ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಟಿ20 ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ವಿರಾಮ?; ಇದೇ ಕಾರಣ!

IND vs SL: Virat Kohli To Take Break From T20 Cricket; This Is The Reason

ಭಾರತ ಕ್ರಿಕೆಟ್‌ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಗಮನಹರಿಸಲು ಟಿ20 ಪಂದ್ಯಗಳಿಂದ ತಾತ್ಕಾಲಿಕವಾಗಿ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.

ವಿರಾಟ್ ಕೊಹ್ಲಿ ಅವರು ಟಿ20 ಪಂದ್ಯಗಳಿಗೆ ಮರಳುವ ಯೋಜನೆಯನ್ನು ಬಿಸಿಸಿಐಗೆ ಇನ್ನೂ ತಿಳಿಸಿಲ್ಲ. ಆದರೆ ಐಪಿಎಲ್ 2023ರ ಮೊದಲು ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡುವುದಿಲ್ಲ. ಬಾಂಗ್ಲಾದೇಶ ಪ್ರವಾಸದ ನಂತರ ವಿರಾಟ್ ಕೊಹ್ಲಿ ಏಕದಿನ ಸರಣಿಗೆ ಹಿಂದಿರುಗುವ ಮೊದಲು ಸ್ವಲ್ಪ ವಿರಾಮ ತೆಗೆದುಕೊಳ್ಳಲಿದ್ದಾರೆ.

AUS vs SA: 100ನೇ ಟೆಸ್ಟ್‌ನಲ್ಲಿ ಶತಕದೊಂದಿಗೆ ಸಚಿನ್ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ವಾರ್ನರ್AUS vs SA: 100ನೇ ಟೆಸ್ಟ್‌ನಲ್ಲಿ ಶತಕದೊಂದಿಗೆ ಸಚಿನ್ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ವಾರ್ನರ್

ವಿರಾಟ್ ಕೊಹ್ಲಿ ಜೊತೆಗೆ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕೂಡ ಟಿ20 ಸರಣಿಗೆ ಗೈರಾಗಲಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಲಿದ್ದಾರೆ. ಹೆಬ್ಬೆರಳು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ರೋಹಿತ್ ಶರ್ಮಾ, ಜನವರಿ 10ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ಸಿದ್ಧರಾಗಬೇಕಿದೆ.

ಟಿ20 ಪಂದ್ಯಗಳಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ

ಟಿ20 ಪಂದ್ಯಗಳಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ

"ಹೌದು, ವಿರಾಟ್ ಕೊಹ್ಲಿ ಅವರು ಟಿ20 ಸರಣಿಗೆ ಅಲಭ್ಯರಾಗಲಿದ್ದೇನೆ ಎಂದು ತಿಳಿಸಿದ್ದಾರೆ. ಅವರು ಏಕದಿನ ಸರಣಿಗೆ ಮರಳಲಿದ್ದಾರೆ. ಅವರು ಟಿ20 ಪಂದ್ಯಗಳಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ ಸಹಜವಾಗಿ ಅವರು ಪ್ರಮುಖ ಸರಣಿಗಳ ಯೋಜನೆಗಳಲ್ಲಿ ಇರುತ್ತಾರೆ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಇನ್ನು ರೋಹಿತ್ ಶರ್ಮಾಗೆ ಸಂಬಂಧಿಸಿದಂತೆ, ಇದು ಕಠಿಣವಾಗಿ ಕಾಣುತ್ತದೆ. ಅವರು ಫಿಟ್ ಆಗಿದ್ದಾರೆಯೇ ಎಂಬುದನ್ನು ಸರಿಯಾದ ಸಮಯದಲ್ಲಿ ನಿರ್ಧಾರ ಮಾಡಲಾಗುವುದು. ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ, ಆದರೆ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ," ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್‌ಗೆ ಹೇಳಿದ್ದಾರೆ.

ಐಪಿಎಲ್‌ಗೂ ಮುನ್ನ ಭಾರತ ತಂಡ 6 ಟಿ20 ಪಂದ್ಯ

ಐಪಿಎಲ್‌ಗೂ ಮುನ್ನ ಭಾರತ ತಂಡ 6 ಟಿ20 ಪಂದ್ಯ

ವಿರಾಟ್ ಕೊಹ್ಲಿ ಅನುಪಸ್ಥಿತಿಯು 2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ರಚಿಸಲು ಆಯ್ಕೆದಾರರಿಗೆ ಸರಳವಾಗಿಸುತ್ತದೆ. ಭಾರತ ತಂಡವು ಟಿ20 ಪಂದ್ಯಗಳಲ್ಲಿ ಯಶಸ್ವಿಯಾಗಲು ಬಯಸುತ್ತಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ಹಿರಿಯ ಆಟಗಾರರನ್ನು ವಜಾ ಮಾಡುವ ನಿರೀಕ್ಷೆಯಿದೆ. 2024ರ ವಿಶ್ವಕಪ್ ಆಯ್ಕೆ ಸಮಿತಿಯು ಕಿರಿಯ ಆಟಗಾರರೊಂದಿಗೆ ಪ್ರಯೋಗ ನಡೆಸಲಿದೆ.

ಗರಿಷ್ಠ ಮಟ್ಟದ ದೈಹಿಕ ಸ್ಥಿತಿಯಲ್ಲಿದ್ದರೂ 34 ವರ್ಷದ ವಿರಾಟ್ ಕೊಹ್ಲಿ ತಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಬಯಸುತ್ತಾರೆ. ಅವರು ಇನ್ನೂ 2024ರ ವಿಶ್ವಕಪ್‌ನಲ್ಲಿ ಆಡುವ ಆಕಾಂಕ್ಷೆಯನ್ನು ಹೊಂದಿದ್ದಾರೆ. ಆದರೆ ಅವರು ದೀರ್ಘ ಸ್ವರೂಪಗಳ ಆಟದ ಮೇಲೆ ಹೆಚ್ಚು ಗಮನ ಹರಿಸುತ್ತಾರೆ. ಇದೇ ವೇಳೆ ಐಪಿಎಲ್‌ನಲ್ಲಿ ಟಿ20 ಆಡುವುದನ್ನು ಮುಂದುವರಿಸಲಿದ್ದಾರೆ. ಐಪಿಎಲ್‌ಗೂ ಮುನ್ನ ಭಾರತ ತಂಡ 6 ಟಿ20 ಪಂದ್ಯಗಳನ್ನು ಆಡಲಿದೆ.

ರೋಹಿತ್ ಶೇ.100ರಷ್ಟು ಗುಣಮುಖವಾಗಿದ್ದರೆ ಮಾತ್ರ ವಾಪಸ್

ರೋಹಿತ್ ಶೇ.100ರಷ್ಟು ಗುಣಮುಖವಾಗಿದ್ದರೆ ಮಾತ್ರ ವಾಪಸ್

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಹೆಬ್ಬೆರಳಿನ ಗಾಯವು ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಫೆಬ್ರವರಿಯಲ್ಲಿ ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಕಾರಣ, ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಬಯಸಿಲ್ಲ. ರೋಹಿತ್ ಶೇ.100ರಷ್ಟು ಗುಣಮುಖವಾಗಿದ್ದರೆ ಮಾತ್ರ ಹಿಂತಿರುಗಲಿದ್ದಾನೆ ಎಂದು ತಿಳಿಸಿದೆ.

Story first published: Tuesday, December 27, 2022, 17:53 [IST]
Other articles published on Dec 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X