For Quick Alerts
ALLOW NOTIFICATIONS  
For Daily Alerts
 

Ind vs WI: ಈ ಶತಕ ರೋಹಿತ್‌ಗೆ ಬಹಳ ಅಗತ್ಯವಿತ್ತು: ಕುತೂಹಲಕಾರಿ ಸಂಗತಿ ವಿವರಿಸಿದ ಅನಿಲ್ ಕುಂಬ್ಳೆ

ಭಾರತ ಹಾಗೂ ವೆಸ್ಟ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅಮೋಘ ಶತಕ ಸಿಡಿಸಿದ್ದಾರೆ. ಯುವ ಆಟಗಾರ ಜೈಸ್ವಾಲ್ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ್ದರೆ ರೋಹಿತ್ ಶರ್ಮಾ 10ನೇ ಟೆಸ್ಟ್ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಸಂದರ್ಬದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದು ಭಾರತದ ನಾಯಕನಿಗೆ ಈ ಶತಕ ಬಹಳ ಅಗತ್ಯವಾಗಿತ್ತು ಎಂದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ ವಿನ್ನಿಂಗ್ ಶತಕ ಬಾರಿಸಿದ ನಂತರ ರೋಹಿತ್ ಶರ್ಮಾ ಫಾರ್ಮ್ ಕಳೆದುಕೊಂಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ರೋಹಿತ್ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ನಲ್ಲಿಯೂ ವೈಫಲ್ಯ ಕಂಡಿದ್ದರು. ಇದು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿತ್ತು.

Ind vs WI: Anil Kumble praises Rohit Sharma batting said this is much needed hundred for him

ಇದೀಗ ಭಾರತ ಮತ್ತೊಂದು ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತನ್ನ ಅಭಿಯಾನ ಆರಂಬಿಸಿದೆ. ಇಂಥಾ ಸಂದರ್ಭದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆಯೂ ಪ್ರಶ್ನೆಗಳು ಏಳಲು ಆರಂಭಿಸಿತ್ತು. ಹೀಗಾಗಿಯೇ ವೆಸ್ಟ್ ಇಂಡೀಸ್ ವಿರುದ್ಧದ ಈ ಸರಣಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಮಾಡು ಇಲ್ಲವೇ ಮಡಿ ಸರಣಿ ಎಂದು ಕೂಡ ವಿಶ್ಲೇಷಣೆಗಳು ನಡೆದಿತ್ತು.

ಇದೀಗ ಈ ಜವಾಬ್ಧಾರಿಯ ಆರಂಭದಲ್ಲಿಯೇ ರೋಹಿತ್ ಯಶಸ್ಸು ಸಾಧಿಸುವ ಮೂಲಕ ನಿರಾಳವಾಗಿದ್ದಾರೆ. ಯುವ ಆಟಗಾರಂಬಿಕ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆಗೆ ದ್ವಿಶತಕದ ಜೊತೆಯಾಟ ಆಡಿದ್ದಲ್ಲದೆ ತಮ್ಮ ವೈಯಕ್ತಿಕ ಶತಕವನ್ನು ಕೂಡ ಪೂರ್ಣಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ಮಾತನಾಡಿದ್ದು ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

"ಪಂದ್ಯದ ಆರಂಭದಿಣದಲೂ ಅವರು ವಿಭಿನ್ನವಾಗಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದ್ದರು. ಇಲ್ಲಿ ಚೆಂಡು ನೇರವಾಗಿ ಬ್ಯಾಟ್‌ಗೆ ಬರುವಂತಾ ಪಿಚ್ ಆಗಿಲಿಲ್ಲ. ರೋಹಿತ್ ವೇಗದ ಎಸೆತವನ್ನು ಇಷ್ಟ ಪಡುತ್ತಾರೆ, ಆದರೂ ವೇಗಿಗಳು ಶಾರ್ಟ್ ಎಸೆತಗಳನ್ನು ಎಸೆಯುತ್ತಿದ್ದರೂ ಅದು ಸರಾಗಾಗಿ ಬ್ಯಾಟ್‌ಗೆ ಬರುತ್ತಿರಲಿಲ್ಲ. ಇಂಥಾ ಸಂದರ್ಭದಲ್ಲಿ ಅವರು ಸಂಯಮದಿಂದ ಇರಲು ಬಯಸಿದರು. ನಂತರ ಒಂದೆರಡು ಸಂದರ್ಭಗಳಲ್ಲಿ ಬೌಲರ್‌ಗಳ ಮೇಲೆರಗಿದ ಸಂದರ್ಭವೂ ಇತ್ತು" ಎಂದು ವಿವರಿಸಿದ್ದಾರೆ ಅನಿಲ್ ಕುಂಬ್ಳೆ.

"ಇದೊಂದು ಸುಂದರವಾದ ಇನ್ನಿಂಗ್ಸ್. ರೋಹಿತ್ ಶರ್ಮಾಗೆ ಇದು ಬಹಳ ಅಗತ್ಯವಾಗಿತ್ತು. ಅವರು ಫಾರ್ಮ್ ಕಳೆದುಕೊಂಡಿದ್ದರು ಎಂಬುದಕ್ಕೆ ಅಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಅವರು ಉತ್ತಮವಾದ ಲಯದಲ್ಲಿ ಕಂಡುಬಂದಿದ್ದರು. ಇದೀಗ ಅವರಿಂದ ಶತಕ ಬಂದಿರುವುದು ಖುಷಿ ನೀಡಿದೆ" ಎಂದಿದ್ದಾರೆ ಅನಿಲ್ ಕುಂಬ್ಳೆ.

ಇನ್ನು ಈ ಪಂದ್ಯದಲ್ಲಿ ಎರಡನೇ ದಿನದಾಟದ ಪ್ರಮುಖಾಂಶವೆಂದರೆ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಅವರ ದಾಖಲೆಯ ಜೊತೆಯಾಟ. ಇವರಿಬ್ಬರು ವೆಸ್ಟ್ ಇಂಡೀಸ್ ತವರಿನಲ್ಲಿ 229 ರನ್‌ಗಳನ್ನು ಪೇರಿಸಿ ಆರಂಭಿಕ ಜೋಡಿಯಿಂದ ಅತಿ ಹೆಚ್ಚಿನ ರನ್‌ಗಳ ಜೊತೆಯಾಟ ನೀಡಿದ್ದಾರೆ. 2006ರಲ್ಲಿ ವಾಸಿಂ ಜಾಫರ್ ಮತ್ತು ದಿನೇಶ್ ಕಾರ್ತಿಕ್ ಮಾಡಿದ ದಾಖಲೆಯನ್ನು ಇದು ಮುರಿದಂತಾಗಿದೆ.

Story first published: Friday, July 14, 2023, 16:33 [IST]
Other articles published on Jul 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+