IND vs WI: ಪ್ರಥಮ ಏಕದಿನ ಪಂದ್ಯದ ಸಂಭಾವ್ಯ ಆಡುವ ಬಳಗ ಮತ್ತು ಡ್ರೀಮ್ ಪ್ರೆಡಿಕ್ಷನ್

ಇಂಗ್ಲೆಂಡ್ ಪ್ರವಾಸ ಕೈಗೊಂಡು ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಸರಣಿಗಳಲ್ಲಿ ಆಂಗ್ಲರ ವಿರುದ್ಧ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು, ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟ ನಡೆಸಲಿದೆ.
ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಿಂದ ಹೊರಗುಳಿದಿದ್ದಾರೆ. ಏಕದಿನ ಸರಣಿಗೆ ದೀರ್ಘಾವಧಿ ನಾಯಕ ರೋಹಿತ್ ಶರ್ಮಾ ಕೂಡ ವಿಶ್ರಾಂತಿ ಕಾರಣದಿಂದಾಗಿ ಅಲಭ್ಯರಾಗಲಿದ್ದು, ಶಿಖರ್ ಧವನ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಏಕದಿನ ಸರಣಿ ಮುಕ್ತಾಯವಾದ ನಂತರ ರೋಹಿತ್ ಶರ್ಮಾ ತಂಡಕ್ಕೆ ಮರಳಲಿದ್ದು, ಟಿ ಟ್ವೆಂಟಿ ಸರಣಿಯಲ್ಲಿ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಮೊದಲಿಗೆ ಇತ್ತಂಡಗಳ ನಡುವೆ ಏಕದಿನ ಸರಣಿ ನಡೆಯಲಿದ್ದು, ಪ್ರಥಮ ಪಂದ್ಯ ನಾಳೆ ( ಜುಲೈ 22 ) ಪೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕದಿನ ಸರಣಿಗೆ ಈಗಾಗಲೇ ಎರಡೂ ತಂಡಗಳು ಪ್ರಕಟವಾಗಿದ್ದು, ಪ್ರಥಮ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಎರಡೂ ತಂಡಗಳ ಸಂಭಾವ್ಯ ಆಡುವ ಬಳಗಗಳು ಮತ್ತು ಪಂದ್ಯದ ಡ್ರೀಮ್ ಟೀಮ್ ಪ್ರೆಡಿಕ್ಷನ್ ಈ ಕೆಳಕಂಡಂತಿದೆ.

ಭಾರತ ಸಂಭಾವ್ಯ ಆಡುವ ಬಳಗ
ರವೀಂದ್ರ ಜಡೇಜಾ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಪಂದ್ಯದಿಂದ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.
1 ಶಿಖರ್ ಧವನ್ (ನಾಯಕ), 2 ಇಶಾನ್ ಕಿಶನ್ (ವಿಕೆಟ್ ಕೀಪರ್), 3 ಸಂಜು ಸ್ಯಾಮ್ಸನ್, 4 ಸೂರ್ಯಕುಮಾರ್ ಯಾದವ್, 5 ಶ್ರೇಯಸ್ ಅಯ್ಯರ್, 6 ದೀಪಕ್ ಹೂಡಾ, 7 ಅಕ್ಷರ್ ಪಟೇಲ್ 8 ಶಾರ್ದೂಲ್ ಠಾಕೂರ್, 9 ಮೊಹಮ್ಮದ್ ಸಿರಾಜ್, 10 ಅವೇಶ್ ಖಾನ್, 11 ಯುಜ್ವೇಂದ್ರ ಚಾಹಲ್.

ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ ಬಳಗ
1 ಶಾಯ್ ಹೋಪ್, 2 ಬ್ರಾಂಡನ್ ಕಿಂಗ್, 3 ಶಮರ್ ಬ್ರೂಕ್ಸ್, 4 ಕೀಸಿ ಕಾರ್ಟಿ, 5 ನಿಕೋಲಸ್ ಪೂರನ್ (ಕ್ಯಾಪ್ಟನ್, ವಿಕೆಟ್ ಕೀಪರ್), 6 ರೋವ್‌ಮನ್ ಪೊವೆಲ್, 7 ಜೇಸನ್ ಹೋಲ್ಡರ್, 8 ಕೀಮೋ ಪಾಲ್, 9 ಅಕೇಲ್ ಹೋಸಿನ್, 10 ಅಲ್ಜಾರಿ ಜೋಸೆಫ್, 11 ಜೇಡನ್ ಸೀಲ್ಸ್.

ಡ್ರೀಮ್ ಟೀಮ್ ಪ್ರೆಡಿಕ್ಷನ್
1 ಶಿಖರ್ ಧವನ್, 2 ಶಾಯ್ ಹೋಪ್, 3 ಇಶಾನ್ ಕಿಶನ್, 4 ಸೂರ್ಯಕುಮಾರ್ ಯಾದವ್, 5 ಶ್ರೇಯಸ್ ಅಯ್ಯರ್, 6 ರೋವ್ಮನ್ ಪೊವೆಲ್, 7 ಅಕ್ಷರ್ ಪಟೇಲ್, 8 ಜೇಸನ್ ಹೋಲ್ಡರ್, 9 ಶಾರ್ದೂಲ್ ಠಾಕೂರ್, 10 ಮೊಹಮ್ಮದ್ ಸಿರಾಜ್, 11 ಯುಜುವೇಂದ್ರ ಚಾಹಲ್.
ನಾಯಕ: ಶಿಖರ್ ಧವನ್, ಉಪನಾಯಕ: ನಿಕೋಲಸ್ ಪೂರನ್, ವಿಕೆಟ್ ಕೀಪರ್: ಇಶಾನ್ ಕಿಶನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications