IND vs WI 2ನೇ ಟಿ20: ಈ ಮೈಲಿಗಲ್ಲುಗಳತ್ತ ರೋಹಿತ್, ಶ್ರೇಯಸ್ ಐಯ್ಯರ್ ಮತ್ತು ಪಾಂಡ್ಯಾ ಕಣ್ಣು

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ ಮೊದಲಿಗೆ ನಡೆದ 3 ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಶಿಖರ್ ಧವನ್ ನಾಯಕತ್ವದಡಿಯಲ್ಲಿ ಜಯ ಸಾಧಿಸುವುದರ ಮೂಲಕ ವೈಟ್ ವಾಶ್ ಸಾಧನೆ ಮಾಡಿತ್ತು. ಇದಾದ ಬೆನ್ನಲ್ಲೇ ಇದೀಗ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಿದ್ದು, ಪ್ರಥಮ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿಯ ಕಾರಣದಿಂದಾಗಿ ಅಲಭ್ಯರಾಗಿದ್ದ ನಾಯಕ ರೋಹಿತ್ ಶರ್ಮಾ ಇದೀಗ ಟಿ ಟ್ವೆಂಟಿ ಸರಣಿಗೆ ಮರಳಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜುಲೈ 29ರಂದು ಟರೌಬಾದ ಬ್ರಿಯಾನ್ ಲಾರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿ ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ 191 ರನ್‌ಗಳ ಗುರಿಯನ್ನು ನೀಡಿತ್ತು.
ಅತ್ತ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಮೂಲಕ ಟೀಮ್ ಇಂಡಿಯಾ 68 ರನ್‌ಗಳ ಭರ್ಜರಿ ಜಯ ಸಾಧಿಸಿದ್ದು, ಇದೀಗ ದ್ವಿತೀಯ ಟಿ ಟ್ವೆಂಟಿ ಪಂದ್ಯವನ್ನು ಕೈವಶ ಮಾಡಿಕೊಳ್ಳುವತ್ತ ಕಣ್ಣಿಟ್ಟಿದೆ. ಇತ್ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯ ಇಂದು ( ಆಗಸ್ಟ್ 1 ) ಸೇಂಟ್ ಕೇಟ್ಸ್ ವಾರ್ನರ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲ ಆಟಗಾರರು ವಿವಿಧ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳಿವೆ. ಈ ಮೈಲಿಗಲ್ಲುಗಳ ಕುರಿತಾದ ಪಟ್ಟಿ ಕೆಳಕಂಡಂತಿದೆ.

ಈ ಮೈಲಿಗಲ್ಲುಗಳ ಮೇಲೆ ಭಾರತೀಯ ಆಟಗಾರರ ಕಣ್ಣು
• ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಸ್ವರೂಪದಲ್ಲಿ 3443 ರನ್ ಕಲೆಹಾಕಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 57 ರನ್ ಬಾರಿಸಿದರೆ 3500 ರನ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 49 ವಿಕೆಟ್‍ಗಳನ್ನು ಪಡೆದಿರುವ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ 1 ವಿಕೆಟ್ ಪಡೆದರೆ 50 ವಿಕೆಟ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಎಲ್ಲಾ ಮಾದರಿಯ ಕ್ರಿಕೆಟ್ ಸೇರಿ 15956 ರನ್ ಕಲೆಹಾಕಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 44 ರನ್ ಬಾರಿಸಿದರೆ 16000 ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 48 ವಿಕೆಟ್ ಪಡೆದಿರುವ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ 2 ವಿಕೆಟ್ ಪಡೆದರೆ 50 ವಿಕೆಟ್ ಪಡೆದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ 931 ರನ್ ಕಲೆಹಾಕಿರುವ ಶ್ರೇಯಸ್ ಅಯ್ಯರ್ 1000 ಮೈಲಿಗಲ್ಲನ್ನು ಮುಟ್ಟಲು ಈ ಪಂದ್ಯದಲ್ಲಿ 69 ರನ್ ಬಾರಿಸಬೇಕಿದೆ.
• ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 2461 ರನ್ ಕಲೆಹಾಕಿರುವ ಶ್ರೇಯಸ್ ಅಯ್ಯರ್ ಈ ಪಂದ್ಯದಲ್ಲಿ 39 ರನ್ ಬಾರಿಸಿದರೆ 2500 ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 95 ಬೌಂಡರಿಗಳನ್ನು ಬಾರಿಸಿರುವ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ 5 ಬೌಂಡರಿ ಬಾರಿಸಿದರೆ 100 ಬೌಂಡರಿ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ವೆಸ್ಟ್ ಇಂಡೀಸ್ ಆಟಗಾರರು ಮುಟ್ಟಬಹುದಾದ ಮೈಲಿಗಲ್ಲುಗಳು
• ಅಂತಾರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 95 ಬೌಂಡರಿ ಬಾರಿಸಿರುವ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಈ ಪಂದ್ಯದಲ್ಲಿ 5 ಬೌಂಡರಿ ಬಾರಿಸಿದರೆ 100 ಬೌಂಡರಿಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಎಲ್ಲಾ ಮಾದರಿಯ ಕ್ರಿಕೆಟ್ ಸೇರಿ 2965 ರನ್ ಕಲೆಹಾಕಿರುವ ಶಿಮ್ರಾನ್ ಹೆಟ್ಮಾಯೆರ್ ಈ ಪಂದ್ಯದಲ್ಲಿ 35 ರನ್ ಕಲೆಹಾಕಿದರೆ 3000 ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಅಂತಾರಾಷ್ಟ್ರೀಯ ಟಿ ಟ್ವೆಂಟಿ ಸ್ವರೂಪದಲ್ಲಿ 476 ರನ್ ಬಾರಿಸಿರುವ ಬ್ರ್ಯಾಂಡನ್ ಕಿಂಗ್ ಈ ಪಂದ್ಯದಲ್ಲಿ 24 ರನ್ ಬಾರಿಸಿದರೆ 500 ರನ್‌ಗಳ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 49 ಕ್ಯಾಚ್ ಪಡೆದಿರುವ ನಿಕೋಲಸ್ ಪೂರನ್ ಈ ಪಂದ್ಯದಲ್ಲಿ 1 ಕ್ಯಾಚ್ ಪಡೆದರೆ 50 ಕ್ಯಾಚ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಶಮರಾ ಬ್ರೂಕ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟೈಮರ್, ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಓಡಿಯನ್ ಸ್ಮಿತ್, ಒಬೆಡ್ ಮೆಕಾಯ್, ಕೀಮೊ ಪೌಲ್ ಅಲ್ಜಾರಿ ಜೋಸೆಫ್, ಅಕೇಲ್ ಹೊಸೈನ್, ಒಬೆದ್ ಮೆಕಾಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications