ನಾಯಕ ಕೊಹ್ಲಿ ಪುಸ್ತಕ ಓದುತ್ತಿರುವ ಫೋಟೋ ಸಕತ್ ವೈರಲ್

ಆಂಟಿಗಾ, ಆಗಸ್ಟ್ 25: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸುತ್ತಿದೆ. ಈ ನಡುವೆ ಪಂದ್ಯದ ನಡುವೆ ಪೆವಿಲಿಯನ್ ನಲ್ಲಿ ಕುಳಿತು ಕೊಹ್ಲಿ ಪುಸ್ತಕ ಓದುತ್ತಿದ್ದ ಚಿತ್ರ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಟೀವನ್ ಸಿಲ್ವೆಸ್ಟರ್ ಬರೆದಿರುವ 'Detox Your Ego' ಎಂಬ ಪುಸ್ತಕ ಓದುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ. ಈ ಬಗ್ಗೆ ತಮಾಷೆಯಾಗಿ ಕಾಮೆಂಟ್ ಗಳು ಬರುತ್ತಿವೆ. ಈ ಪುಸ್ತಕವನ್ನು ಕೊಹ್ಲಿ ತುಂಬಾ ಮುಂಚೆ ಓದಬೇಕಿತ್ತು. ಇದು ಅವರಿಗೆ ಸರಿಯಾದ ಪುಸ್ತಕ ಎಂದಿದ್ದಾರೆ. ಕೊಹ್ಲಿಗೆ ಈ ಪುಸ್ತಕ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ಪಂದ್ಯದ 2ನೇ ದಿನದಂದು ಆಲ್ ರೌಂಡರ್ ರವೀಂದ್ರ ಜಡೇಜ ಉತ್ತಮ ಆಟ ಪ್ರದರ್ಶಿಸುತ್ತಿದ್ದ ಸಮಯದಲ್ಲಿ ಕೊಹ್ಲಿ ಪುಸ್ತಕ ಓದುತ್ತಾ ಕುಳಿತಿದ್ದರು. ಹಾಗೆ ನೋಡಿದರೆ, ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅವರು ಕೂಡಾ ಈ ಹಿಂದೆ ಅನೇಕ ಬಾರಿ ಪೆವಿಲಿಯನ್ ನಲ್ಲಿ ಪುಸ್ತಕ ಓದುತ್ತಾ ಕುಳಿತುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಶಾಂತ್ ಶರ್ಮ 9ನೇ ಬಾರಿಗೆ ಪಂದ್ಯವೊಂದರಲ್ಲಿ 5 ವಿಕೆಟ್ ಪಡೆದು ಮಿಂಚಿದ್ದರಿಂದ ವಿಂಡೀಸ್ ತಂಡ ಭಾರತಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 297ಕ್ಕೆ ಆಲೌಟ್ ಆಗಿದೆ, ವಿಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 222 ಸ್ಕೋರಿಗೆ ಸರ್ವಪತನ ಕಂಡಿದೆ. ಮೂರನೇ ದಿನದ ಅಂತ್ಯಕ್ಕೆ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 185/3ಸ್ಕೋರ್ ಮಾಡಿದೆ.
ಕೊನೆಗೂ ಕೊಹ್ಲಿಗೆ ಸರಿಯಾದ ಪುಸ್ತಕ ಓದಲಿಕ್ಕೆ ಸಿಕ್ಕಿದೆ
ಕೊಹ್ಲಿಗೆ ಯಾರೋ ಸರಿಯಾದ ಉಡುಗೊರೆಯನ್ನು ನೀಡಿದ್ದಾರೆ.
ಉಡುಗೊರೆ ಕೊಟ್ಟರೂ ಕೊಹ್ಲಿ ಈ ಪುಸ್ತಕ ಓದುವಂತೆ ಪ್ರೇರೇಪಿಸಿದವರು ಯಾರು?
ಕೊಹ್ಲಿ ಓದಿದ ಬಳಿಕ ಈ ಪುಸ್ತಕಕ್ಕೆ ಭಾರತದಲ್ಲಿ ಭಾರಿ ಬೇಡಿಕೆ ಬಂದರೂ ಆಶ್ಚರ್ಯವೇನಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications