IND vs SL: ಟಿ20 ಸರಣಿಗೂ ಮುನ್ನ ಶ್ರೀಲಂಕಾ ತಂಡಕ್ಕೆ ಗಾಯದ ಬರೆ; ಇಬ್ಬರು ಯುವ ವೇಗಿಗಳಿಗೆ ಅಗ್ನಿ ಪರೀಕ್ಷೆ!
ಜುಲೈ 26 ಶುಕ್ರವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕೇವಲ ಒಂದು ದಿನ ಬಾಕಿ ಉಳಿದಿದೆ. ಜುಲೈ 27 ರಂದು ಪಲ್ಲೆಕಲೆಯಲ್ಲಿ ಮೊದಲ ಪಂದ್ಯ ನಡೆಯಲಿದೆ.
ಜುಲೈ 23 ರಂದು ಭಾರತ ವಿರುದ್ಧದ ಟಿ20 ಸರಣಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಿತ್ತು. ಇದಾದ ಕೇವಲ 2 ದಿನಗಳಲ್ಲಿ ತಂಡ ಎರಡು ಹಿನ್ನಡೆ ಅನುಭವಿಸಿದೆ.

ಇಬ್ಬರು ಸ್ಟಾರ್ ವೇಗದ ಬೌಲರ್‌ಗಳನ್ನು ಶ್ರೀಲಂಕಾ ತಂಡವು ಕಳೆದುಕೊಂಡಿದೆ. ಗಾಯದ ಸಮಸ್ಯೆಯಿಂದ ದುಷ್ಮಂತ ಚಮೀರ ಮತ್ತು ನುವನ್ ತುಷಾರ ಶ್ರೀಲಂಕಾ ತಂಡದಿಂದ ಹೊರಗುಳಿದಿದ್ದಾರೆ.
ದುಷ್ಮಂತ ಚಮೀರಾ ಅವರನ್ನು ಹೊರಗಿಡುವುದನ್ನು ಮುಖ್ಯ ಆಯ್ಕೆಗಾರ ಉಪುಲ್ ತರಂಗ ಖಚಿತಪಡಿಸಿದ್ದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತುಷಾರ ಗಾಯಗೊಂಡಿರುವುದನ್ನು ದೃಢಪಡಿಸಿತು.
ಈ ಗಾಯಾಳು ವೇಗಿಗಳ ಜಾಗಕ್ಕೆ ಇಬ್ಬರು ಯುವ ಬೌಲರ್‌ಗಳಿಗೆ ಸುವರ್ಣಾಕಾಶ ಸಿಕ್ಕಿದೆ. ಇದರಲ್ಲಿ ಬಬ್ಬ ಬೌಲರ್ 2 ವರ್ಷಗಳ ನಂತರ ಶ್ರೀಲಂಕಾ ತಂಡಕ್ಕೆ ಮರಳಿದ್ದಾರೆ.
ದುಷ್ಮಂತ ಚಮೀರಾ ಬದಲಿಗೆ ಅಸಿತ್ ಫೆರ್ನಾಂಡೊಗೆ ಅವಕಾಶ ಸಿಕ್ಕಿದ್ದು, ತುಷಾರ ಬದಲಿಗೆ 23 ವರ್ಷದ ಬೌಲರ್ ದಿಲ್ಶಾನ್ ಮಧುಶಂಕ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಯುವ ವೇಗಿಗಳಿಗೆ ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿ ಅಗ್ನಿ ಪರೀಕ್ಷೆಯಾಗಿದೆ.
ಯುವ ಬೌಲರ್‌ಗಳ ಪ್ರದರ್ಶನ
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಸಿತ್ ಫೆರ್ನಾಂಡೊ ಹೆಚ್ಚಿನ ಅನುಭವವನ್ನು ಹೊಂದಿಲ್ಲ. ಇದುವರೆಗೆ ಶ್ರೀಲಂಕಾ ಪರ ಕೇವಲ 3 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಫರ್ನಾಂಡೊ ಅವರ ಹೆಸರಿನಲ್ಲಿ 2 ವಿಕೆಟ್‌ಗಳಿವೆ.
2022 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ 20 ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ಪಾದಾರ್ಪಣೆ ಮಾಡಿದರು. ಅಸಿತ್ ಫೆರ್ನಾಂಡೊ ಕೊನೆಯ ಬಾರಿಗೆ ಅದೇ ಸರಣಿಯನ್ನು ಆಡಿದ್ದರು. ಈಗ ಫರ್ನಾಂಡೋ ನಂಬರ್-1 ತಂಡ ವಿರುದ್ಧ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕೂತಹಲ ಮೂಡಿಸಿದೆ.
ಇನ್ನು ದಿಲ್ಶಾನ್ ಮಧುಶಂಕ ಅವರ ಅಂಕಿ-ಅಂಶಗಳನ್ನು ನೋಡುವುದರೇ, ಈವರೆಗೆ 14 ಟಿ20 ಪಂದ್ಯಗಳನ್ನಾಡಿದ್ದು, ಕೇವಲ 14 ವಿಕೆಟ್ ಪಡೆದಿದ್ದಾರೆ. ದಿಲ್ಶಾನ್ ಮಧುಶಂಕ ತಮ್ಮ ಕೊನೆಯ ಪಂದ್ಯವನ್ನು ಮಾರ್ಚ್‌ನಲ್ಲಿ ಆಡಿದ್ದರು. ಇವರ ಮೇಲೂ ಶ್ರೀಲಂಕಾ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
ಭಾರತ ವಿರುದ್ಧ ಟಿ20 ಸರಣಿಗೆ ಶ್ರೀಲಂಕಾ ತಂಡ
ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಅವಿಷ್ಕ ಫೆರ್ನಾಂಡೋ, ವನಿಂದು ಹಸರಂಗ, ಕುಸಲ್ ಮೆಂಡಿಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ದುನಿತ್ ವೆಲ್ಲಗೆ, ದಸುನ್ ಶಾನಕ, ಮಹೇಶ್ ತಿಕ್ಷಣ, ಚಮಿಂದು ವಿಕ್ರಮಸಿಂಘೆ, ಮತಿಶಾ ಪತಿರಾನ, ಮತಿಶ ಪತಿರಾನ, ಅಸಿತ್ ಫೆರ್ನಾಂಡೊ, ದಿಲ್ಶಾನ್ ಮಧುಶಂಕ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications