ಮುಂಬರುವ ಜುಲೈನಲ್ಲಿ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಒಂದು ತಿಂಗಳ ಕಾಲ ನಡೆಯಲಿರುವ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯ ನೇರಪ್ರಸಾರದ ಡಿಜಿಟಲ್ ಹಕ್ಕುಗಳನ್ನು ಜಿಯೋಸಿನಿಮಾ ಸ್ವಾಧೀನಪಡಿಸಿಕೊಂಡಿದೆ.
ಎಲ್ಲ ಮೂರು ಪ್ರಕಾರದ ಕ್ರಿಕೆಟ್ ಸರಣಿಗಳನ್ನು ಒಳಗೊಂಡಿರುವ ಈ ದ್ವಿಪಕ್ಷೀಯ ಪ್ರವಾಸ, ಜುಲೈ 12ರಿಂದ ಡೊಮಿನಿಕಾದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದೊಂದಿಗೆ ಆರಂಭವಾಗುತ್ತದೆ. ಬಳಿಕ ಟ್ರಿನಿಡಾಡ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವಾಗಿರಲಿದೆ.

ಎರಡು ಪಂದ್ಯಗಳ ಈ ಟೆಸ್ಟ್ ಸರಣಿಯ ಮೂಲಕ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಆವೃತ್ತಿಯ ಅಭಿಯಾನವೂ ಆರಂಭಗೊಳ್ಳಲಿದೆ.
ಇನ್ನು ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 27ರಂದು ಆರಂಭಗೊಳ್ಳಲಿದೆ. ಬಾರ್ಬಡೋಸ್ ಮತ್ತು ಟ್ರಿನಿಡಾಡ್‌ನಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ. ಐದು ಪಂದ್ಯಗಳ ಟಿ20 ಸರಣಿಯು ಆಗಸ್ಟ್ 3ರಂದು ಟ್ರಿನಿಡಾಡ್‌ನಲ್ಲಿ ಶುರುವಾಗಲಿದೆ. 2, 3ನೇ ಪಂದ್ಯಗಳು ಗಯಾನದಲ್ಲಿ ನಡೆದರೆ, ಕೊನೆಯ 2 ಟಿ20 ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿವೆ.
ಟಾಟಾ ಐಪಿಎಲ್ 2023ರ ಸಮಯದಲ್ಲಿ ಅಭೂತಪೂರ್ವ ಮಟ್ಟದ ಯಶಸ್ಸು, ವೀಕ್ಷಣೆಯ ಮೈಲಿಗಲ್ಲು ಸ್ಥಾಪಿಸಿದ ಹಾಗೂ ಎಲ್ಲಾ ದಾಖಲೆಗಳನ್ನು ಛಿದ್ರಗೊಳಿಸಿದ ನಂತರ, ಜಿಯೋಸಿನಿಮಾ ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕ್ರೀಡೆಯನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಉಚಿತವಾಗಿ ಪ್ರಸಾರ ಮಾಡುವುದನ್ನು ಮುಂದುವರಿಸಲಿದೆ.
ಭಾರತ ಸೇರಿದಂತೆ ಜಗತ್ತಿನ ಎಲ್ಲಾ ಕ್ರಿಕೆಟ್ ವೀಕ್ಷಕರು ಕನ್ನಡ, ಇಂಗ್ಲಿಷ್, ಹಿಂದಿ, ಭೋಜ್‌ಪುರಿ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳ ವೀಕ್ಷಕ ವಿವರಣೆಯೊಂದಿಗೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ವೀಕ್ಷಿಸಬಹುದಾಗಿದೆ. ದ್ವಿಪಕ್ಷೀಯ ಸರಣಿಯೊಂದನ್ನು ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.
"ಜಿಯೋಸಿನಿಮಾದ ತಡೆರಹಿತ ಲೈವ್ ಸ್ಟ್ರೀಮಿಂಗ್ ಅನುಭವದಿಂದಾಗಿ, ಹಿಂದೆಂದಿಗೂ ಕೇಳರಿಯದ ಅಚ್ಚರಿಗೊಳಿಸುವಂತಹ ಮಾನದಂಡ ನಿರ್ಮಾಣವಾಯಿತು. ಕ್ರೀಡೆಯು ಡಿಜಿಟಲ್‌ನಲ್ಲಿ ಅತ್ಯುತ್ತಮವಾದ ಅನುಭವವನ್ನು ಪಡೆಯುವಂತಾಗಲು ನಾವು ತಾಂತ್ರಿಕ ಸಾಮರ್ಥ್ಯದ ಗಡಿಗಳನ್ನು ದೂರ ತಳ್ಳಿದೆವು".
"ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ- 2023ರೊಂದಿಗೆ ನಾವು ಮುಂದೆ ಸಾಗುತ್ತಿದ್ದೇವೆ ಮತ್ತು ನಮ್ಮ ವೀಕ್ಷಕರಿಗೆ ವಿಶ್ವ ದರ್ಜೆಯ ನೇರಪ್ರಸಾರವನ್ನು ನೀಡುತ್ತೇವೆ," ಎಂದು ವಯಾಕಾಮ್18ನ ಸ್ಟ್ರಾಟಜಿ, ಪಾಲುದಾರಿಕೆ ಮತ್ತು ಸ್ವಾಧೀನಗಳ ಕ್ರೀಡಾ ಮುಖ್ಯಸ್ಥ ಹರ್ಷ್ ಶ್ರೀವಾಸ್ತವ ತಿಳಿಸಿದ್ದಾರೆ.
2023ರ ಟಾಟಾ ಐಪಿಎಲ್ ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಡಿಜಿಟಲ್ ಪಂದ್ಯಾವಳಿ ಆಗಿದೆ. ಜಿಯೋಸಿನಿಮಾದಲ್ಲಿ 12 ಕೋಟಿಗೂ ಹೆಚ್ಚು ವೀಕ್ಷಕರು ಇದುವರೆಗೆ ಅತ್ಯಂತ ರೋಮಾಂಚನಕಾರಿ 2023ರ ಐಪಿಎಲ್ ಫೈನಲ್ ಪಂದ್ಯವನ್ನು ವೀಕ್ಷಿಸಿದರು.
ಟಾಟಾ ಐಪಿಎಲ್ 2023ರ ರೋಚಕತೆ ಮತ್ತು ಮನರಂಜನೆಯು ಫೈನಲ್‌ನಲ್ಲಿ ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಇದೇ ವೇಳೆ ಜಿಯೋಸಿನಿಮಾದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ವೀಕ್ಷಕರು ಏಕಕಾಲದಲ್ಲಿ 3.21 ಕೋಟಿ ವೀಕ್ಷಕರು ವೀಕ್ಷಿಸಿದ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ.