Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs WI 2nd Test: ಭಾರತ vs ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ 11ರ ಬಳಗ; ಉಭಯ ತಂಡಗಳಲ್ಲಿ ಬದಲಾವಣೆ?

ಗುರುವಾರ, ಜುಲೈ 20ರಂದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

2-0 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳುವ ಗುರಿಯೊಂದಿಗೆ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಯಲಿದೆ. ಡೊಮಿನಿಕಾದ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಮತ್ತು 142 ರನ್‌ಗಳಿಂದ ಸೋಲಿಸಿ 1-0 ಮುನ್ನಡೆ ಸಾಧಿಸಿತು.

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ವೆಸ್ಟ್ ಇಂಡೀಸ್ ತಂಡಕ್ಕೆ ಯೋಚಿಸಬೇಕಾದದ್ದು ಬಹಳಷ್ಟು ಇದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟಾರೆ 280 ರನ್ ಗಳಿಸಿದರು.

IND vs WI 2nd Test

ಆ ಪಂದ್ಯದಲ್ಲಿ ವಿಂಡೀಸ್ ಬೌಲರ್‌ಗಳು ಕೇವಲ ಐದು ವಿಕೆಟ್‌ಗಳನ್ನು ಮಾತ್ರ ಕೀಳಲು ಸಾಧ್ಯವಾಯಿತು. ಎರಡನೇ ಟೆಸ್ಟ್‌ ಪಂದ್ಯದ ಆರಂಭದಲ್ಲಿ ವೆಸ್ಟ್ ಇಂಡೀಸ್ ತೀವ್ರ ಒತ್ತಡದಲ್ಲಿರಲಿದೆ.

ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ ಪಂದ್ಯಕ್ಕೆ ಮುಂಚಿತವಾಗಿ ತಮ್ಮ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಲಿದೆ. ಆಫ್-ಸ್ಪಿನ್ನರ್ ಕೆವಿನ್ ಸಿಂಕ್ಲೇರ್ ಅವರನ್ನು ತಂಡಕ್ಕೆ ಕರೆತಂದಿದೆ. ಕೆವಿನ್ ಸಿಂಕ್ಲೇರ್ ಅವರು ಮೊದಲ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ ಪ್ರಭಾವ ಬೀರಲು ಸಾಧ್ಯವಾಗದ ರೇಮನ್ ರೀಫರ್ ಅವರ ಬದಲಿಗೆ ಸ್ಥಾನ ಪಡೆದರು.

ಕೆವಿನ್ ಸಿಂಕ್ಲೇರ್ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಅವರ ಸ್ಪಿನ್ ಬೌಲಿಂಗ್ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವೆಸ್ಟ್ ಇಂಡೀಸ್‌ನಲ್ಲಿನ ಪಿಚ್‌ಗಳು ಈ ದಿನಗಳಲ್ಲಿ ನಿಧಾನವಾಗುತ್ತವೆ. ಅಲ್ಲಿನ ಟ್ರ್ಯಾಕ್‌ಗಳು ವೇಗದ ಬೌಲರ್‌ಗಳಿಗೆ ಪ್ರಯೋಜನವನ್ನು ನೀಡುವ ದಿನಗಳು ಮುಗಿದುಹೋಗಿವೆ.

ಆದರೂ, ವೆಸ್ಟ್ ಇಂಡೀಸ್‌ ತಂಡದ ಶಕ್ತಿ ಅವರ ಮುಂಚೂಣಿ ಬೌಲರ್‌ಗಳಾದ ಶಾನ್ನೋನ್ ಗೇಬ್ರಿಲ್, ಕೆಮರ್ ರೋಚ್ ಮತ್ತು ಅಲ್ಜಾರಿ ಜೋಸೆಫ್. ಇವರು ತಮ್ಮ ಸಾಮರ್ಥ್ಯಕ್ಕೆ ಸರಿಹೊಂದುವ ಪರಿಸ್ಥಿತಿಗಳನ್ನು ಸಿದ್ಧಪಡಿಸಲು ನೋಡಬೇಕಿದೆ.

ಇನ್ನು ಭಾರತ ತಂಡದ ಮಟ್ಟಿಗೆ ಹೇಳುವುದಾದರೆ, ನಾಯಕ ರೋಹಿತ್ ಶರ್ಮಾ ಅವರು 2ನೇ ಟೆಸ್ಟ್‌ ಪಂದ್ಯಕ್ಕೆ ಯಾವುದೇ ದೊಡ್ಡ ಬದಲಾವಣೆಯನ್ನು ಮಾಡಲು ಹೋಗುವುದಿಲ್ಲ ಎಂದು ಒಂದು ದಿನದ ಮೊದಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತ ತಂಡ ಮೊದಲ ಟೆಸ್ಟ್ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆದ್ದಿರಬಹುದು. ಆದರೆ ರೋಹಿತ್ ಶರ್ಮಾ ಪಡೆ ಪರಿಸ್ಥಿತಿಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಮತ್ತು ಸರಣಿಯನ್ನು ಇನ್ನೂ ಗೆದ್ದಿಲ್ಲವೆಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಜಯದೇವ್ ಉನಾದ್ಕಟ್ ಅಥವಾ ಶಾರ್ದೂಲ್ ಠಾಕೂರ್ ಬದಲಿಗೆ ಮುಖೇಶ್ ಕುಮಾರ್ ಅಥವಾ ನವದೀಪ್ ಸೈನಿ ಆಡಬಹುದು ಎಂದು ಭಾವಿಸಲಾಗುತ್ತದೆ. ಪ್ರಯೋಗ ಅಥವಾ ಅವರ ಪ್ರದರ್ಶನ ನೋಡಲಿಕ್ಕಾದರೂ ಬದಲಾವಣೆ ಮಾಡಬಹುದು. ನವದೀಪ್ ಸೈನಿ ಸುದೀರ್ಘ ಸಮಯದ ನಂತರ ಆಡಲಿದ್ದರೆ, ಮುಖೇಶ್ ಕುಮಾರ್ ಚೊಚ್ಚಲ ಟೆಸ್ಟ್ ಪಂದ್ಯ ಆಡಬಹುದು.

2ನೇ ಟೆಸ್ಟ್ ಪಂದ್ಯ: ಭಾರತ vs ವೆಸ್ಟ್ ಇಂಡೀಸ್ ಸಂಭಾವ್ಯು ಆಡುವ 11ರ ಬಳಗ

ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಾಗೆನರಿನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಅಲಿಕ್ ಅಥಾನಾಜೆ, ಜೆರ್ಮೈನ್ ಬ್ಲಾಕ್‌ವುಡ್, ಜೋಶುವಾ ಡಾ ಸಿಲ್ವಾ, ಜೇಸನ್ ಹೋಲ್ಡರ್, ಕೆವಿನ್ ಸಿಂಕ್ಲೇರ್/ ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನ್ನೋನ್ ಗೇಬ್ರಿಯಲ್.

ಭಾರತ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್/ ನವದೀಪ್ ಸೈನಿ, ಜಯದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್.

Story first published: Thursday, July 20, 2023, 17:16 [IST]
Other articles published on Jul 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+