IND vs SL: ಏಕದಿನ ವಿಶ್ವಕಪ್‌ನಲ್ಲಿ ಈ ದಾಖಲೆ ನಿರ್ಮಿಸಿದ 2ನೇ ತಂಡ ಎನಿಸಿದ ಟೀಮ್ ಇಂಡಿಯಾ
ಗುರುವಾರ, ಅಕ್ಟೋಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು 302 ರನ್‌ಗಳ ದಾಖಲೆ ಅಂತರದಿಂದ ಸೋಲಿಸಿತು.
ಈ ಮೂಲಕ ರನ್‌ಗಳ ಅಂತರದಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿತು. ಅಲ್ಲದೆ, ವಿಶ್ವಕಪ್ ಇತಿಹಾಸದಲ್ಲಿ ಒಟ್ಟಾರೆ ಎರಡನೇ ಅತಿ ದೊಡ್ಡ ಗೆಲುವಾಯಿತು.

ಇದೇ 2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಆಸ್ಟ್ರೇಲಿಯಾ ತಂಡ 309 ರನ್‌ಗಳ ಗೆಲುವು ಮಾತ್ರ ಅತಿ ದೊಡ್ಡ ಅಂತರದ ಗೆಲುವಾಗಿದೆ.
358 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವನ್ನು 19.4 ಓವರ್‌ಗಳಲ್ಲಿ ಕೇವಲ 55 ರನ್‌ಗಳಿಗೆ ಕಟ್ಟಿಹಾಕಿದ ನಂತರ, ಭಾರತ ತಂಡವು 2007ರಲ್ಲಿ ಬರ್ಮುಡಾ ವಿರುದ್ಧ 257 ರನ್‌ಗಳ ತನ್ನ ಹಿಂದಿನ ಅತಿದೊಡ್ಡ ಗೆಲುವನ್ನು ಹಿಂದಿಕ್ಕಿತು.
ಕುತೂಹಲಕಾರಿಯಾಗಿ, ಗುರುವಾರ ಶ್ರೀಲಂಕಾ ವಿರುದ್ಧದ ಗೆಲುವು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ನಾಲ್ಕನೇ ಅತಿ ದೊಡ್ಡ ಗೆಲುವು ಎನಿಸಿತು. ಈ ವರ್ಷದ ಜನವರಿಯಲ್ಲಿ ತಿರುವನಂತಪುರಂನಲ್ಲಿ ಇದೇ ಶ್ರೀಲಂಕಾ ವಿರುದ್ಧ ಭಾರತ 317 ರನ್‌ಗಳ ಗೆಲುವು ಸಾಧಿಸಿದ್ದು, ಅತಿ ದೊಡ್ಡ ಏಕದಿನ ಗೆಲುವಿನ ದಾಖಲೆಯಾಗಿದೆ.

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಅತಿದೊಡ್ಡ ಗೆಲುವು
2023ರಲ್ಲಿ ಶ್ರೀಲಂಕಾ ತಂಡವನ್ನು 302 ರನ್‌ಗಳಿಂದ ಸೋಲಿಸಿತು - ಮುಂಬೈ
2007ರಲ್ಲಿ ಬರ್ಮುಡಾ ತಂಡವನ್ನು 257 ರನ್‌ಗಳಿಂದ ಸೋಲಿಸಿತ್ತು - ಪೋರ್ಟ್ ಆಫ್ ಸ್ಪೇನ್
2003ರಲ್ಲಿ ಶ್ರೀಲಂಕಾ ತಂಡವನ್ನು 183 ರನ್‌ಗಳಿಂದ ಸೋಲಿಸಿತ್ತು - ಜೋಹಾನ್ಸ್‌ಬರ್ಗ್
2003ರಲ್ಲಿ ನಮೀಬಿಯಾವನ್ನು 181 ರನ್‌ಗಳಿಂದ ಸೋಲಿಸಿತ್ತು - ಪೀಟರ್‌ಮರಿಟ್ಜ್‌ಬರ್ಗ್
1999ರಲ್ಲಿ ಶ್ರೀಲಂಕಾ ತಂಡವನ್ನು 157 ರನ್‌ಗಳಿಂದ ಸೋಲಿಸಿತ್ತು - ಟೌಂಟನ್
ಒಟ್ಟಾರೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಅಂತರದ ಗೆಲುವುಗಳು
2023ರಲ್ಲಿ ಆಸ್ಟ್ರೇಲಿಯಾ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು 309 ರನ್‌ಗಳಿಂದ ಸೋಲಿಸಿತು - ನವದೆಹಲಿ
2023ರಲ್ಲಿ ಭಾರತ ತಂಡವು ಶ್ರೀಲಂಕಾ ತಂಡವನ್ನು 302 ರನ್‌ಗಳಿಂದ ಸೋಲಿಸಿತು - ಮುಂಬೈ
2015ರಲ್ಲಿ ಆಸ್ಟ್ರೇಲಿಯ ತಂಡ ಅಫ್ಘಾನಿಸ್ತಾನ ತಂಡವನ್ನು 275 ರನ್‌ಗಳಿಂದ ಸೋಲಿಸಿತ್ತು - ಪರ್ತ್
2007ರಲ್ಲಿ ಭಾರತ ತಂಡವು ಬರ್ಮುಡಾ ತಂಡವನ್ನು 257 ರನ್‌ಗಳಿಂದ ಸೋಲಿಸಿತು - ಪೋರ್ಟ್ ಆಫ್ ಸ್ಪೇನ್
2015ರಲ್ಲಿ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ತಂಡವನ್ನು 257 ರನ್‌ಗಳಿಂದ ಸೋಲಿಸಿತು - ಸಿಡ್ನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications