For Quick Alerts
ALLOW NOTIFICATIONS  
For Daily Alerts
 

IND vs WI: 5ನೇ ದಿನ ಮಳೆಗಾಹುತಿ, 2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ; ವಿಂಡೀಸ್ ವಿರುದ್ಧ ಸರಣಿ ಗೆದ್ದ ಭಾರತ

ಸೋಮವಾರ, ಜುಲೈ 24ರಂದು ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದ ಡ್ರಾದಲ್ಲಿ ಕೊನೆಗೊಂಡಿತು. ಪಂದ್ಯದ 5ನೇ ದಿನದಂದು ಒಂದೇ ಒಂದು ಎಸೆತ ಕಾಣಲು ಸಾಧ್ಯವಾಗಲಿಲ್ಲ.

ದಿನವಿಡೀ ಸುರಿದ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಪಂದ್ಯದ ಅಂಪೈರ್‌ಗಳು ಅಂತಿಮವಾಗಿ ಎರಡನೇ ಟೆಸ್ಟ್ ಪಂದ್ಯವನ್ನು ಡ್ರಾ ಎಂದು ಘೋಷಿಸಿದರು.

IND vs WI: 2nd Test Match Ends in Draw Due To Rain In Day 5; India Won The Series Against West Indies

ಐದನೇ ದಿನ ದೀರ್ಘ ವಿಳಂಬದ ಬಳಿಕ, ಭಾರತೀಯ ಕಾಲಮಾನ ರಾತ್ರಿ 10:45ಕ್ಕೆ 67 ಓವರ್‌ಗಳ ಆಟ ನಡೆಯಲಿವೆ ಎಂದು ನಿರ್ಧರಿಸಲಾಯಿತು. ಆದರೆ, ಮೋಡ ಕವಿದ ವಾತಾವರಣದಿಂದಾಗಿ ಕವರ್‌ಗಳು ಮತ್ತೆ ಮೈದಾನಕ್ಕೆ ಹಿಂತಿರುಗಿದವು. ಹೀಗಾಗಿ ಭಾರತೀಯ ಕಾಲಮಾನ ಮಧ್ಯರಾತ್ರಿ 12:20ರ ಸುಮಾರಿಗೆ ಪಂದ್ಯವನ್ನು ಡ್ರಾ ಎಂದು ನಿರ್ಧರಿಸಿದರು.

ಎರಡನೇ ಟೆಸ್ಟ್‌ ಪಂದ್ಯದ 5ನೇ ದಿನನಂದು, ಕ್ರೇಗ್ ಬ್ರಾಥ್‌ವೈಟ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಗೆಲ್ಲಲು 289 ರನ್‌ಗಳ ಅವಶ್ಯಕತೆಯಿದ್ದರೆ, ಭಾರತಕ್ಕೆ ಎಂಟು ವಿಕೆಟ್‌ಗಳು ಬೇಕಾಗಿದ್ದವು.

IND vs WI: 2nd Test Match Ends in Draw Due To Rain In Day 5; India Won The Series Against West Indies

ಡ್ರಾ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ವಶಪಡಿಸಿಕೊಂಡಿತು. ಆದರೆ, ಇದೀಗ ಐಸಿಸಿ ಟೆಸ್ಟ್ ತಂಡದ ಶ್ರೇಯಾಂಕಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಐದನೇ ಆಶಸ್ ಟೆಸ್ಟ್ ಫಲಿತಾಂಶವನ್ನು ನೋಡಬೇಕಾಗಿದೆ.

ಭಾರತ ತಂಡ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ, ಜುಲೈ 27ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಪ್ರಾರಂಭವಾಗುವ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಬೇಕಿದೆ.

ಟ್ರಿನಿಡಾಡ್ ಟೆಸ್ಟ್‌ ಪಂದ್ಯದ ಮೊದಲ ನಾಲ್ಕು ದಿನಗಳು ಕೆಲವು ಅಸಾಧಾರಣ ಪ್ರದರ್ಶನಗಳಿಗೆ ಸಾಕ್ಷಿಯಾಯಿತು. ವಿಶೇಷವಾಗಿ ಭಾರತೀಯ ಆಟಗಾರರಾದ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಇಶಾನ್ ಕಿಶನ್ ಅವರ ಪ್ರದರ್ಶನಗಳು.

ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 121 ರನ್‌ಗಳ ಅಮೋಘ ಶತಕದೊಂದಿಗೆ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಅಲ್ಲದೆ ಐದು ವರ್ಷಗಳ ನಂತರ ಮೊದಲ ವಿದೇಶಿ ಶತಕ ಬಂದಿತು.

ಈ ಶತಮಾನದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅವರು ತಮ್ಮ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಆಟಕ್ಕೆ ಅವರ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಅವರ ವೃತ್ತಿಜೀವನದುದ್ದಕ್ಕೂ ಮಾಡಿದ ತ್ಯಾಗಗಳಿಗೆ ಸಾಕ್ಷಿಯಾಗಿದೆ.

ಇನ್ನು ವೇಗಿ ಮೊಹಮ್ಮದ್ ಸಿರಾಜ್ ಕೂಡ ಬೌಲಿಂಗ್‌ನಲ್ಲಿ ಮಿಂಚು ಹರಿಸಿದರು. 4ನೇ ದಿನದಂದು ವೆಸ್ಟ್ ಇಂಡೀಸ್‌ನ ಐದು ವಿಕೆಟ್ ಗಳಿಕೆ ಕಬಳಿಸಿದರು. ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್‌ನ ನಾಲ್ಕನೇ ದಿನದಂದು ಕೇವಲ 7.2 ಓವರ್‌ಗಳಲ್ಲಿ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ನಲ್ಲಿ ಭಾರತಕ್ಕೆ 183 ರನ್‌ಗಳ ಮುನ್ನಡೆ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ವೇಗದ ಅರ್ಧಶತಕ ಗಳಿಸಿದರೆ, ವಿರಾಟ್ ಕೊಹ್ಲಿ ಬದಲಿಗೆ 4ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಇಶಾನ್ ಕಿಶನ್ 34 ಎಸೆತಗಳಲ್ಲಿ 52 ರನ್‌ಗಳ ಚೊಚ್ಚಲ ಅರ್ಧಶತಕ ಬಾರಿಸಿದರು.

ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಪಂದ್ಯದಲ್ಲಿ ಭಾರತದ ಪ್ರಾಬಲ್ಯವನ್ನು ಹೆಚ್ಚಿಸಿತು. ವಿರಾಟ್ ಕೊಹ್ಲಿಯ ನಿಸ್ವಾರ್ಥ ನಾಯಕತ್ವದ ಶೈಲಿಯನ್ನು ಪ್ರದರ್ಶಿಸುವ ಮೂಲಕ ನಂ.4ರಲ್ಲಿ ಬ್ಯಾಟಿಂಗ್ ಮಾಡಲು ಮತ್ತು ಸಹಜ ಆಟವನ್ನು ಆಡಲು ತಮ್ಮನ್ನು ಕೊಹ್ಲಿ ಬೆಂಬಲಿಸಿದವರು ಎಂದು ಇಶಾನ್ ಕಿಶನ್ ಬಹಿರಂಗಪಡಿಸಿದರು.

ಪಂದ್ಯದುದ್ದಕ್ಕೂ ಪ್ರತಿಕೂಲ ಹವಾಮಾನ ನಿರಂತರ ಸವಾಲಾಗಿತ್ತು. ಕೊನೆಯ ಎರಡು ದಿನ ವರುಣ ಕಣ್ಣಾಮುಚ್ಚಾಲೆ ಆಡಿದ. ಮಳೆಯ ನಡುವೆಯೂ ಭಾರತ ತಂಡ ಸ್ಥಿರ ಆಟವನ್ನು ಪ್ರದರ್ಶಿಸಿದೆ.

Story first published: Tuesday, July 25, 2023, 8:39 [IST]
Other articles published on Jul 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+