನಾಲ್ವರು ಐರ್ಲೆಂಡ್ ಕ್ರಿಕೆಟಿಗರಲ್ಲಿ ಜೋಶುವಾ ಲಿಟಲ್ ಕೂಡ ಸೇರಿದ್ದಾರೆ. ಈ ಎಡಗೈ ವೇಗದ ಬೌಲರ್‌ನ ಮೂಲ ಬೆಲೆ 50 ಲಕ್ಷ ರೂ. ಆಗಿದೆ.
ಇತ್ತೀಚೆಗೆ 23 ವರ್ಷದ ಜೋಶುವಾ ಲಿಟಲ್ ಅಬುಧಾಬಿ ಟಿ10 ಲೀಗ್‌ನಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡಕ್ಕಾಗಿ ಸುರೇಶ್ ರೈನಾ ಜೊತೆಗೆ ಆಡಿದ್ದಾರೆ.

"ಸ್ಯಾಮ್ ಕರ್ರಾನ್ ಇಂಗ್ಲೆಂಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಇಂಗ್ಲೆಂಡ್ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ಬೆನ್ ಸ್ಟೋಕ್ಸ್ ಇದ್ದಾರೆ. ಆದ್ದರಿಂದ ನಿಮ್ಮ ತಂಡದಲ್ಲಿ ಅಗ್ರ ಆಲ್‌ರೌಂಡರ್ ಇದ್ದರೆ ಆಟದ ವೇಗವನ್ನು ಬದಲಾಯಿಸಬಹುದು. ಇದೇ ವೇಳೇ ಭಾರತದ ದೇಶೀಯ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಗೆದ್ದು ಐಪಿಎಲ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಜಯದೇವ್ ಉನಾದ್ಕಟ್ ಕೂಡ ಇದ್ದಾರೆ," ಎಂದು ಮಾಜಿ ಎಡಗೈ ಬ್ಯಾಟರ್ ಸುರೇಶ್ ರೈನಾ ಜಿಯೋ ಸಿನಿಮಾಗೆ ಹೇಳಿದರು.
"ಐರ್ಲೆಂಡ್‌ನ ಜೋಶುವಾ ಲಿಟಲ್‌ರನ್ನು ಗಮನಿಸಿ. ಆತ ಇತ್ತೀಚೆಗೆ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ನಾನು ಅವರೊಂದಿಗೆ ಆಡಿದ್ದೇನೆ. ಎನ್ ಜಗದೀಸನ್ ಅವರು ಉತ್ತಮ ಕ್ರಿಕೆಟ್ ಮೈಂಡ್ ಅನ್ನು ಹೊಂದಿದ್ದಾರೆ. ಅವರು ತುಂಬಾ ಉತ್ಕೃಷ್ಟವಾಗಿ ಬ್ಯಾಟ್ ಮಾಡುತ್ತಾರೆ ಮತ್ತು ತುಂಬಾ ಬುದ್ಧಿವಂತ, ಲೆಕ್ಕಾಚಾರದ ಆಟವಾಡುತ್ತಾರೆ. ಅವರು ತಮಿಳುನಾಡು ತಂಡಕ್ಕೆ ಅತ್ಯುತ್ತಮವಾಗಿ ಆಡಿದ್ದಾರೆ, ಅವರ ಬಗ್ಗೆ ಎಚ್ಚರದಿಂದಿರಿ," ಎಂದು ಸುರೇಶ್ ರೈನಾ ತಿಳಿಸಿದರು.

ಐರೀಶ್ ವೇಗಿ ಜೋಶುವಾ ಲಿಟಲ್ ಪ್ರಸ್ತುತ 2022ರಲ್ಲಿ ಟಿ20 ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. ಆಡಿದ 26 ಪಂದ್ಯಗಳಿಂದ 7.58 ಎಕಾನಮಿ ದರದಲ್ಲಿ 39 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಅವರ ಪ್ರಯತ್ನಗಳನ್ನು ಪ್ರಸ್ತುತಪಡಿಸಲು ಒಂದು ಬಾರಿ ನಾಲ್ಕು ವಿಕೆಟ್ ಪಡೆದಿದ್ದಾರೆ.
ಟಿ20 ವಿಶ್ವಕಪ್ 2022ರ ಸೂಪರ್ 12ನಲ್ಲಿ ಜೋಶುವಾ ಲಿಟಲ್ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ಸಾಧಿಸಿದರು. 2021ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಸಾಧನೆ ಮಾಡಿದ ಕರ್ಟಿಸ್ ಕ್ಯಾಂಫರ್ ನಂತರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಐರ್ಲೆಂಡ್‌ನ ಎರಡನೇ ಬೌಲರ್ ಎನಿಸಿಕೊಂಡರು.
ಟಿ20 ವಿಶ್ವಕಪ್ 2022ರಲ್ಲಿ ಜೋಶುವಾ ಲಿಟಲ್ ಏಳು ಪಂದ್ಯಗಳಿಂದ 7 ಎಕಾನಮಿ ದರದಲ್ಲಿ 11 ವಿಕೆಟ್‌ಗಳನ್ನು ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications