IND vs WI: 3ನೇ ಟಿ20 ಕೂಡ ವಿಳಂಬ; ಪಂದ್ಯ ಎಷ್ಟು ಗಂಟೆಗೆ ಶುರು? ವಿಳಂಬಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನೂ ಗೆದ್ದು ಸದ್ಯ ಟಿ 20 ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಪ್ರಥಮ ಪಂದ್ಯದಲ್ಲಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ.
ಜುಲೈ 29ರಂದು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ 68 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ನಿನ್ನೆಯಷ್ಟೇ ವಾರ್ನರ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ 5 ವಿಕೆಟ್‍ಗಳ ಸೋಲನ್ನು ಕಂಡಿದೆ.
ಇನ್ನು ಈ ಪಂದ್ಯ ನಿಗದಿಯಾಗಿದ್ದ ಸಮಯಕ್ಕಿಂತ 3 ಗಂಟೆ ತಡವಾಗಿ ಆರಂಭಗೊಂಡಿತ್ತು. ಕ್ರೀಡಾಂಗಣಕ್ಕೆ ಆಟಗಾರರ ಲಗೇಜ್ ಬರುವುದು ವಿಳಂಬವಾದ ಕಾರಣದಿಂದಾಗಿ ಇಷ್ಟು ತಡವಾಗಿ ಪಂದ್ಯ ಆರಂಭಗೊಂಡಿತ್ತು. ಹೀಗೆ ದ್ವಿತೀಯ ಟಿ ಟ್ವೆಂಟಿ ಪಂದ್ಯ ವಿಳಂಬವಾದದ್ದು ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದ್ದರೆ, ಆಟಗಾರರನ್ನು ಒತ್ತಡಕ್ಕೆ ತಳ್ಳಿತ್ತು. ಇದೀಗ ಇಂದು ( ಆಗಸ್ಟ್ 2 ) ನಡೆಯಲಿರುವ ಉಭಯ ತಂಡಗಳ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯ ಕೂಡ ಇದೇ ರೀತಿ ವಿಳಂಬವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗಿದ್ದರೆ ಈ ಪಂದ್ಯ ಎಷ್ಟು ತಡವಾಗಿ ಆರಂಭಗೊಳ್ಳಲಿದೆ ಹಾಗೂ ವಿಳಂಬಕ್ಕೆ ಕಾರಣವೇನು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಒಂದೂವರೆ ಗಂಟೆ ವಿಳಂಬವಾಗಲಿದೆ ಪಂದ್ಯ
ಭಾರತೀಯ ಕಾಲಮಾನದ ಪ್ರಕಾರ ಇಂದು ರಾತ್ರಿ 8ಗಂಟೆಗೆ ಆರಂಭವಾಗಬೇಕಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರನೇ ಟಿ ಟ್ವೆಂಟಿ ಪಂದ್ಯ 9.30ಕ್ಕೆ ಆರಂಭಗೊಳ್ಳಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ವಿಳಂಬಕ್ಕೆ ಕಾರಣವಿದು
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದ ರೀತಿ ಮೂರನೇ ಟಿ ಟ್ವೆಂಟಿ ಪಂದ್ಯವೂ ಸಹ ವಿಳಂಬವಾಗುವುದಕ್ಕೆ ಕಾರಣ ಹಿಂದಿನ ಪಂದ್ಯ ತಡವಾಗಿ ಮುಕ್ತಾಯಗೊಂಡದ್ದು. ದ್ವಿತೀಯ ಟಿ ಟ್ವೆಂಟಿ ಪಂದ್ಯ ನಿನ್ನೆ ತಡವಾಗಿ ಮುಕ್ತಾಯಗೊಂಡ ಕಾರಣ ಆಟಗಾರರಿಗೆ ವಿಶ್ರಾಂತಿ ಪಡೆಯಲು ಹೆಚ್ಚಿನ ಕಾಲಾವಕಾಶ ಲಭಿಸುವುದಿಲ್ಲ, ಹೀಗಾಗಿ ಆಟಗಾರರಿಗೆ ವಿಶ್ರಾಂತಿ ಸಿಗುವಂತೆ ಅನುವು ಮಾಡಿಕೊಡಲು ಪಂದ್ಯವನ್ನು ಒಂದೂವರೆ ಗಂಟೆ ತಡವಾಗಿ ಆರಂಭಿಸಲಾಗುತ್ತಿದೆ.

ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕವೂ ಇದೆ
ಇನ್ನು ಒಂದೆಡೆ ಈ ತಂಡಗಳ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯ ಒಂದೂವರೆ ಗಂಟೆ ತಡವಾಗಿ ಆರಂಭವಾಗುತ್ತಿದ್ದರೆ, ಮತ್ತೊಂದೆಡೆ ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿ ತಿಳಿಸಿದೆ. ಹೌದು, 21ರಿಂದ 22% ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿ ತಿಳಿಸಿರುವುದು ಸದ್ಯ ಕ್ರಿಕೆಟ್ ವೀಕ್ಷಕರಲ್ಲಿ ಮತ್ತಷ್ಟು ನಿರಾಸೆಯನ್ನು ಮೂಡಿಸಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ/ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್
ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಓಡಿಯನ್ ಸ್ಮಿತ್, ಜೇಸನ್ ಹೋಲ್ಡರ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications