
ಡಿಸೆಂಬರ್ 26 ರಿಂದ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಮೊದಲ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಕಳೆದ ವಾರ ಭಾರತ ತಂಡ ದಕ್ಷಿಣ ಆಫ್ರಿಕಾ ತಲುಪಿದ್ದು, ಬಿರುಸಿನ ಅಭ್ಯಾಸ ನಡೆಸುತ್ತಿದೆ.
ತಂಡದ ನೂತನ ಉಪನಾಯಕನಾಗಿ ನೇಮಕಗೊಂಡಿರುವ ಹಾಗೂ ಗಾಯದ ಸಮಸ್ಯೆಯಿಂದ ಕೈಬಿಡಲಾದ ರೋಹಿತ್ ಶರ್ಮಾ ಸೇರಿದಂತೆ ಕೆಲವು ಪ್ರಮುಖ ಆಟಗಾರರನ್ನು ತಂಡವು ಮಿಸ್ ಮಾಡಿಕೊಳ್ಳಲಿದೆ. ಆದ್ರೆ ಹಿಟ್‌ಮ್ಯಾನ್ ಅನುಪಸ್ಥಿತಿಯ್ಲಿ ಮುಂಬರುವ ಸರಣಿಗೆ ವಿರಾಟ್ ಕೊಹ್ಲಿ ಜೊತೆಗೆ ಉಪನಾಯಕನಾಗಿ ಕೆ.ಎಲ್ ರಾಹುಲ್ ಅವರನ್ನು ಭಾರತೀಯ ಆಯ್ಕೆಗಾರರು ಹೆಸರಿಸಿದ್ದಾರೆ. ಇತ್ತೀಚೆಗೆ, ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕೆಲವು ನಿರ್ಣಾಯಕ ರನ್‌ಗಳನ್ನು ಗಳಿಸಿದ್ದಾರೆ. ರಾಹುಲ್ ಅವರನ್ನು ಸೀಮಿತ ಓವರ್‌ಗಳ ತಂಡದ ಉಪನಾಯಕರನ್ನಾಗಿಯೂ ಮಾಡಲಾಗಿದೆ.
ರಾಹುಲ್ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಆಯ್ಕೆಗಾರರು ಉತ್ತಮ ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ರಾಷ್ಟ್ರೀಯ ಆಯ್ಕೆಗಾರ ಮತ್ತು ವಿಕೆಟ್ ಕೀಪರ್ ಸಾಬಾ ಕರೀಂ ಅಭಿಪ್ರಾಯಪಟ್ಟಿದ್ದಾರೆ.
ಕೆ.ಎಲ್ ರಾಹುಲ್ ಈ ಸ್ಥಾನಕ್ಕೆ ಬಡ್ತಿ ಪಡೆದಿರುವುದು ಭಾರತೀಯ ಕ್ರಿಕೆಟ್‌ನ ಭವಿಷ್ಯಕ್ಕಾಗಿ ಪರಿಪೂರ್ಣವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇಂಡಿಯಾ ನ್ಯೂಸ್ ಜೊತೆಗಿನ ಸಂವಾದದ ವೇಳೆ ಕರೀಂ, "ನನ್ನ ಪ್ರಕಾರ, ಇದು ಸರಿಯಾದ ಆಯ್ಕೆ ಮತ್ತು ಸಮಯ ಸರಿಯಾಗಿದೆ. ಏಕೆಂದರೆ ಆಯ್ಕೆದಾರರು ತಂಡದಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತಿದೆ ಎಂಬುದರ ಕುರಿತು ಅನೇಕ ಬಾರಿ ತಂಡದ ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತನಾಡುತ್ತಾರೆ. ಅಲ್ಲಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತಿದೆ, ಭವಿಷ್ಯದಲ್ಲಿ ಯಾರು ಸಮರ್ಥ ನಾಯಕ ಎಂದು ಸಾಬೀತುಪಡಿಸಬಹುದು. ನಂತರ ಮಾತ್ರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕರೀಂ ಇಂಡಿಯಾ ನ್ಯೂಸ್‌ಗೆ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಭಾರತದ ಟೆಸ್ಟ್ ನಾಯಕ ಕೊಹ್ಲಿ ಕೂಡ ಸಂತೋಷಪಡುತ್ತಾರೆ ಎಂದು ಕರೀಂ ಹೇಳಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕತ್ವವನ್ನು ಒಂದೆರಡು ಸೀಸನ್‌ಗಳಲ್ಲಿ ಮುನ್ನಡೆಸಿರುವ ರಾಹುಲ್ ನಾಯಕತ್ವದ ಪಾತ್ರದಲ್ಲಿ ಅನುಭವವನ್ನು ಹೊಂದಿದ್ದಾರೆ. ಫೆಬ್ರವರಿ 2020 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ರಾಹುಲ್ ನಾಯಕತ್ವ ವಹಿಸಿದ್ದರು.
"ಆಯ್ಕೆಗಾರರು ತಮ್ಮ ಸಮಯವನ್ನು ತೆಗೆದುಕೊಂಡಿರುವುದು ಒಳ್ಳೆಯದು ಮತ್ತು ಮುಂಬರುವ ಸರಣಿಯಲ್ಲಿ ಕೆಎಲ್ ರಾಹುಲ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗುವುದು ಎಂದು ಘೋಷಿಸಿದರು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಕೂಡ ಅದೇ ರೀತಿಯಲ್ಲಿ ಭಾವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ'' ಎಂದು ಕರೀಂ ಹೇಳಿದ್ದಾರೆ.
ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾರರಲ್ಲಿ ರಾಹುಲ್ ಅವರು ಸದ್ಯದಲ್ಲಿಯೇ ಸಂಭಾವ್ಯ ನಾಯಕರಾಗಿದ್ದಾರೆ ಎಂದು ಹೇಳಿದರು. ರಾಹುಲ್ ಅವರು ಭಾರತೀಯ ಟೆಸ್ಟ್ ತಂಡದ ಮುಂದಿನ ನಾಯಕರಾಗಬಹುದು ಎಂದು ಲರೀಂ ಅಂದಾಜಿಸಿದ್ದಾರೆ.
"ಕೆಎಲ್ ರಾಹುಲ್ ಭವಿಷ್ಯದಲ್ಲಿ ನಾಯಕನಾಗಬಲ್ಲ ಆಟಗಾರ. ಅವರು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಉತ್ತಮ ನಾಯಕತ್ವ ವಹಿಸಿದ್ದಾರೆ, ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಕೆಎಲ್ ರಾಹುಲ್ ಪ್ರಸ್ತುತ ಬಹು-ಫಾರ್ಮ್ಯಾಟ್ ಆಟಗಾರರಾಗಿದ್ದಾರೆ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್
ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
ಸ್ಟ್ಯಾಂಡ್ ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜಾನ್ ನಾಗ್ವಾಸ್ವಾಲ್ಲಾ