Ind vs WI 1st Test: ಅಶ್ವಿನ್ ದಾಳಿಗೆ ದಿಕ್ಕಾಪಾಲಾದ ವೆಸ್ಟ್ ಇಂಡೀಸ್: ಮೊದಲ ದಿನ ಭಾರತದ್ದೇ ಆಟ
ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಯಶಸ್ಸು ಸಾಧಿಸಿದೆ. ಮೊದಲ ದಿನದಾಟದಲ್ಲಿ ಭಾರತ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದು ವೆಸ್ಟ್ ಇಂಡೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ದಾಳಿಗೆ ವಿಂಡೀಸ್ ದಾಂಡಿಗರು ಅಕ್ಷರಶಃ ಕಂಗಾಲಾಗಿದ್ದು ಐದು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.
ಈ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆದರೆ ಈ ಅದರ ಯಶಸ್ಸು ಪಡೆಯಲು ವೆಸ್ಟ್ ಇಂಡೀಸ್ ತಂಡಕ್ಕೆ ಸಾಧ್ಯವಾಗಲಿಲ್ಲ. ಆರಂಭಿಕ ಸೆಶನ್‌ನಲ್ಲಿ ಭಾರತದ ಬೌಲಿಂಗ್ ವಿಭಾಗ ಅಮೋಘ ಪ್ರದರ್ಶನ ನೀಡಿದ ಕಾರಣ ವೆಸ್ಟ್ ಇಂಡೀಸ್ ತಂಡದ ನಾಲ್ವರು ದಾಂಡಿಗರು ವಿಕೆಟ್ ಕಳೆದುಕೊಂಡಿದ್ದರು. ಹೀಗಾಗಿ ಮೊದಲ ಸೆಶನ್‌ನಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಯಶಸ್ಸು ಸಾಧಿಸಿತು.

ಮೊದಲ ಸೆಶನ್‌ನಲ್ಲಿ ವೆಸ್ಟ್ ಇಂಡೀಸ್ 68 ರನ್‌ಗಳನ್ನು ಗಳಿಸಿ 4 ವಿಕೆಟ್ ಕಳೆದುಕೊಂಡಿತು. ಇನ್ನು ಎರಡನೇ ಸೆಶನ್‌ನಲ್ಲಿ ವೆಸ್ಟ್ ಇಂಡೀಸ್ ಪರವಾಗಿ ಚೊಚ್ಚಲ ಪಂದ್ಯವನ್ನಾಡುತ್ತಿರುವ ಅಲಿಕ್ ಅತನಜೆ ಉತ್ತಮ ಹೋರಾಟ ಪ್ರದರ್ಶಿಸಿ ಗಮನಸೆಳೆದಿದ್ದರು. ಆದರೆ ಮೊದಲ ಪಂದ್ಯದಲ್ಲಿಯೇ ಅರ್ಧ ಶತಕಗಳಿಸುವ ಅವಕಾಶದಿಂದ ಅವರು ಮಸ್ವಲ್ಪದರಲ್ಲಿ ವಂಚಿತವಾದರು. ಆದರೆ ಈ ಸೆಶನ್‌ನಲ್ಲಿಯೂ ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್ ಕಳೆದುಕೊಂಡಿತು. ಕೊನೆಯ ಎರಡು ವಿಕೆಟ್‌ಗಳನ್ನು ಹೆಚ್ಚು ಶ್ರಮವಿಲ್ಲದೆ ಭಾರತ ಕೊನೆಯ ಸೆಶನ್‌ನಲ್ಲಿ ಪಡೆದುಕೊಂಡಿತು.
ಇನ್ನು ಮೊದಲದಿನದಾಟದಲ್ಲಿ ಟೀಮ್ ಇಂಡಿಯಾ ಪರವಾಗಿ ಬೌಲಿಂಗ್‌ನಲ್ಲಿ ಮಿಂಚಿದ್ದು ಆರ್ ಅಶ್ವಿನ್. ವೆಸ್ಟ್ ಇಂಡೀಸ್ ವಿರುದ್ಧ ಯಾವಾಗಲೂ ಮೇಲುಗೂ ಸಾಧಿಸುವ ಅಶ್ವಿನ್ ಈ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರವೀಂದ್ರ ಜಡೇಜಾ ಮೂರು ವಿಕೆಟ್ ಕಬಳಿಸಿದ್ದು ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ನಂತರ ಬ್ಯಾಟಿಂಗ್ ಆರಂಭಿಸಿರುವ ಭಾರತ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ನಾಯಕ ರೋಹಿತ್ ಶರ್ಮಾ ಜೊತೆಗೆ ಚೊಚ್ಚಲ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ದಿನದಾಟದ ಅಂತ್ಯದಲ್ಲಿ ಭಾರತ 80 ರನ್‌ಗಳನ್ನು ಗಳಿಸಿದ್ದು ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. ಯಶಸ್ವಿ ಜೈಸ್ವಾಲ್ 40 ರನ್ ಹಾಘೂ ರೋಹಿತ್ ಶರ್ಮಾ 30 ರನ್‌ಗಳನ್ನು ಗಳಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್‌ಗಳು ಹಾಗೂ ಮೂವರು ವೇಗಿಗಳೊಂದಿಗೆ ಬಾರತ ಕಣಕ್ಕಿಳಿದಿದೆ. ಶಾರ್ದೂಲ್ ಠಾಕೂರ್, ಜಯ್‌ದೇವ್ ಉನಾದ್ಕಟ್ ಹಾಗೂ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್‌ನಲ್ಲಿ ಆಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ಹಾಗೂ ಇಶಾನ್ ಕಿಶನ್ ಈ ಪಂದ್ಯದ ಮೂಲಕ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ರೇಮನ್ ರೈಫರ್, ಜೆರ್ಮೈನ್ ಬ್ಲಾಕ್‌ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್
ಬೆಂಚ್: ಕಿರ್ಕ್ ಮೆಕೆಂಜಿ, ಶಾನನ್ ಗೇಬ್ರಿಯಲ್
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ಮೊಹಮ್ಮದ್ ಸಿರಾಜ್
ಬೆಂಚ್: ಋತುರಾಜ್ ಗಾಯಕ್ವಾಡ್, ಶ್ರೀಕರ್ ಭರತ್, ಅಕ್ಷರ್ ಪಟೇಲ್, ನವದೀಪ್ ಸೈನಿ, ಮುಖೇಶ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications