ವೆಸ್ಟ್ ಇಂಡೀಸ್ ವಿರುದ್ಧ ಕೆಎಲ್ ರಾಹುಲ್ ಆಕರ್ಷಕ ಶತಕ
ಕಿಂಗ್ಸ್ಟನ್, ಜುಲೈ 31: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಟೀಂ ಇಂಡಿಯಾ ತನ್ನ ಪ್ರಾಬಲ್ಯ ಮುಂದುವರೆಸಿದೆ. ದಿನದ ಆರಂಭದಲ್ಲೇ ಕನ್ನಡಿಗ ಕೆಎಲ್ ರಾಹುಲ್ ಅವರು ಆಕರ್ಷಕ ಶತಕ ದಾಖಲಿಸಿದ್ದಾರೆ.
ಮುರಳಿ ವಿಜಯ್ ಬದಲಿಗೆ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ಅವರು ತನ್ನ ವೃತ್ತಿ ಬದುಕಿನ ಮೂರನೇ ಶತಕ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಶತಕ ಬಾರಿಸಿದರು.[ಕುಂಬ್ಳೆ, ಚಂದ್ರಶೇಖರ್ ಸಮಕ್ಕೆ ನಿಂತ ಅಶ್ವಿನ್]
24 ವರ್ಷ ವಯಸ್ಸಿನ ಲೋಕೇಶ್ ರಾಹುಲ್ ಅವರು 6 ಟೆಸ್ಟ್ ಪಂದ್ಯಗಳನ್ನಾಡಿದ್ದು 3 ಶತಕಗಳನ್ನು ಬಾರಿಸಿದ್ದಾರೆ. ಮೂರು ಶತಕಗಳು ಕೂಡಾ ವಿದೇಶಿ ನೆಲದಲ್ಲಿ ಗಳಿಸಿರುವುದು ವಿಶೇಷ.

ಚೊಚ್ಚಲ ಶತಕ ಆಸ್ಟ್ರೇಲಿಯಾ ವಿರುದ್ಧ (110) ಸಿಡ್ನಿಯಲ್ಲಿ ಬಂದರೆ, ಎರಡನೇಯದ್ದು ಶ್ರೀಲಂಕಾ(108) ವಿರುದ್ಧ ಕೊಲಂಬೋದಲ್ಲಿ ಬಂದಿತ್ತು. ಈಗ ವೆಸ್ಟ್ ಇಂಡೀಸ್ ವಿರುದ್ಧ ಸಬೀನಾ ಪಾರ್ಕಿನಲ್ಲಿ ನೂರರ ಗಡಿ ದಾಟಿದ್ದಾರೆ.[ಜಮೈಕಾ ಟೆಸ್ಟ್ : ವಿಜಯ್ ಬದಲಿಗೆ ರಾಹುಲ್ ಓಪನಿಂಗ್]
ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ರಾಹುಲ್ ಅವರು 182 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿ ಶತಕ ಗಳಿಸಿದಾಗ ಟೀಂ ಇಂಡಿಯಾ ಸ್ಕೋರ್ 171/1 ಅಗಿತ್ತು.

ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 52.3 ಓವರ್ ಗಳಲ್ಲಿ 196 ಸ್ಕೋರಿಗೆ ಆಲೌಟ್ ಆಗಿದೆ. ಆರ್ ಅಶ್ವಿನ್ ಅವರು 5/52 ಕಬಳಿಸಿದರು. ಮೊದಲ ದಿನದ ಅಂತ್ಯಕ್ಕೆ ಟೀಂ ಇಂಡಿಯಾ ಶಿಖರ್ ಧವನ್ ವಿಕೆಟ್ ಕಳೆದುಕೊಂಡು 126/1 ಸ್ಕೋರ್ ಮಾಡಿತ್ತು.
ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ ಆಂಟಿಗ್ವಾ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 92 ರನ್ ಗಳಿಂದ ಗೆದ್ದು 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: KL Rahul slams 3rd Test century
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications