
ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಲಕ್ನೋ ಅಂಗಳದಲ್ಲಿ ಭಾರತ-ಶ್ರೀಲಂಕಾ ತಂಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಎದುರಾಳಿಯನ್ನ ವೈಟ್ ವಾಶ್ ಮಾಡಿರುವ ರೋಹಿತ್ ಬಳಗ ಲಂಕಾ ವಿರುದ್ಧವೂ ಅದೇ ಗೆಲುವನ್ನ ಮುಂದುವರಿಸುವ ಯೋಜನೆ ಹಾಕಿದೆ.
ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನದಲ್ಲಿರುವ ಟೀಂ ಇಂಡಿಯಾ ಒಂದು ಕಡೆಯಾದ್ರೆ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ 1-4 ಅಂತರದಲ್ಲಿ ಟಿ20 ಸೋತಿರುವ ಶ್ರೀಲಂಕಾ 9ನೇ ರ್ಯಾಂಕಿಂಗ್‌ನಲ್ಲಿದೆ. ಹೀಗಾಗಿ ಆನ್ ಪೇಪರ್ ಮತ್ತು ಫೀಲ್ಡ್‌ನಲ್ಲಿ ಟೀಂ ಇಂಡಿಯಾ ಬಲ ಹೆಚ್ಚಿದೆ.
ಟೀಂ ಇಂಡಿಯಾ ಪರ ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಚಹಾರ್ ಟಿ20 ಸರಣಿಗೆ ಅಲಭ್ಯರಾಗಿದ್ದಾರೆ. ಇನ್ನೂ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಜೊತೆಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ. ಇದರ ನಡುವೆ ಕೀ ಬೌಲಿಂಗ್ ಜಸ್ಪ್ರೀತ್ ಬುಮ್ರಾ ಮತ್ತು ಎರಡು ತಿಂಗಳಿನಿಂದ ಭಾರತದ ತಂಡದಿಂದ ಹೊರಗುಳಿದಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ ಕಂಬ್ಯಾಕ್ ಮಾಡಿರುವುದು ತಂಡಕ್ಕೆ ಆನೆಬಲ ನೀಡಿದೆ.
ಇದೇ ವೇಳೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ಸಿಕ್ಕಿದೆ. ಹಲವು ಆಯ್ಕೆಗಳೊಂದಿಗೆ, ಮ್ಯಾನೇಜ್‌ಮೆಂಟ್ ಸ್ಯಾಮ್ಸನ್‌ಗೆ ಅವಕಾಶ ನೀಡಿದ್ದು ತಮ್ಮನ್ನ ತಾವು ಪ್ರೂವ್ ಮಾಡಲೇಬೇಕಿದೆ.
ಲಕ್ನೋದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿದೆ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್, ಯುಜವೇಂದ್ರ ಚಹಾಲ್