Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC ಮಹಿಳೆಯರ ವಿಶ್ವಕಪ್ 2022: ಭರ್ಜರಿ ಶತಕ ದಾಖಲಿಸಿದ ಸ್ಮೃತಿ ಮಂದಾನ, ಹರ್ಮನ್ ಪ್ರೀತ್ ಕೌರ್ LIVE

Smriti mandana

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸ್ಮೃತಿ ಮಂದಾನ ಭರ್ಜರಿ ಶತಕ ದಾಖಲಿಸಿದ್ದಾರೆ. ವಿಂಡೀಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ ಆಯ್ದುಕೊಂಡ ಮಿಥಾಲಿ ರಾಜ್ ಟೀಂ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತಾದ್ರೂ, ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಶತಕ ದಾಖಲಿಸಿ ಅಬ್ಬರಿಸಿದ್ದಾರೆ.

ಇದ್ರ ನಡುವೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಎಡಗೈ ಬ್ಯಾಟರ್ ಸ್ಮೃತಿ ಮಂದಾನ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಐದನೇ ಶತಕ ದಾಖಲಿಸುವ ಮೂಲಕ ಮಿಂಚಿದ್ದಾರೆ. 119 ಎಸೆತಗಳಲ್ಲಿ 123 ರನ್‌ಗಳಿಸಿ ಔಟಾದ ಮಂದಾನ ಇನ್ನಿಂಗ್ಸ್‌ನಲ್ಲಿ 13 ಸೊಗಸಾದ ಬೌಂಡರಿ ಜೊತೆಗೆ 2 ಭರ್ಜರಿ ಸಿಕ್ಸರ್‌ಗಳಿದ್ದವು.

ಸ್ಮೃತಿ ಮಂದಾನ ಒಂದು ಕಡೆ ಅಬ್ಬರದ ಶತಕ ಸಿಡಿಸಿದ್ರೆ, ಹರ್ಮನ್‌ಪ್ರೀತ್ ಕೌರ್ ಕೂಡ ಉತ್ತಮ ಸಾಥ್ ನೀಡಿದ್ರು. ಇದಕ್ಕೂ ಮೊದಲು ಸ್ಮೃತಿ ಮಂದಾನಗೆ ಉತ್ತಮ ಸಾಥ್ ನೀಡಿದ ಹರ್ಮನ್‌ಪ್ರೀತ್ ಕೌರ್ ಕೂಡ ಅಬ್ಬರದ ಆಟವಾಡುವ ಮೂಲಕ ಮಿಂಚಿದ್ದಾರೆ. 100 ಎಸೆತಗಳಲ್ಲಿ 100 ರನ್ ದಾಖಲಿಸಿದ ಹರ್ಮನ್ ಪ್ರೀತ್ ಕೌರ್ ಬೊಂಬಾಟ್ ಆಟವಾಡಿದ್ರು. ಅಂತಿಮವಾಗಿ 107 ಎಸೆತಗಳಲ್ಲಿ 109 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದ್ರು.

1
9909-nonopta-49809

ವಿಶ್ವಕಪ್‌ನಲ್ಲಿ ಮೂರನೇ ಏಕದಿನ ಶತಕ ದಾಖಲಿಸಿದ ಹರ್ಮನ್ ಪ್ರೀತ್ ಕೌರ್‌ ಮಿಥಾಲಿ ರಾಜ್ ಹೆಸರಲ್ಲಿದ್ದ (2) ಶತಕದ ದಾಖಲೆಯನ್ನ ಹಿಂದಿಕ್ಕಿದ್ದು, ಭಾರತ ಪರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

ಆದ್ರೆ ಇದಕ್ಕೂ ಮೊದಲು ಯಾಸ್ತಿಕ ಭಾಟಿಯಾ (31), ಮಿಥಾಲಿ ರಾಜ್ (5), ದೀಪ್ತಿ ಶರ್ಮಾ (15) ರನ್ ದಾಖಲಿಸಿ ಬೇಗನೆ ವಿಕೆಟ್ ಒಪ್ಪಿಸಿದ್ರು. ರಿಚಾ ಘೋಷ್ ಕೇವಲ (5) ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು.

ಅಂತಿಮವಾಗಿ ಭಾರತ ವನಿತೆಯರು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಕಲೆಹಾಕಿದ್ದು, ವೆಸ್ಟ್ ಇಂಡೀಸ್‌ಗೆ 318 ರನ್‌ಗಳ ಗೆಲುವಿನ ಗುರಿ ನೀಡಿದೆ.

Story first published: Saturday, March 12, 2022, 10:43 [IST]
Other articles published on Mar 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+